ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಯಾಂಸಂಸ್ ಇನೋವೇಶನ್ ಕ್ಯಾಂಪಸ್ ಉದ್ಘಾಟಿಸಿದ ಸ್ಯಾಂಸಂಗ್

ಸೆಪ್ಟೆಂಬರ್ 2022ದಲ್ಲಿ ಪ್ರಾರಂಭವಾದ SIC ಪ್ರೊಗ್ರಾಮ್ ಕೃತಕ ಬುದ್ಧಿಮತ್ತೆ/ಯಂತ್ರಕಲಿಕೆ, ಬಿಗ್ ಡೇಟಾ, ಮತ್ತು ಕೋಡಿಂಗ್ ಅಂಡ್ ಪ್ರೊಗ್ರಾಮಿಂಗ್ ಒಳಗೊಂಡ ಮೂಲ ತಂತ್ರಜ್ಞಾನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸಿದ ವಿಶಾಲ ಪಠ್ಯಕ್ರಮವನ್ನು ಒಳಗೊಂಡಿದ್ದು, ಭಾರತ ದ ಯುವಜನತೆಯನ್ನು ಉದ್ಯಮ-ಸಿದ್ಧವನ್ನಾಗಿ ಮಾಡುವುದಕ್ಕಾಗಿಯೇ ಸ್ಯಾಂಸಂ ಗ್‌ನ ಜಾಗತಿಕ R&D ತಜ್ಞರಿಂದ ವಿಶೇಷವಾಗಿ ವಿನ್ಯಾಸಗೊಂಡಿದೆ

ಸ್ಯಾಂಸಂಗ್ ಇನೋವೇಶನ್ ಕ್ಯಾಂಪಸ್ ಉದ್ಘಾಟಿಸಿದ ಸ್ಯಾಂಸಂಗ್

Profile Ashok Nayak Feb 21, 2025 10:25 PM

ಕರ್ನಾಟಕದ ಪ್ರಪ್ರಥಮ ಮಹಿಳೆಯರು-ಮಾತ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಯಾಂಸಂಸ್ ಇನೋವೇಶನ್ ಕ್ಯಾಂಪಸ್ ಉದ್ಘಾಟಿಸಿದ ಸ್ಯಾಂಸಂಗ್ R&D ಇನ್ಸ್‌ಟಿಟ್ಯೂಟ್ ಇಂಡಿಯಾ, ಬೆಂಗಳೂರು

ಪ್ರಧಾನ ಸಿಎಸ್‌ಆರ್ ಉಪಕ್ರಮವು ಎಐ, ಐಒಟಿ, ಬಿಗ್ ಡೇಟಾ ಮತ್ತು ಕೋಡಿಂಗ್ ಹಾಗೂ ಪ್ರೊಗ್ರಾಮಿಂಗ್‌ನಲ್ಲಿ ಭಾರತೀಯ ಯುವಜನತೆಗೆ ತರಬೇತಿ ಒದಗಿಸಿ ಅವರನ್ನು ಉದ್ಯೋಗ-ಸಿದ್ಧ ಮಾಡಲಿದೆ.

ಸ್ಯಾಂಸಂಗ್‌ನ ಈ ಉಪಕ್ರಮವು, ತಂತ್ರಜ್ಞಾನದಲ್ಲಿ ಮಹಿಳಾ ನಾಯಕರುಗಳ ಹೊಸ ಪೀಳಿಗೆಯನ್ನು ಪ್ರೋತ್ಸಾಹಿಸಬೇಕೆನ್ನುವ ಅದರ ಬದ್ಧತೆಯ ಭಾಗವಾಗಿದೆ.

ಬೆಂಗಳೂರು: ಸ್ಯಾಂಸಂಗ್ R&D ಇನ್ಸ್‌ಟಿಟ್ಯೂಟ್ ಇಂಡಿಯಾ, ಬೆಂಗಳೂರು (SRI-B), ಕರ್ನಾಟಕದ ಪ್ರಪ್ರಥಮ ಮಹಿಳೆಯರು-ಮಾತ್ರ ಇಂಜಿನಿಯರಿಂಗ್ ಕಾಲೇಜ್ ಆದ ಮೈಸೂ ರಿನ ಗೀತಾ ಶಿಶು ಶಿಕ್ಷಣ ಸಂಘ(GSSS) ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಸ್ಯಾಂಸಂಗ್‌ನ ಪ್ರಧಾನ ಜಾಗತಿಕ ನಾಗರಿಕತ್ವ ಪ್ರೊಗ್ರಾಮ್ ಆದ ಸ್ಯಾಂ ಸಂಗ್ ಇನೋವೇಶನ್ ಕ್ಯಾಂಪಸ್ (SIC)ಅನ್ನು ಉದ್ಘಾಟಿಸಿತು. ಈ ಉಪಕ್ರಮವು, ತಂತ್ರ ಜ್ಞಾನದಲ್ಲಿ ಮಹಿಳಾ ನಾಯಕರ ಹೊಸ ಪೀಳಿಗೆಯನ್ನು ಪ್ರೋತ್ಸಾಹಿಸುವ ಮತ್ತು STEM ನಲ್ಲಿ ಲಿಂಗ ಸಮಾನತೆಯನ್ನು ಮುಂದಕ್ಕೆ ಕೊಂಡೊಯ್ಯುವ ಸ್ಯಾಂಸಂಗ್‌ನ ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Samsung: ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್ ಮಾನಿಟರ್‌ಗಳಿಗಾಗಿ, ಎಂಬೈಬ್ ನ ಎಐ-ಚಾಲಿತ ಕಲಿಕಾ ವೇದಿಕೆ

ಸೆಪ್ಟೆಂಬರ್ 2022ದಲ್ಲಿ ಪ್ರಾರಂಭವಾದ SIC ಪ್ರೊಗ್ರಾಮ್ ಕೃತಕ ಬುದ್ಧಿಮತ್ತೆ/ಯಂತ್ರಕಲಿಕೆ, ಬಿಗ್ ಡೇಟಾ, ಮತ್ತು ಕೋಡಿಂಗ್ ಅಂಡ್ ಪ್ರೊಗ್ರಾಮಿಂಗ್ ಒಳಗೊಂಡ ಮೂಲ ತಂತ್ರಜ್ಞಾನ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸಿದ ವಿಶಾಲ ಪಠ್ಯಕ್ರಮವನ್ನು ಒಳಗೊಂಡಿದ್ದು, ಭಾರತದ ಯುವಜನತೆಯನ್ನು ಉದ್ಯಮ-ಸಿದ್ಧವನ್ನಾಗಿ ಮಾಡುವುದಕ್ಕಾಗಿಯೇ ಸ್ಯಾಂಸಂ ಗ್‌ನ ಜಾಗತಿಕ R&D ತಜ್ಞರಿಂದ ವಿಶೇಷವಾಗಿ ವಿನ್ಯಾಸಗೊಂಡಿದೆ. ಈ ಉಪಕ್ರಮದಡಿ ದಾಖಲಾಗುವ ವಿದ್ಯಾರ್ಥಿಗಳು, ತರಗತಿ ಸೌಲಭ್ಯದಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್ ತರಬೇತಿಗೆ ಒಳಗಾಗುವ ಮತ್ತು SRI-B ಹಾಗೂ GSSS ಇನ್ಸ್‌ಟಿಟ್ಯೂಟ್‌ನ ಮಾರ್ಗದರ್ಶಕರ ಮಾರ್ಗದರ್ಶನದಡಿ ವಿನೂತನ ಯೋಜನೆಗಳ ಮೇಲೆ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ.

"ಸ್ಯಾಸಂಗ್‌ನಲ್ಲಿ ನಾವು ಅವಕಾಶಗಳು ಒಳಗೊಳ್ಳುವಂತಿದ್ದಾಗ ಆವಿಷ್ಕಾರ ಬೆಳೆಯುತ್ತದೆ ಎಂದು ನಂಬಿದ್ದೇವೆ. ಯುವ ಮನಸ್ಸುಗಳು, ಶೋಧಿಸಿ, ಪ್ರಯೋಗ ನಡೆಸಿ ಮತ್ತು ತಂತ್ರಜ್ಞಾ ನದ ಮಿತಿಗಳನ್ನು ಮೀರುವ ಸ್ಥಳವಾದ ಕರ್ನಾಟಕದ ಪ್ರಪ್ರಥಮ ಮಹಿಳಾ ಇಂಜಿನಿಯ ರಿಂಗ್ ಕಾಲೇಜಿನಲ್ಲಿಸ್ಯಾಂಸಂಗ್ ಇನೋವೇಶನ್ ಕ್ಯಾಂಪಸ್ ಉದ್ಘಾಟಿಸುತ್ತಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಸರ್ಕಾರದ #DigitalIndia ಮತ್ತು #MakeinIndia ಪ್ರಚಾರಗಳಿಗೆ ಅನುಗುಣವಾಗಿ, ದೇಶದ ಒಳಗಿನಿಂದ ತಂತ್ರಜ್ಞಾನ ಪ್ರಗತಿಯನ್ನು ಮುನ್ನಡೆಸಲು ವಿದ್ಯಾ ರ್ಥಿ ಗಳಿಗೆ ಬಲ ಒದಗಿಸುತ್ತದೆ. ಮಹಿಳೆಯರು ಸೃಷ್ಟಿಸಿ, ಆವಿಷ್ಕಾರ ನಡೆಸಿ ಹಾಗೂ ಜಗತ್ತನ್ನು ತಂತ್ರಜ್ಞಾನದೊಂದಿಗೆ ಪರಿವರ್ತಿತಗೊಳಿಸುತ್ತಿರುವಂತಹ ಸಂದರ್ಭದಲ್ಲಿ ಅವರನ್ನು ಭವಿಷ್ಯತ್ತಿನ ನಾಯಕರುಗಳನ್ನಾಗಿ ರೂಪಿಸುವ ನಿರೀಕ್ಷೆ ಹೊಂದಿದ್ದೇವೆ.” ಎಂದು ಹೇಳಿದರು, S RI-Bದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಪೊರೇಟ್ ಉಪಾಧ್ಯಕ್ಷ ಮೋಹನ್ ರಾವ್ ಗೋಲಿ.

2024ನಲ್ಲಿ ಸ್ಯಾಂಸಂಗ್ ಸೌತ್‍೬ವೆಸ್ಟ್ ಏಶ್ಯ, 3,500 ವಿದ್ಯಾರ್ಥಿಗಳನ್ನು ದಾಖಲು ಮಾಡಿ ಕೊಳ್ಳುವ ಮೂಲಕ ತನ್ನ SIC ತಲುಪುವಿಕೆಯನ್ನು ವಿಸ್ತರಿಸಿಕೊಂಡಿದ್ದು ಇದು 2023ದಲ್ಲಿ 3,000 ಇತ್ತು. SIC ಮತ್ತು ಸ್ಯಾಂಸಂಗ್ ಸಾಲ್ವ್ ಫಾರ್ ಟುಮಾರೋ(SFT) ಮುಂತಾದ ಉಪ ಕ್ರಮಗಳ ಮೂಲಕ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಗೆ ಸ್ಯಾಂಸಂಗ್‌ನ ನಿರಂತರ ಬದ್ಧತೆಯು ಭಾರತದ ಭವಿಷ್ಯತ್ತಿನ-ತಂತ್ರಜ್ಞಾನ ನಾಯಕರುಗಳನ್ನು ಪೋಷಿಸಿ ತರಬೇತು ಗೊಳಿಸಬೇಕೆನ್ನುವ ಅಧರ ಧ್ಯೇಯೋದ್ದೇಶವನ್ನು ಎತ್ತಿ ಹಿಡಿಯುತ್ತದೆ. ಈ ಪ್ರೊಗ್ರಾಮ್‌ಗಳ ಮೂಲಕ ಸ್ಯಾಂಸಂಗ್ ಭಾರತದ ಯುವಜನತೆಗೆ ಬೆಂಬಲ ಒದಗಿಸಿ, ಅವರು ಕೇವಲ ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಯನ್ನು ವರ್ಧಿಸಿಕೊಳ್ಳುವುದಕ್ಕೆ ಮಾತ್ರವಲ್ಲದೆ ಒಂದು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ಭಾರತವನ್ನು ಸಬಲಗೊಳಿಸುವುದಕ್ಕೆ ಅಗತ್ಯವಾದ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುತ್ತಿದೆ.

" SRI-B ದೊಂದಿಗಿನ ನಮ್ಮ ಸಹಯೋಗವು, ಗರಿಷ್ಟ ಪ್ರಭಾವವನ್ನು ಖಾತರಿಪಡಿಸಿ, ಉದ್ಯಮ-ಸಂಬಂಧಿತ ಕೋರ್ಸ್‌ಗಳು ಹಾಗೂ ಸೂಕ್ಷ್ಮ ಕೌಶಲ್ಯಗಳು, ಪ್ರಬಲವಾದ ತಾಂತ್ರಿಕ ಅಡಿಪಾಯಗಳನ್ನು ಮತ್ತು ಪ್ರಮುಖ ಯೋಜನೆಗಳ ಮೂಲಕ ವಾಸ್ತವ ತೆರೆದುಕೊಳ್ಳು ವಿಕೆಯನ್ನು ಒದಗಿಸುತ್ತದೆ. ಈ ಉಪಕ್ರಮವು, ಡಿಜಿಟಲ್ ಕೌಶಲ್ಯಗಳಲ್ಲಿರುವ ಅಂತರವನ್ನು ಕಡಿಮೆ ಮಾಡಿ, ಭವಿಷ್ಯತ್ತಿನ ಕಾರ್ಯಪಡೆಗಾಗಿ ಮಹಿಳೆಯರನ್ನು ಸಿದ್ಧಗೊಳಿಸುವ ಮೂಲಕ #DigitalIndia ಕ್ಕೆ ಶಕ್ತಿ ನೀಡಬೇಕೆನ್ನುವ ನಮ್ಮ ಬದ್ಧತೆಯನ್ನು ಪುನರುಚ್ಚರಿ ಸುತ್ತದೆ. ಒಂದು ರಚನಾತ್ಮಕ ಪಠ್ಯಕ್ರಮದ ಊಲಕ ವಿದ್ಯಾರ್ಥಿಗಳು, ಸಮಸ್ಯೆ-ಬಗೆಹರಿಸುವ ಮತ್ತು ವಿಕಸನಶೀಲ ತಂತ್ರಜ್ಞಾನಗಳಲ್ಲಿ ವಾಸ್ತವ ಅನುಭವ ಹೊಂದಿ, ಅವರ ಉದ್ಯೋಗ ಸಾಮರ್ಥ್ಯತೆ ಮತ್ತು ಆವಿಷ್ಕಾರ ಎರಡನ್ನೂ ವರ್ಧಿಸುತ್ತದೆ. ತಾಂತ್ರಿಕ ಆಧುನಿಕತೆಗಳನ್ನು ಮುನ್ನಡೆಸಲು ಯುವ ಮಹಿಳಾ ತಂತ್ರಜ್ಞರಿಗೆ ಬಲ ಒದಗಿಸುವ ಈ ಅಮೂಲ್ಯ ಸಹಭಾಗಿತ್ವ ಕ್ಕಾಗಿ ನಾವು SRI-Bಯನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತೇವೆ.” ಎಂದು ಹೇಳಿದರು, ಮೈಸೂರಿನ GSSS (R)ದ ಕಾರ್ಯದರ್ಶಿ ಅನುಪಕ ಬಿ ಪಂಡಿತ್.

SRI-B, BNM ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೇಂಬ್ರಿಡ್ಜ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾ ಲಜಿ(ಮೈನ್ ಮತ್ತು ನಾರ್ತ್ ಕ್ಯಾಂಪಸ್‌ಗಳು), ಡಾನ್ ಬಾಸ್ಕೊ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆ‌ಎಲ್‌ಇ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಆರ್‌ಎನ್‌ಎಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(RNSIT) ಬೆಂಗಳೂರು ಒಳಗೊಂಡಂತೆ, ಕರ್ನಾಟಕ ಏಳು ಇತರ ಸಂಸ್ಥೆ ಗಳಲ್ಲಿ SICಗಳನ್ನು ಸ್ಥಾಪಿಸಿದೆ. ಇದರ ಜೊತೆಗೆ ಅದು, IIIT-ಕರ್ನೂಲಿನಲ್ಲೂ ಒಂದು ಕೇಂದ್ರ ತೆರೆದಿದ್ದು, 800 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಕ್ಷೇತ್ರದಲ್ಲಿ ತತ್ಸಂ ಬಂಧಿತ ಅವಕಾಶಗಳನ್ನು ಪಡೆದುಕೊಳ್ಳುವುದಕ್ಕೆ ಅಗತ್ಯವಾದ ಕೌಶಲ್ಯಗಳ ತರಬೇತಿ ಒದಗಿಸಿದೆ.

ಸ್ಯಾಂಸಂಗ್ ನ್ಯೂಸ್‌ರೂಮ್‌ ಇಂಡಿಯಾ: ಸ್ಯಾಮ್‌ಸಂಗ್ ಸಂಸ್ಥೆ ಭಾರತ, ಬೆಂಗಳೂರು, ಇವರು ಕರ್ನಾಟಕದ ಪ್ರಪ್ರಥಮ ಮಹಿಳೆಯರು ಮಾತ್ರ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್ ಉದ್ಘಾಟಿಸುತ್ತಿದೆ