ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News:‌ ಶ್ವಾನಕ್ಕಾಗಿ ವಿಮಾನದಲ್ಲಿ ಫಸ್ಟ್ ಕ್ಲಾಸ್‍ ಸೀಟ್ ಬಿಟ್ಟುಕೊಡುವಂತೆ ಪಟ್ಟು ಹಿಡಿದ ಭೂಪ!

ಡೆಲ್ಟಾ ಏರ್ ಲೈನ್ಸ್ ಸಂಸ್ಥೆ ತನ್ನ ಫಸ್ಟ್ ಕ್ಲಾಸ್‍ ಸೀಟನ್ನು ಸಾಕು ನಾಯಿಗೆ ನೀಡಿದಕ್ಕೆ ಪ್ರಯಾಣಿಕರೊಬ್ಬರು ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ರೆಡ್ಡಿಟ್‍ನಲ್ಲಿ ಪೋಸ್ಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.

Profile Vishwavani News Dec 23, 2024 2:58 PM
ನವದೆಹಲಿ: ಪ್ರಯಾಣಿಕರೊಬ್ಬರು ನಾಯಿಗಾಗಿ ತಮ್ಮ ಫಸ್ಟ್ ಕ್ಲಾಸ್‍ ಸೀಟ್ ಅನ್ನು ಬಿಟ್ಟುಕೊಡುವಂತೆ ಸಹ ಪ್ರಯಾಣಿಕರನ್ನು ಒತ್ತಾಯಿಸಿದ್ದಾನೆ. ಪ್ರಯಾಣಿಕರೊಬ್ಬರು ರೆಡ್ಡಿಟ್‍ನಲ್ಲಿ ತನ್ನ ಕೆಟ್ಟ ಪ್ರಯಾಣದ ಕಥೆಯನ್ನು ವಿವರಿಸಿದ್ದಾರೆ. ಮತ್ತು ಅದರಲ್ಲಿ ನಾಯಿಯ ಮಾಲೀಕರೊಂದಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ಇದೀಗ ಎಲ್ಲೆಡೆ ವೈರಲ್‌(Viral News) ಆಗಿದೆ.
ಈ ಕುರಿತು ರೆಡ್ಡಿಟರ್ @ben_bob ಫಸ್ಟ್ ಕ್ಲಾಸ್ ಸೀಟ್‍ನ ಬಳಿ ಕುಳಿತಿರುವ ನಾಯಿಯ ಪೋಟೊವನ್ನು ಹಂಚಿಕೊಂಡಿದ್ದಾರೆ. ಹಾಗೂ ಅವರು ಸೀಟು ಬಿಟ್ಟು ಅಲ್ಲಿಂದ ಬಂದು ತಕ್ಷಣ ಬೆಂಬಲಕ್ಕಾಗಿ ಡೆಲ್ಟಾ ಅವರನ್ನು ಸಂಪರ್ಕಿಸಿದ್ದಾರೆ.  ಆದರೆ ಅವರು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಆ ನಾಯಿ ಈ ವಿಮಾನಯಾನ ಸಂಸ್ಥೆಯೊಂದಿಗೆ ನನ್ನಷ್ಟು ಖರ್ಚು ಮಾಡಲು ಸಾಧ್ಯವಿಲ್ಲ... ಎಂತಹ ತಮಾಷೆ. ಇನ್ನು ಮುಂದೆ ಈ ವಿಮಾನಯಾನಕ್ಕೆ ನಿಷ್ಠರಾಗಿರುವುದರಲ್ಲಿ ಏನು ಅರ್ಥವಿದೆ, ನಿಜವಾಗಿಯೂ, ಈ ವಿಮಾನಯಾನ ಸಂಸ್ಥೆ ಇತ್ತೀಚೆಗೆ ಗ್ರಾಹಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಮತ್ತು ಸೇವಾ ಮಟ್ಟದಲ್ಲಿ ಕುಸಿಯುತ್ತಿದೆ ಎಂದು ಇತರರು ದೂರಿದಾಗ ನಾನು ಸುಮ್ಮನಿದ್ದೆ.  ಆದರೆ ಈಗ ನನ್ನ ಬಗ್ಗೆ ನನಗೇ ಬೇಸರವಾಗುತ್ತಿದೆ" ಎಂದು ಅವರು ವಿಮಾನಯಾನ ಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರ ಈ ರೆಡ್ಡಿಟ್ ಪೋಸ್ಟ್‌ಗೆ ಹಲವರು ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.  ಹಾಗೇ ನೆಟ್ಟಿಗರಿಂದ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. "ಹೌದು, ನಾಯಿಯನ್ನು ದೂಷಿಸಬೇಡಿ, ನಾಯಿಗೆ ಬೇರೆ ಆಯ್ಕೆಗಳಿಲ್ಲ. ಮಾಲೀಕರನ್ನು ಅವಮಾನಿಸಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:4 ವರ್ಷದ ಮಗನ ಮುಂದೆಯೇ ತಂದೆಯನ್ನು ಬರ್ಬರವಾಗಿ ಕಚ್ಚಿ ಕೊಂದ ಸಾಕು ನಾಯಿಗಳು; ಶಾಕಿಂಗ್‌ ವಿಡಿಯೊ ವೈರಲ್‌
ಇನ್ನೊಬ್ಬರು "ಅದು ಅಸಹ್ಯಕರವಾಗಿದೆ. ನೀವು ಇದ್ದ ಸ್ಥಳದಲ್ಲಿಯೇ ನಾಯಿಯನ್ನು ಇರಿಸುವ ಬದಲು ಅವರು ಇದ್ದ ಸ್ಥಳಕ್ಕೆ ಸ್ಥಳಾಂತರಿಸಲು ಏಕೆ ಸಾಧ್ಯವಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ.