ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ranji Trophy: ಮುಂಬೈ ವಿರುದ್ಧ ಗೆದ್ದು ಸತತ ಎರಡನೇ ಬಾರಿ ಫೈನಲ್‌ಗೇರಿದ ವಿದರ್ಭ!

ವಿದರ್ಭ ಕ್ರಿಕೆಟ್ ತಂಡವು ಮುಂಬೈ ತಂಡವನ್ನು ತನ್ನ ತವರು ನೆಲದಲ್ಲಿ 80 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ವಿದರ್ಭ ತಂಡ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದೆ. ಗುಜರಾತ್‌ ವಿರುದ್ದ ಸೆಮಿಫೈನಲ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಆಧಾರದ ಮೇಲೆ ಕೇರಳ ತಂಡ ಚೊಚ್ಚಲ ಫೈನಲ್‌ ಪ್ರವೇಶ ಮಾಡಿದೆ.

ಮುಂಬೈಗೆ ಮರ್ಮಾಘಾತ ನೀಡಿದ ವಿದರ್ಭ, ಮೊದಲ ಬಾರಿ ಫೈನಲ್‌ಗೇರಿದ ಕೇರಳ!

ರಣಜಿ ಫೈನಲ್‌ ತಲುಪಿದ ಕೇರಳ, ವಿದರ್ಭ ತಂಡಗಳು!

Profile Ramesh Kote Feb 21, 2025 5:51 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎರಡು ಸೆಮಿಫೈನಲ್‌ ಪಂದ್ಯಗಳು ಶುಕ್ರವಾರ ಅಂತ್ಯವಾಗಿವೆ. ಮೊದಲನೇ ಸೆಮಿಫೈನಲ್‌ ಪಂದ್ಯದಲ್ಲಿ ಗುಜರಾತ್‌ ತಂಡದ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದ ಕೇರಳ ತಂಡ ಮೊಟ್ಟ ಮೊದಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇನ್ನು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ 42 ಬಾರಿ ಚಾಂಪಿಯನ್‌ ಮುಂಬೈ ತಂಡವನ್ನು ಮಣಿಸಿದ ವಿದರ್ಭ ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶ ಮಾಡಿದೆ.

ನಾಗ್ಪುರದ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರಿಡಾಂಗಣದಲ್ಲಿ ಶುಕ್ರವಾರ ಅಂತ್ಯವಾದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ವಿದರ್ಭ, ಬಲಿಷ್ಠ ಮುಂಬೈ ತಂಡವನ್ನು 80 ರನ್‌ಗಳಿಂದ ಮಣಿಸಿತು. ಆ ಮೂಲಕ 2024-25ರ ರಣಜಿ ಟ್ರೋಫಿಯ ಫೈನಲ್‌ಗೆ ಪ್ರವೇಶಿಸಿದ್ದಲ್ಲದೆ, 2023-24ರ ರಣಜಿ ಟ್ರೋಫಿಯ ಫೈನಲ್‌ ಪಂದ್ಯದಲ್ಲಿನ ಸೋಲಿಗೆ ಸೇಡನ್ನು ಮುಂಬೈ ಎದುರು ತೀರಿಸಿಕೊಂಡಿತು.

Ranji Trophy: ಸೌರಾಷ್ಟ್ರ ಸೋಲಿನ ಬೆನ್ನಲ್ಲೆ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಶೆಲ್ಡನ್ ಜಾಕ್ಸನ್!

ಎರಡನೇ ಸೆಮಿಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ವಿದರ್ಭ ತಂಡ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 383 ರನ್‌ಗಳನ್ನು ಕಲೆ ಹಾಕಿತ್ತು. ಇದರಲ್ಲಿ ಡ್ಯಾನಿಶ್ ಮಾಲೆವಾರ್ 79 ರನ್‌ಗಳು ಮತ್ತು ಧ್ರುವ್ ಶೋರೆ 74 ರನ್‌ಗಳನ್ನು ಕಲೆ ಹಾಕಿದ್ದರು. ಈ ಇನಿಂಗ್ಸ್‌ನಲ್ಲಿ ಮುಂಬೈ ಪರ ಶಿವಂ ದುಬೆ 5 ವಿಕೆಟ್‌ ಸಾಧನೆ ಮಾಡಿದ್ದರು.



ಇದಕ್ಕೆ ಉತ್ತರವಾಗಿ ಆಕಾಶ್ ಆನಂದ್ (106 ರನ್‌) ಅವರ ಶತಕದ ಹೊರತಾಗಿಯೂ ಮುಂಬೈ 270 ರನ್‌ಗಳಿಗೆ ಆಲೌಟ್ ಆಗಿತ್ತು. ಪಾರ್ಥ್‌ ರಾಖಡೆ 4 ವಿಕೆಟ್ ಪಡೆದು ವಿದರ್ಭ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಇದಾದ ನಂತರ, ವಿದರ್ಭ ದ್ವಿತೀಯ ಇನಿಂಗ್ಸ್‌ನಲ್ಲಿ 292 ರನ್‌ಗಳನ್ನು ಕಲೆ ಹಾಕಿತ್ತು. ಯಶ್ ರಾಥೋಡ್ 151 ರನ್ ಗಳಿಸಿದರೆ, ಅಕ್ಷರ್ ವಾಡೇಕರ್ 52 ರನ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಮುಂಬೈ ಪರ ಶ್ಯಾಮ್ಸ್ ಮುಲಾನಿ 6 ವಿಕೆಟ್ ಪಡೆದರೆ, ತನುಷ್ ಕೋಟ್ಯಾನ್ 3 ವಿಕೆಟ್ ಪಡೆದರು.

Ranji Trophy: ತಮ್ಮ 200ನೇ ಪ್ರಥಮ ದರ್ಜೆ ಪಂದ್ಯದಲ್ಲಿ ಶತಕ ಸಿಡಿಸಿದ ಅಜಿಂಕ್ಯ ರಹಾನೆ!

ಬೃಹತ್ ಮೊತ್ತದ ಗುರಿ ಹಿಂಬಾಲಿಸಿದ ಮುಂಬೈ ಕಳಪೆ ಆರಂಭ ಪಡೆದರೂ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಸಹಾಯದಿಂದ 300ರ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಶಾರ್ದುಲ್ ಠಾಕೂರ್ 66 ರನ್, ಶ್ಯಾಮ್ಸ್‌ ಮುಲಾನಿ 46 ರನ್, ತನುಷ್ ಕೋಟ್ಯಾನ್ 26 ರನ್, ಮೋಹಿತ್ ಅವಸ್ಥಿ 34 ರನ್ ಮತ್ತು ಡಯಾಸ್ ಅಜೇಯ 23 ರನ್ ಗಳಿಸಿದರೂ ಮುಂಬೈ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ತಂಡ 325 ರನ್‌ಗಳಿಗೆ ಆಲ್‌ಔಟ್‌ ಆಯಿತು. ಈ ಮೂಲಕ ಫೈನಲ್‌ನಲ್ಲಿ ವಿದರ್ಭ ತಂಡ ಕೇರಳ ತಂಡವನ್ನು ಎದುರಿಸಲಿದೆ.



ಚೊಚ್ಚಲ ಫೈನಲ್‌ ತಲುಪಿದ ಕೇರಳ

ಮೊಹಮ್ಮದ್‌ ಅಝರುದ್ದೀನ್‌ ಅವರ ಭರ್ಜರಿ ಬ್ಯಾಟಿಂಗ್‌ ಬಲದಿಂದ ಕೇರಳ ತಂಡ, ಮೊದಲನೇ ಸೆಮಿಫೈನಲ್‌ನಲ್ಲಿ ಎದುರಾಳಿ ಗುಜರಾತ್‌ ವಿರುದ್ಧ ಪ್ರಾಬಲ್ಯ ಸಾಧಿಸಿತು. ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೂ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆ ಫಲವಾಗಿ ಕೇರಳ ತಂಡ, ರಣಜಿ ಟ್ರೋಫಿ ಟೂರ್ನಿಯಲ್ಲಿ ಇದೇ ಮೊಟ್ಟ ಮೊದಲ ಬಾರಿ ಫೈನಲ್‌ಗೆ ಪ್ರವೇಶ ಮಾಡಿದೆ. ಮೊದಲು ಬ್ಯಾಟ್‌ ಮಾಡಿದ್ದ ಕೇರಳ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 457 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಪ್ರಥಮ ಇನಿಂಗ್ಸ್‌ ಮಾಡಿದ್ದ ಗುಜರಾತ್‌ ತಂಡ, 455 ರನ್‌ಗಳನ್ನು ಗಳಿಸಿದರೂ ಕೇವಲ 2 ರನ್‌ ಅಂತರದಲ್ಲಿ ಮುನ್ನಡೆ ಸಾಧಿಸುವ ಅವಕಾಶವನ್ನು ತಪ್ಪಿಸಿಕೊಂಡಿತ್ತು. ಬಳಿಕ ದ್ವಿತೀಯ ಇನಿಂಗ್ಸ್‌ನಲ್ಲಿ ಕೇರಳ ತಂಡ 114 ರನ್‌ಗಳನ್ನು ಗಳಿಸಿ ಡಿಕ್ಲೆರ್‌ ಘೋಷಿಸಿತ್ತು. ಐದನೇ ದಿನವಾದ ಶುಕ್ರವಾರ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.