ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

ಮಹಾಶಿವರಾತ್ರಿ ಹಬ್ಬಕ್ಕೆ ಸಜ್ಜಾಗಿದೆ ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದ ನಂದಿಗ್ರಾಮ

ದೇವಾಲಯವನ್ನು ಕ್ರಿ.ಶ.೮೧೦ರಲ್ಲಿ ಬಾಣದೊರೆ ವಿದ್ಯಾಧರನ ರಾಣಿ ರತ್ನಾವಳಿಯು ನಿರ್ಮಿಸಿ ದಳೆಂದು ಚಿಕ್ಕಬಳ್ಳಾಪುರದ ತಾಮ್ರ ಶಾಸನದಲ್ಲಿ ಉಲ್ಲೇಖವಿದೆ. ಉತ್ತರಕ್ಕೆ ಭೋಗನಂದೀಶ್ವರ, ದಕ್ಷಿಣಕ್ಕೆ ಅರುಣಾಚಲೇಶ್ವರ ನಡುವೆ ಉಮಾಮಹೇಶ್ವರಿ ದೇವಾಲಯ ವಿದೆ. ಇಂತಹ ಐತಿಹಾ ಸಿಕ ದೇವಾಲಯದಲ್ಲಿ ನಡೆಯುವ ಜಾತ್ರೆ, ರಥೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಗಳಲ್ಲಿ ರಾಜ್ಯದ ಜನತೆ ಮಾತ್ರವಲ್ಲದೆ ನೆರೆಯ ತೆಲಂಗಾಣ, ತಮಿಳುನಾಡು,ಆಂಧ್ರಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಅವಳಿ ರಥೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಲಕ್ಷಸಂಖ್ಯೆಯ ಭಕ್ತಗಣ

Profile Ashok Nayak Feb 25, 2025 10:06 PM

ಮುನಿರಾಜು ಎಂ ಅರಿಕೆರೆ

ನಂದಿ ಜಾತ್ರೆಗೆ ಕಳೆಗಟ್ಟಿದೆ ಭಾರೀ ದನಗಳ ಜಾತ್ರೆ: ಬುರುಗು ಬತ್ತಾಸು ಮಾರಾಟ ಜೋರೋ ಜೋರು

ಚಿಕ್ಕಬಳ್ಳಾಪುರ : ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಶಿವರಾತ್ರಿ ಹಬ್ಬಕ್ಕೆ ನಂದಿ ಗ್ರಾಮವು ಸಕಲ ರೀತಿಯಲ್ಲಿ ಸಜ್ಜಾಗಿದೆ.ನೂರಾರು ವರ್ಷಗಳಿಂದ ಹಬ್ಬದ ಮಾರನೇ ದಿನ ನಡೆದುಕೊಂಡು ಬಂದಿರುವ ಭೋಗನಂದೀಶ್ವರ ಗಿರಿಜಾಂಭ ಗಣಪತಿ ದೇವರ ಜೋಡಿ ರಥೋತ್ಸವಕ್ಕೆ ಪುರಾತತ್ವ ಇಲಾಖೆ ನಂದಿ ದೇವಾಲಯ ಸಮಿತಿ ಸಕಲರೀತಿಯಲ್ಲಿ ಸಜ್ಜು ಗೊಂಡಿದ್ದು ಕಲ್ಲಿನ ರಥಕಟ್ಟುವ ಕೆಲಸ ಭರದಿಂದ ಸಾಗಿದೆ. ರತ್ನಾವಳಿ ನಿರ್ಮಿಸಿದ ದೇವಾಲಯ: ಹೌದು ತಾಲೂಕಿನ ನಂದಿ ಗ್ರಾಮದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ವಾಗಿರುವ ಈ ದೇವಾಲಯವನ್ನು ಕ್ರಿ.ಶ.೮೧೦ರಲ್ಲಿ ಬಾಣದೊರೆ ವಿದ್ಯಾಧರನ ರಾಣಿ ರತ್ನಾವಳಿಯು ನಿರ್ಮಿಸಿದಳೆಂದು ಚಿಕ್ಕಬಳ್ಳಾಪುರದ ತಾಮ್ರ ಶಾಸನದಲ್ಲಿ ಉಲ್ಲೇಖವಿದೆ. ಉತ್ತರಕ್ಕೆ ಭೋಗನಂದೀಶ್ವರ, ದಕ್ಷಿಣಕ್ಕೆ ಅರುಣಾಚಲೇಶ್ವರ ನಡುವೆ ಉಮಾಮಹೇಶ್ವರಿ ದೇವಾಲಯ ವಿದೆ. ಇಂತಹ ಐತಿಹಾಸಿಕ ದೇವಾಲಯದಲ್ಲಿ ನಡೆಯುವ ಜಾತ್ರೆ, ರಥೋತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ಜನತೆ ಮಾತ್ರವಲ್ಲದೆ ನೆರೆಯ ತೆಲಂಗಾಣ, ತಮಿಳುನಾಡು,ಆಂಧ್ರಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಇದನ್ನೂ ಓದಿ: Chikkaballapur News: ಸಮರ್ಪಕ ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸುಧಾರಣೆ ಸಾಧ್ಯ: ಸದ್ಗುರು ಶ್ರೀ ಮಧುಸೂಧನ ಸಾಯಿ

ಜೋಡಿರಥವೇ ಪ್ರಧಾನ

ಶಿವರಾತ್ರಿಯ ದಿನ ದೇವಾಲಯವನ್ನು ವಿಶೇಷ ಹೂವು ತಳಿರು ತೋರಣಗಳಿಂದ ಅಲಂಕ ರಿಸುವ ಜತೆಗೆ ಬೆಳಗಿನಿಂದಲೇ ರುದ್ರಾಭಿಷೇಕ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಅಹೋರಾತ್ರಿ ಪೂಜೆ ಭಜನೆ ಶಿವನಾಮಸ್ಮರಣೆ ನಡೆಯುತ್ತದೆ.ಭಕ್ತಾಧಿಗಳ ನೆರವಿನಲ್ಲಿ ತೀರ್ಥಪ್ರಸಾದ ವಿನಿಯೋಗವೂ ಇರಲಿದೆ.ಶಿವರಾತ್ರಿ ಹಬ್ಬದ ಮಾರನೇ ದಿನ ಪ್ರಧಾನ ರಥದಲ್ಲಿ ವಿರಾಜಮಾನನಾಗುವ ಭೋಗನಂದೀಶ್ವರ, ಎರಡನೇ ರಥದಲ್ಲಿ ಪ್ರತಿಷ್ಠಾಪಿಸುವ ಗಿರಿಜಾಂಭ, ಗಣಪತಿ ದೇವರ ಜೋಡಿ ಕಲ್ಲಿನ  ರಥೋತ್ಸವ ಕಣ್ತುಂಬಿ ಕೊಳ್ಳಲು ಲಕ್ಷಾಂತರ ಮಂದಿ ಆಗಮಿಸುವುದೇ ಜಾತ್ರೆಯ ವಿಶೇಷವಾಗಿದೆ.

ಕಳೆಗಟ್ಟಿದ ದನಗಳ ಜಾತ್ರೆ
ನಂದಿಜಾತ್ರೆಯಲ್ಲಿ ಜೋಡಿ ರಥಕ್ಕಿರುವಷ್ಟೇ ಮಹತ್ವ ಒಂದು ವಾರದ ಕಾಲ ನಡೆಯುವ ಭಾರೀ ದನಗಳ ಜಾತ್ರೆಗೂ ಇದೆ.ರೈತಾಪಿಗಳ ಬದುಕಿನ ಆರ್ಥಿಕ ಚೈತನ್ಯಕ್ಕೆ ಕಾರಣ ವಾಗಿರುವ ಭಾರೀ ದನಗಳ ಜಾತ್ರೆಯಲ್ಲಿ ಉತ್ತಮ ಜಾನುವಾರುಗಳನ್ನು ಕೊಳ್ಳಲು ನೆರೆಯ ಆಂದ್ರ ತಮಿಳುನಾಡು ಕೇರಳದಿಂದಲೂ ವ್ಯಾಪಾರಿಗಳು ಬರುವಂತೆ, ಬಳ್ಳಾರಿ, ಗಂಗಾವತಿ, ತುಮಕೂರು ಮಂಡ್ಯ ಮೈಸೂರುಗಳಿಂದಲೂ ವ್ಯಾಪಾರಿಗಳು ಬರುತ್ತಾರೆ. ಆದರೂ ಈವರ್ಷ೫೦ ರಿಂದ ೧೦೦ ಜೋಡಿ ಹಸುಗಳು ಬಂದಿದ್ದರೆ ಹೆಚ್ಚು.ಇವುಗಳಿಗೆ ನೀರು ನೆರಳು ಒದಗಿಸುವಲ್ಲಿ ಗ್ರಾಮಪಂಚಾಯಿತಿ ವಿಫಲವಾಗಿದೆ.ದನಗಳ ಜಾತ್ರೆ ವರ್ಷದಿಂದ ವರ್ಷಕ್ಕೆ ಕಳೆಗುಂದಲು ಜಾತ್ರೆಯಲ್ಲಿ ಮೂಲಸೌಲಭ್ಯಗಳಿಲ್ಲದಿರುವ ಜತೆತೆ  ಯಂತ್ರ ನಾಗರೀಕತೆ, ವಿಭಕ್ತ ಕುಟುಂಬಗಳು,ರಿಯಲ್ ಎಸ್ಟೇಟ್ ಮಾಫಿಯಾಗಳೇ ಕಾರಣ ಎಂಬುದನ್ನು ಚೌಡರೆಡ್ಡಿಹಳ್ಳಿ ರಾಮಕೃಷ್ಣಪ್ಪ ನೋವಿನಿಂದ ಹೇಳುತ್ತಾರೆ.

ಬುರುಗು ಬತ್ತಾಸು ಮಾರಾಟ ಜೋರು
ಜಿಲ್ಲೆಯಲ್ಲಿ ನಡೆಯುವ ಪ್ರಧಾನ ಜಾತ್ರೆ ಮತ್ತು ಜೋಡಿ ರಥೋತ್ಸವ, ದನಗಳ ಜಾತ್ರೆ ಯನ್ನು ಕಣ್ತುಂಬಿಕೊಳ್ಳಲು ಬರುವ ಜನರಿಗೆ ಬುರುಗು ಬತ್ತಾಸು ಕೊಂಡಾಗ ಮಾತ್ರವೇ ತಮ್ಮ ಹಾಜರಿಗೆ ಅರ್ಥ ಬರಲಿದೆ.ಹೌದು ಮುದುಕರು ಮಕ್ಕಳು ಹೆಂಗಸರು ಗಂಡಸರ ಪಾಲಿಗೆ ಸಂತೋಷ ತರುವಂತೆ ತಲೆಯೆತ್ತಿರುವ ಬುರುಗು ಬತ್ತಾಸು,ಕಲ್ಲಂಚೇವು ಅಂಗಡಿ ಗಳನ್ನು ಮಾರಾಟಗಾರರು ನವವಧುವಿನಂತೆ ಸಿಂಗರಿಸಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಮೂಟೆ ಬುರುಗು ಮಾರಾಟವಾಗುತ್ತದೆ. ದುಬಾರಿ ಸುಂಕದ ನಡುವೆಯೂ ರಸ್ತೆಯ ಇಕ್ಕೆಲಗಳಲ್ಲಿ ತಲೆಯೆತ್ತಿರುವ ಮಕ್ಕಳ ಆಟದ ಸಾಮಾನು, ಕಲ್ಲಂಗಡಿ ಅಂಗಡಿ, ಚುರುಮುರಿ ಅಂಗಡಿ,ಚುಕುಬುಕು ರೈಲು, ರಂಕಲರಾಟಿಗಳು ಜಾತ್ರೆಗೆ ವಿಶೇಷ ಕಳೆ ತಂದಿವೆ.

ಉಸ್ತುವಾರಿ ಸಚಿವರ ಹಾಜರಿ
ಫೆ.27ರಂದು ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಚಾಲನೆ ನೀಡಲು ಜಿಲ್ಲಾ ಉಸ್ತು ವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸಂಸದ ಡಾ.ಕೆ.ಸುಧಾಕರ್, ಕೋಲಾರ ಸಂಸದ ಮಲ್ಲೇಶ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಎಸ್ಪಿ ಕುಶಾಲ್ ಚೌಕ್ಸೆ,ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ, ತಹಶೀಲ್ದಾರ್ ಅನಿಲ್ ಭಾಗಿಯಾಗುವರು.ಪ್ರಧಾನ ರಥದ ಕಲ್ಲಿನ ಗಾಲಿ ೨ಂ೨೨ರಲ್ಲಿ ಮುರಿದಿತ್ತು.ಇದನ್ನು ಮನಗಂಡ ಹುರುಳುಗುರ್ಕಿ ಉದ್ಯಮಿ ವೆಂಕಟೇಗೌಡ ೨ಕೋಟಿ ವೆಚ್ಚದಲ್ಲಿ ನೂತನ ರಥವನ್ನು ನಿರ್ಮಿಸಿ ದೇವಾಲಯಕ್ಕೆ ಕೊಡುಗೆ ನೀಡಿದ್ದು, ಈಬಾರಿ ಇದೇ ರಥದಲ್ಲಿ ಭೋಗನಂದೀಶ್ವರ ಉತ್ಸವ ನಡೆಯಲಿದೆ.ಜಾತ್ರೆಯ ಪ್ರಮುಖ ಆಕರ್ಷಣೆಯಾದ ಉಡುಪಿಯ ಅಷ್ಟಮಠಗಳ ಮಾದರಿಯಲ್ಲಿರುವ ನೂತನ ರಥವನ್ನು ನೋಡಲು ಸಹ ಜನಜಾತ್ರೆ ನೆರೆಯಲಿದೆ.

ಪೊಲೀಸ್ ಪಹರೆ
ನಂದಿ ಜಾತ್ರೆ ಮತ್ತು ಜೋಡಿ ರಥೋತ್ಸವದ ಅಂಗವಾಗಿ ಲಕ್ಷಾಂತರ ಮಂದಿ ಆಗಮಿಸುವ ಕಾರಣ ಬುಧವಾರ ಮತ್ತು ಗುರುವಾರ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಕ್ರಮವಹಿಸಿದ್ದು ಅಲ್ಲಲ್ಲಿ ಬ್ಯಾರಿ ಕೇಡ್‌ಗಳನ್ನು ನಿರ್ಮಿಸಿದ್ದು ವಾಹನ ಸಂಚಾರದಿAದು ಕಿರಿಕಿರಿಯಾಗದಂತೆ ಜಾಗೃತೆ ವಹಿಸಲಾಗಿದೆ.

ಒಟ್ಟಾರೆ ಇತಿಹಾಸಪ್ರಸಿದ್ಧ ನಂದಿ ರಥೋತ್ಸವ ಮತ್ತು ಜಾತ್ರೆಯು ಶಿವರಾತ್ರಿ ಹಬ್ಬಕ್ಕೆ ವಿಶೇಷ ಕಳೆಯನ್ನು ತಂದಿದೆ.ಈ ಮೂಲಕ ಬುಧವಾರ ಮತ್ತು ಗುರುವಾರ ಜನತಾ ಮತ್ತು ಜನಾರ್ಧನರ ಸಮಾಗಮಕ್ಕೆ ವೇದಿಕೆ ಸಿದ್ಧವಾಗಿದ್ದು ಎಂದಿನAತೆ ಈಬಾರಿಯೂ ಜಾತ್ರೆ ಯಶಸ್ಸು ಕಾಣಲಿ ಎಂಬುದು ಪತ್ರಿಕೆಯ ಆಶಯವಾಗಿದೆ.