ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಪಾಕ್ ಗೆಳತಿಯ ಮದುವೆಯನ್ನು ಭಾರತೀಯ ಯುವತಿ ಕಣ್ತುಂಬಿಕೊಂಡಿದ್ದು ಹೇಗೆ? ವಿಡಿಯೊ ನೋಡಿ

ಭಾರತ – ಪಾಕ್ ನಡುವೆ ರಾಜತಾಂತ್ರಿಕ ಕಾರಣಗಳಿಂದಾಗಿ ಯಾವುದೇ ರೀತಿಯ ವ್ಯಾಪಾರ ಮತ್ತು ಸಂಚಾರ ಸಂಬಂಧಗಳಿಲ್ಲವಾದರೂ, ಈ ದೇಶದವರಿಗೆ ಅಲ್ಲೂ ಸಹ ಗೆಳೆಯ-ಗೆಳತಿಯರಿದ್ದಾರೆ. ಪ್ರೀತಿ ಮತ್ತು ಗೆಳೆತನಕ್ಕೆ ಯಾವುದೇ ಗಡಿಗಳಿಲ್ಲ ಎಂಬ ವಿಚಾರವನ್ನು ಈ ಇಬ್ಬರು ಗೆಳತಿಯರು ಪ್ರೂವ್ ಮಾಡಿದ್ದಾರೆ.

ಇದು ಇಂಡೋ – ಪಾಕ್ ಗೆಳತಿಯರ ಫ್ರೆಂಡ್‌ಶಿಪ್ ಕಥೆ

ಇದು ಇಂಡೋ – ಪಾಕ್ ಗೆಳತಿಯರ ಫ್ರೆಂಡ್ ಶಿಪ್ ಕಥೆ!

Profile Sushmitha Jain Feb 25, 2025 9:49 PM

ನವದೆಹಲಿ: ಪ್ರೀತಿ ಮತ್ತು ಗೆಳೆತನಕ್ಕೆ ದೇಶ-ಭಾಷೆ ಮತ್ತು ಜಾತಿ-ಧರ್ಮಗಳ ಎಲ್ಲೆಗಳಿಲ್ಲ ಎಂಬ ಮಾತೊಂದಿದೆ. ಅಂದರೆ ಇದೆಲ್ಲವೂ ಹೃದಯಗಳ ಮಾತು. ಹೃದಯಗಳ ಸ್ಪಂದನಕ್ಕೆ ಎಲ್ಲಿಯ ಗಡಿ ರೇಖೆ? ಹಲವಾರು ಬಾರಿ, ಬೇರೆ ಬೇರೆ ದೇಶಗಳ ಜನರ ನಡುವೆ ಪ್ರೀತಿ ಮತ್ತು ಸ್ನೇಹ ಅರಳುವುದನ್ನು ಮತ್ತು ಅಂತವರು ಒಂದಾಗಲು ಪಡುವ ಪಾಡಿನ ಕಥೆಗಳನ್ನು ನಾವು ಕೇಳಿರುತ್ತೇವೆ ಅಥವಾ ಓದಿರುತ್ತೇವೆ. ಅಂತಹ ಒಂದು ವಿಚಾರ ಇದೀಗ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ. ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ರಾಜತಾಂತ್ರಿಕ ಕಾರಣಗಳಿಂದಾಗಿ ಜನರ ಓಡಾಟಕ್ಕೆ ಅವಕಾಶ ಇಲ್ಲ. ಹೀಗಾಗಿ ಅಲ್ಲಿನ ತನ್ನ ಸ್ನೇಹಿತೆಯೊಬ್ಬಳ ಮದುವೆಗೆ ಅಟೆಂಡ್ ಆಗಲಾಗದೆ ಭಾರತೀಯ ಯುವತಿಯೊಬ್ಬಳು ಸಾಮಾಜಿಕ ಜಾಲತಾಣದ ವಿಡಿಯೊ ಅಪ್ಲಿಕೇಶನ್‌ನಲ್ಲಿ ಈ ವಿವಾಹ ಸಮಾರಂಭಕ್ಕೆ ಆನ್‌ಲೈನ್ ಮೂಲಕ ಸಾಕ್ಷಿಯಾಗಿರುವುದು ಇದೀಗ ಸಖತ್ ಸುದ್ದಿಯಾಗುತ್ತಿದೆ.

ಭಾರತಿಯ ಮಹಿಳೆಯೊಬ್ಬರು ಪಾಕಿಸ್ತಾನದಲ್ಲಿರುವ ತನ್ನ ಗೆಳತಿಯ ವಿವಾಹ ಸಮಾರಂಭವನ್ನು ಫೇಸ್ ಟೈಮ್ (Face Time) ಅಪ್ಲಿಕೇಶನ್ ಮೂಲಕ ವೀಕ್ಷಿಸಿ ಭಾವುಕರಾಗುತ್ತಿರುವ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಭಾವನಾತ್ಮಕ ಸನ್ನಿವೇಶವನ್ನು ಸೆರೆ ಹಿಡಿದಿರುವ ಈ ವಿಡಿಯೊ ಇದೀಗ 3.50 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜತೆಗೆ ಹಲವು ಮಂದಿ ಕಾಮೆಂಟ್‌ ಮಾಡುತ್ತಿದ್ದಾರೆ.

ಈ ವಿಡಿಯೋ ಜತೆಗೆ ಒಂದು ಬರಹವನ್ನೂ ಸಹ ಪೋಸ್ಟ್ ಮಾಡಲಾಗಿದ್ದು ಅದರ ಪೂರ್ಣಪಾಠ ಹೀಗಿದೆ: ʼʼಎರಡೂ ದೇಶಗಳ ನಡುವೆ ಬಾಂಧವ್ಯ ಇಲ್ಲದಿರುವ ಕಾರಣದಿಂದ ನನ್ನ ಬೆಸ್ಟ್ ಫ್ರೆಂಡ್‌ನ ಮದುವೆಯನ್ನು ಫೇಸ್ ಟೈಂನಲ್ಲಿ ವೀಕ್ಷಿಸಬೇಕಾಯಿತುʼʼ ಎಂದು ಬರೆಯಲಾಗಿದೆ. ಗೆಳೆತನ ಎಲ್ಲ ಎಲ್ಲೆಗಳನ್ನೂ ಮೀರಿದ್ದರೂ, ಇವರಿಬ್ಬರ ಗೆಳೆತನಕ್ಕೆ ಅಂತರಾಷ್ಟ್ರೀಯ ಗಡಿ ವಿಚಾರವೇ ಅಡ್ಡಿಯಾಗಿದ್ದು ಅಚ್ಚರಿಯ ಸಂಗತಿ ಎಂದು ನೆಟ್ಟಿಗರು ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮಸ್ತ್‌ ಪ್ಲ್ಯಾನ್‌ ಇದು! ಕುಂಭಮೇಳಕ್ಕೆ ಹೋಗದಿದ್ದರೇನಂತೆ? ಸ್ವಿಮ್ಮಿಂಗ್‌ಪೂಲ್‌ ಇದ್ಯಲ್ಲಾ?

ಅದಾಗ್ಯೂ ಈ ಗೆಳತಿಯರ ನಡುವಿನ ಬಾಂಧವ್ಯಕ್ಕೆ ಭೌಗೋಳಿಕ ಗಡಿ ರೇಖೆಗಳು ಅಡ್ಡಿಯಾದರೂ, ತಂತ್ರಜ್ಞಾನ ಇವರಿಬ್ಬರ ಭಾವನೆಗಳನ್ನು ಒಂದು ಮಾಡುವಲ್ಲಿ ಯಶಸ್ಸಿಯಾಗಿದೆ. ದೂರದಲ್ಲಿದ್ದರೂ, ಹತ್ತಿರದಲ್ಲಿರುವಂತೆ ಭಾಸವಾಗುತ್ತಿದೆ. ನನ್ನ ತಂಗಿ ಪತ್ನಿಯಾಗುತ್ತಿರುವುದನ್ನು ಕಣ್ತುಂಬಿಕೊಂಡೆ ಎಂದೂ ಕ್ಯಾಪ್ಷನ್ ನೀಡಲಾಗಿದೆ.

ಈ ವಿಡಿಯೊವನ್ನು ನೋಡಿದವರು ಹಲವಾರು ರೀತಿಯಲ್ಲಿ ಕಾಮೆಂಟ್‌ಗಳನ್ನು ಹಾಕುತ್ತಿದ್ದು, ಎರಡೂ ದೇಶಗಳ ನಡುವಿನ ರಾಜಕೀಯ ವೈಷಮ್ಯದ ಕಾರಣದಿಂದ ಆ ದೇಶದಲ್ಲಿರುವ ತಮ್ಮ ಪ್ರೀತಿಪಾತ್ರರನ್ನು ಭೇಟಿಯಾಗಲು ಸಾಧ್ಯವಾಗದಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಸ್ನೇಹಿತರ ವಿಶೇಷ ದಿನಗಳಲ್ಲಿ ಅವರ ಜತೆ ನಾವಿರಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಈ ಪರಿಸ್ಥಿತಿ ನಮ್ಮ ಮುಂದಿನ ಜನಾಂಗಕ್ಕಾದರೂ ಬದಲಾಗಲಿ ಎಂದು ಆಶಿಸೋಣ’ ಎಂದು ಒಬ್ಬರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಅಂತರಾಷ್ಟ್ರಿಯ ಗಡಿಗಳ ಕಾರಣದಿಂದ, ರಾಜಕೀಯ ಕಾರಣಗಳಿಂದ, ಹಿಂದೊಮ್ಮೆ ಒಂದೇ ಆಗಿದ್ದ ಎರಡು ದೇಶಗಳು ಪರಸ್ಪರ ಬೇರ್ಪಟ್ಟಿದ್ದರೂ ಅಲ್ಲಿರುವ ಗೆಳೆಯ-ಗೆಳತಿಯರ ಬಗ್ಗೆ ಇಲ್ಲಿನವರ ಹೃದಯ ಮಿಡಿಯುವುದು ಸಾಮಾನ್ಯವಾದ ಮಾತಲ್ಲ.