ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಭಾರತ 'ಬಿ' ತಂಡದ ವಿರುದ್ದವೂ ಪಾಕಿಸ್ತಾನ ಗೆಲ್ಲಲ್ಲ ಎಂದ ಸುನೀಲ್‌ ಗವಾಸ್ಕರ್‌!

Sunil Gavaskar on Pakistan: ಪಾಕಿಸ್ತಾನ ಕ್ರಿಕೆಟ್ ತಂಡ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದೆ. ಮೊದಲ ಎರಡು ಪಂದ್ಯಗಳಲ್ಲಿ ಪಾಕ್‌ ಸೋಲು ಅನುಭವಿಸಿತ್ತು. ಈ ಸೋಲಿನೊಂದಿಗೆ ಮೊಹಮ್ಮದ್‌ ರಿಝ್ವಾನ್‌ ಪಡೆಯ ಸೆಮಿಫೈನಲ್ ತಲುಪುವ ಹಾದಿ ಬಂದ್‌ ಆಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನವನ್ನು ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ʻಭಾರತ 'ಬಿ' ವಿರುದ್ಧವೂ ಪಾಕ್‌ ಗೆಲ್ಲಲ್ಲʼ-ಸುನೀಲ್‌ ಗವಾಸ್ಕರ್‌ ವ್ಯಂಗ್ಯ!

ಪಾಕಿಸ್ತಾನ ತಂಡವನ್ನು ಟೀಕಿಸಿದ ಸುನೀಲ್‌ ಗವಾಸ್ಕರ್‌.

Profile Ramesh Kote Feb 25, 2025 9:37 PM

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡ ಎಲ್ಲಾ ಕಡೆಯಿಂದ ಟೀಕೆಗಳನ್ನು ಎದುರಿಸುತ್ತಿದೆ. ಸದ್ಯದ ಪಾಕಿಸ್ತಾನ ತಂಡ, ಭಾರತದ ಬಿ ತಂಡವನ್ನು ಸಹ ಸೋಲಿಸಲು ಸಾಧ್ಯವಾಗುವುದಿಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ದಿಗ್ಗಜ ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2023ರ ಏಕದಿನ ವಿಶ್ವಕಪ್ ಫೈನಲಿಸ್ಟ್‌ ಭಾರತ ತಂಡ, ಭಾನುವಾರ ದುಬೈನಲ್ಲಿ ನಡೆದಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಪಾಕಿಸ್ತಾನ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತ್ತು. ಆ ಮೂಲಕ ಐಸಿಸಿ ಟೂರ್ನಿಗಳಲ್ಲಿನ ತಮ್ಮ ಸಾಂಪ್ರದಾಯಿಕ ಎದುರಾಳಿ ಮೇಲಿನ ಪ್ರಾಬಲ್ಯವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ.

'ಸ್ಪೋರ್ಟ್ಸ್ ಟುಡೇ' ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್, "ಭಾರತದ 'ಬಿ' ತಂಡ, ಪಾಕಿಸ್ತಾನಕ್ಕೆ ಕಠಿಣ ಹೋರಾಟ ನೀಡಬಲ್ಲದು. 'ಸಿ' ತಂಡದ ಬಗ್ಗೆ ನನಗೆ ಖಚಿತವಿಲ್ಲ. ಆದರೆ ಈಗಿನ ಫಾರ್ಮ್ ನೋಡಿದರೆ ಭಾರತದ 'ಬಿ' ತಂಡವನ್ನು ಸೋಲಿಸುವುದು ಪಾಕಿಸ್ತಾನಕ್ಕೆ ತುಂಬಾ ಕಷ್ಟಕರವಾಗಿರುತ್ತದೆ," ಎಂದು ಬ್ಯಾಟಿಂಗ್‌ ದಿಗ್ಗಜ ಭವಿಷ್ಯ ನುಡಿದಿದ್ದಾರೆ. 1996ರ ನಂತರ ಮೊದಲ ಬಾರಿ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿರುವ ಪಾಕಿಸ್ತಾನ, ಗ್ರೂಪ್ ಎ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ಜಯಗಳಿಸಿದ ನಂತರ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿತ್ತು.

IND vs PAK: ʻಬಾಬರ್‌ ಆಝಮ್‌ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿ!

2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇನ್ನೂ ಒಂದೂ ಪಂದ್ಯ ಗೆದ್ದಿಲ್ಲ

ಪಾಕಿಸ್ತಾನ ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಪಾಕಿಸ್ತಾನ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತು ಆದರೆ, ಅಂದಿನಿಂದ ಅವರ ಕ್ರಿಕೆಟ್ ಗುಣಮಟ್ಟ ಕುಸಿಯುತ್ತಿದೆ. ಕಳೆದ ಎರಡು ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕ್‌, ಐದನೇ ಸ್ಥಾನ ಗಳಿಸಿತು.

"ಬೆಂಚ್ ಬಲದ ಕೊರತೆ ಆಶ್ಚರ್ಯಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನ ಯಾವಾಗಲೂ ನೈಸರ್ಗಿಕ ಪ್ರತಿಭೆಗಳನ್ನು ಉತ್ಪಾದಿಸಿದೆ. ಅವರು ಯಾವಾಗಲೂ ತಾಂತ್ರಿಕವಾಗಿ ಸರಿಯಾಗಿರದೆ ಇರಬಹುದು, ಆದರೆ ಅವರಿಗೆ ಬ್ಯಾಟ್ ಮತ್ತು ಚೆಂಡಿನ ಬಗ್ಗೆ ಸಹಜವಾದ ತಿಳುವಳಿಕೆ ಇತ್ತು," ಎಂದು ಕ್ರಿಕೆಟ್‌ ಕಾಮೆಂಟೇಟರ್‌ ತಿಳಿಸಿದ್ದಾರೆ.

IND vs PAK: ಕೊಹ್ಲಿ ಶತಕ ವೈಭವ; ಪಾಕ್‌ ವಿರುದ್ಧ ಭಾರತಕ್ಕೆ 6 ವಿಕೆಟ್‌ ಜಯ

"ಉದಾಹರಣೆಗೆ ಇಂಝಮಾಮ್ ಉಲ್ ಹಕ್ ಅವರನ್ನು ನೋಡಿ. ನೀವು ಅವರ ನಿಲುವನ್ನು ನೋಡಿದರೆ, ಯಾವುದೇ ಯುವ ಬ್ಯಾಟ್ಸ್‌ಮನ್‌ಗೆ ಹೀಗೆ ಮಾಡಲು ನೀವು ಸಲಹೆ ನೀಡುವುದಿಲ್ಲ. ಆದರೆ ಅವರ ಬ್ಯಾಟಿಂಗ್ ಶೈಲಿಯು ಅವರಲ್ಲಿ ಇರಬಹುದಾದ ಯಾವುದೇ ತಾಂತ್ರಿಕ ನ್ಯೂನತೆಗಳನ್ನು ಸರಿದೂಗಿಸಿತು. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಮತ್ತು ವೈಟ್-ಬಾಲ್ ದೇಶಿ ಟೂರ್ನಿಗಳ ಹೊರತಾಗಿಯೂ, ಪಾಕಿಸ್ತಾನವು ಗುಣಮಟ್ಟದ ಆಟಗಾರರನ್ನು ಉತ್ಪಾದಿಸಲು ಹೆಣಗಾಡುತ್ತಿದೆ," ಎಂದು ಬ್ಯಾಟಿಂಗ್‌ ದಿಗ್ಗಜ ಹೇಳಿದ್ದಾರೆ.

ದೇಶಿ ಕ್ರಿಕೆಟ್ ಭಾರತ ತಂಡಕ್ಕೆ ನೆರವು ನೀಡಿದೆ

ಭಾರತದ ಮಾಜಿ ನಾಯಕ, "ಭಾರತ ತಂಡ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಇಷ್ಟೊಂದು ಯುವ ತಾರೆಗಳನ್ನು ಹೇಗೆ ಉತ್ಪಾದಿಸಿದೆ? ಇದಕ್ಕೆ ಕಾರಣ ಐಪಿಎಲ್. ಭಾರತೀಯ ಆಟಗಾರರು ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್‌ ಟೂರ್ನಿಗಳಲ್ಲಿ ಆಡಿದ್ದಾರೆ. ಇದರ ಆಧಾರದ ಮೇಲೆ ಅವರು ಅಂತಿಮವಾಗಿ ಭಾರತ ತಂಡದ ಪರ ಆಡುತ್ತಾರೆ. ಪಾಕಿಸ್ತಾನ ಕ್ರಿಕೆಟ್ ಇದನ್ನು ವಿಶ್ಲೇಷಿಸಬೇಕು. ಅವರಿಗೆ ಮೊದಲಿದ್ದ 'ಬೆಂಚ್ ಸ್ಟ್ರೆಂತ್' ಈಗ ಏಕೆ ಇಲ್ಲ ಎಂಬುದನ್ನು ಅವರು ಕಂಡುಹಿಡಿಯಬೇಕು," ಎಂದು ಸುನೀಲ್‌ ಗವಾಸ್ಕರ್‌ ಪಿಸಿಬಿಗೆ ಸಲಹೆ ನೀಡಿದ್ದಾರೆ.