#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Gautam Gambhir: ಕೋಚ್‌ ಗಂಭೀರ್ ಬುದ್ಧಿಹೀನ ಪ್ರಯೋಗಕ್ಕೆ ರಾಹುಲ್‌ ಬಲಿಪಶು

ಮೊದಲನೇ ಏಕದಿನ ಪಂದ್ಯದಲ್ಲಿ ಎರಡು ರನ್‌ಗೆ ವಿಕೆಟ್‌ ಒಪ್ಪಿಸಿದ್ದ ಕೆಎಲ್‌ ರಾಹುಲ್‌ ನಂತರ, ಎರಡನೇ ಏಕದಿನ ಪಂದ್ಯದಲ್ಲಿ 10 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ನಾಳೆ(ಬುಧವಾರ) ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ರಾಹುಲ್‌ ಆಡುವುದು ಅನುಮಾನ ಎನ್ನಲಾಗಿದೆ.

ಕೋಚ್‌ ಗಂಭೀರ್ ಬುದ್ಧಿಹೀನ ಪ್ರಯೋಗಕ್ಕೆ ರಾಹುಲ್‌ ಬಲಿಪಶು

Profile Abhilash BC Feb 11, 2025 11:20 AM

ನವದೆಹಲಿ: ಪ್ರತಿಭಾವಂತ ಬ್ಯಾಟರ್‌ ಕೆಎಲ್ ರಾಹುಲ್(KL Rahul) ಬ್ಯಾಟಿಂಗ್‌ ವೈಫಲ್ಯಕ್ಕೆ ಟೀಮ್‌ ಮ್ಯಾನೆಜ್‌ಮೆಂಟ್ ಮತ್ತು ಕೋಚ್‌ ಗೌತಮ್ ಗಂಭೀರ್(Gautam Gambhir) ಅವರ ಬುದ್ಧಿಹೀನ ಪ್ರಯೋಗವೇ ಮುಖ್ಯ ಕಾರಣ ಎಂದು ಹಿರಿಯ ಆಟಗಾರರು ಆರೋಪಿಸಿದ್ದಾರೆ. ಜತೆಗೆ ರಾಹುಲ್‌ ಅಭಿಮಾನಿಗಳು ಕೂಡ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೀಮ್‌ ಇಂಡಿಯಾದ ಮಾಜಿ ಆಟಗಾರ ಶ್ರೀಕಾಂತ್‌ ಅವರು ಕೋಚ್‌ ಗಂಭೀರ್‌ಗೆ ನೇರ ಪ್ರಶ್ನೆ ಮಾಡಿದ್ದು, 'ಹೇ ಗಂಭೀರ್ ನೀನು ಮಾಡುತ್ತಿರುವುದು ಸರಿಯಲ್ಲ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ಉತ್ತಮ ಫಾರ್ಮ್‌ನಲ್ಲಿಲ್ಲದಿದ್ದರೆ ಅದಕ್ಕೆ ನೀವೆ ಕಾರಣ. ಎರಡೂ ಏಕದಿನ ಪಂದ್ಯಗಳಲ್ಲಿ ರಾಹುಲ್ ಅವರನ್ನು ಆರನೇ ಕ್ರಮಾಂಕದಲ್ಲಿ ಕಳುಹಿಸಿದ ನಿಮ್ಮ ಪ್ರಯೋಗ ನನಗೆ ಅರ್ಥವಾಗುತ್ತಿಲ್ಲ. ಅವರ ದಾಖಲೆಯನ್ನೊಮ್ಮೆ ನೋಡಿ, ಅವರು 5ನೇ ಸ್ಥಾನದಲ್ಲಿ ಅತ್ಯುತ್ತವಾಗಿ ಬ್ಯಾಟ್‌ ಬೀಸುತ್ತಾರೆ. ಅವರ ಅಂಕಿಅಂಶಗಳು ಅನೇಕ ಆಟಗಾರರಿಗಿಂತ ಉತ್ತಮವಾಗಿವೆ. ಆದರೆ ತಂಡದ ಆಡಳಿತ ಮಂಡಳಿ ಅವರ ಮೇಲೆ ಏನು ಪ್ರಯೋಗ ಮಾಡುತ್ತಿದೆ ಎಂಬುದು ನನಗೆ ತಿಳಿದಿಲ್ಲ. ಅವರಿಗೆ ಐದನೇ ಸ್ಥಾನದಲ್ಲಿ ಅವಕಾಶ ನೀಡುವ ಬದಲು, ಆರನೇ ಸ್ಥಾನದಲ್ಲಿ ಆಡುವಂತೆ ಮಾಡಲಾಗುತ್ತಿದೆ. ಇದು ಎಷ್ಟು ಸರಿ' ಎಂದು ಪ್ರಶ್ನಿಸಿದರು.

ಇದನ್ನೂ ಓದಿ IND vs ENG: 2 ರನ್‌ಗೆ ವಿಕೆಟ್‌ ಒಪ್ಪಿಸಿದ ಕೆಎಲ್‌ ರಾಹುಲ್‌ ವಿರುದ್ಧ ಸುನೀಲ್‌ ಗವಾಸ್ಕರ್‌ ಕಿಡಿ!

ಮೊದಲನೇ ಏಕದಿನ ಪಂದ್ಯದಲ್ಲಿ ಎರಡು ರನ್‌ಗೆ ವಿಕೆಟ್‌ ಒಪ್ಪಿಸಿದ್ದ ಕೆಎಲ್‌ ರಾಹುಲ್‌ ನಂತರ, ಎರಡನೇ ಏಕದಿನ ಪಂದ್ಯದಲ್ಲಿ 10 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದರು. ನಾಳೆ(ಬುಧವಾರ) ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ರಾಹುಲ್‌ ಆಡುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಮೂರನೇ ಪಂದ್ಯದಲ್ಲಿ ರಾಹುಲ್‌ಗೆ ಆಡುವ ಅವಕಾಶ ಸಿಕ್ಕಿ ಇಲ್ಲಿಯೂ ಅವರು ವೈಫಲ್ಯ ಅನುಭವಿಸಿದರೆ, ಖಚಿತವಾಗಿಯೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಕೆಎಲ್‌ ರಾಹುಲ್‌ ಬದಲು ರಿಷಭ್‌ ಪಂತ್‌ ವಿಕೆಟ್‌ ಕೀಪರ್‌ ಆಗಿ ಆಡಬಹುದು. ರಿಷಭ್‌ ಪಂತ್‌ ಉತ್ತಮ ಪ್ರದರ್ಶನ ತೋರಿದರೆ, ಕೆಎಲ್‌ ರಾಹುಲ್‌ ಟೂರ್ನಿಯುದ್ದಕ್ಕೂ ಬೆಂಚ್‌ ಕಾಯಬೇಕಾಗಬಹುದು.

ಬುಮ್ರಾ ಭವಿಷ್ಯ ಇಂದು ನಿರ್ಧಾರ

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜಸ್‌ಪ್ರೀತ್‌ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲಿದ್ದಾರೊ ಇಲ್ಲವೊ ಎಂಬುದು (ಇಂದು) ಮಂಗಳವಾರ ಗೊತ್ತಾಗಲಿದೆ. ಸದ್ಯ ಬುಮ್ರಾ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಈಗಾಗಲೇ ಅವರ ಗಾಯದ ಪ್ರಮಾಣದ ಬಗ್ಗೆ ಬಿಸಿಸಿಐಗೆ ವರದಿ ಸಲ್ಲಿಕೆಯಾಗಿದೆ.