IND vs PAK: ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಬಗ್ಗೆ ಗವಾಸ್ಕರ್ ಹೇಳಿದ್ದೇನು?
2012–13ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಜರುಗಿನ 3 ಒಡಿಐ ಹಾಗೂ 3 ಟಿ–20 ಪಂದ್ಯಗಳ ಸರಣಿಯೇ, ಉಭಯ ರಾಷ್ಟ್ರಗಳ ನಡುವೆ ನಡೆದ ಕೊನೆಯ ದ್ವಿಪಕ್ಷೀಯ ಸರಣಿ. ಅದಾದ ಬಳಿಕ ಐಸಿಸಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸರಣಿಯಲ್ಲಿ ಉಭಯ ರಾಷ್ಟ್ರಗಳು ತಟಸ್ಥ ತಾಣದಲ್ಲಿ ಎದುರುಬದುರಾಗುತ್ತಿವೆ.


ಮುಂಬಯಿ: ಗಡಿಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ ನಡೆಸುತ್ತಿರುವ ಗುಂಡಿನ ದಾಳಿ ಹಾಗೂ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ರೀತಿಯ ಕ್ರಿಕೆಟ್ ಪಂದ್ಯಾಟ ನಡೆಯುವುದು ಅಸಾಧ್ಯ ಎಂದು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
ಕ್ರಿಕೆಟ್ ಸಂದರ್ಶನದಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, 'ಓರ್ವ ಕ್ರಿಕೆಟ್ ಅಭಿಯಾನಿಯಾಗಿ ನಾನೂ ಕೂಡ ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಆಯೋಜನೆಯನ್ನು ಬಯಸುತ್ತೇನೆ. ಆದರೆ ಇದು ಅಷ್ಟು ಸುಲಭದ ವಿಚಾರವಲ್ಲ. ಇದಕ್ಕಾಗಿ ಮೊದಲಿಗೆ ಗಡಿಯಲ್ಲಿ ಶಾಂತಿ ನೆಲೆಸಬೇಕು. ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಿಸಬೇಕು. ಆಗ ಮಾತ್ರ ದ್ವಿಪಕ್ಷೀಯ ಸರಣಿಯ ಬಗ್ಗೆ ನಾವು ಯೋಚಿಸಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.
2012–13ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಜರುಗಿನ 3 ಒಡಿಐ ಹಾಗೂ 3 ಟಿ–20 ಪಂದ್ಯಗಳ ಸರಣಿಯೇ, ಉಭಯ ರಾಷ್ಟ್ರಗಳ ನಡುವೆ ನಡೆದ ಕೊನೆಯ ದ್ವಿಪಕ್ಷೀಯ ಸರಣಿ. ಅದಾದ ಬಳಿಕ ಐಸಿಸಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸರಣಿಯಲ್ಲಿ ಉಭಯ ರಾಷ್ಟ್ರಗಳು ತಟಸ್ಥ ತಾಣದಲ್ಲಿ ಎದುರುಬದುರಾಗುತ್ತಿವೆ. ಐಸಿಸಿ ಟೂರ್ನಿಯನ್ನಾಡಲು ಪಾಕ್ ತಂಡ ಭಾರತಕ್ಕೆ ಬಂದರೂ ಕೂಡ ಭಾರತ ಮಾತ್ರ ಪಾಕ್‌ಗೆ ತೆರಳುತ್ತಿಲ್ಲ.
ಏಷ್ಯಾಕಪ್‌ನಲ್ಲಿ ಮತ್ತೆ ಮುಖಾಮುಖಿ
ಭಾರತ ಮತ್ತು ಪಾಕಿಸ್ತಾನ(IND vs PAK) ತಂಡಗಳು ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ಏಷ್ಯಾಕಪ್(2025 Asia Cup) ಟೂರ್ನಿಯಲ್ಲಿ. ಭಾರತ ಟೂರ್ನಿಯ ಆತಿಥ್ಯ ಹಕ್ಕು ಹೊಂದಿದ್ದರೂ ಕೂಡ, ಭಾರತದಲ್ಲಿ ಪಂದ್ಯಾವಳಿ ನಡೆಯುವುದು ಅನುಮಾನ. ಇದಕ್ಕೆ ಕಾರಣ ಪಾಕಿಸ್ತಾನ. 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನವು ನಿಯೋಜಿತ ಆತಿಥೇಯರಾಗಿದ್ದರೂ, ಬಿಸಿಸಿಐ ತನ್ನ ತಂಡವನ್ನು ಪಾಕ್‌ಗೆ ಕಳುಹಿಸಲು ನಿರಾಕರಿಸಿತ್ತು. ಹೀಗಾಗಿ ಭಾರತದ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಭಾರತದಲ್ಲಿ ನಡೆಯುವ ಮುಂದಿನ ಕೂಟಗಳಿಗೂ ಇದು ಪರಿಣಾಮ ಬೀರುತ್ತಿದೆ. ಪಾಕ್ ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡಲಿದೆ.
ಇದನ್ನೂ ಓದಿ IND vs NZ: ಕಿವೀಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
ಸದ್ಯದ ಮಾಹಿತಿ ಪ್ರಕಾರ ಟೂರ್ನಿ ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಇದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫಘಾನಿಸ್ತಾನ, ಯುಎಇ, ಓಮನ್ ಮತ್ತು ಹಾಂಕಾಂಗ್ ತಂಡಗಳು ಈ ಬಾರಿ ಆಡಲಿದೆ. 2026ರಲ್ಲಿ ಟಿ20 ವಿಶ್ವಕಪ್ ನಡೆಯುವ ಕಾರಣದಿಂದ ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ನಡೆಯಲಿದೆ. 19 ಪಂದ್ಯಗಳನ್ನು ಒಳಗೊಂಡಿದ್ದು, ಸೆಪ್ಟೆಂಬರ್ ಎರಡನೇ ಮತ್ತು ನಾಲ್ಕನೇ ವಾರದ ನಡುವೆ ನಡೆಯುವ ಸಾಧ್ಯತೆಯಿದೆ ಎಂದು ಕ್ರಿಕ್‌ಬಜ್‌ನ ವರದಿಯೊಂದು ತಿಳಿಸಿದೆ.