Viral News: ಬೆಂಗಳೂರಿಗೆ ಬರುವ ಹೊಸಬರು ಈ ಸೈನ್‌ಬೋರ್ಡ್ ನೋಡಿದ್ರೆ ಆಗೋದು ಕನ್‌ಫ್ಯೂಸ್ ಗ್ಯಾರಂಟಿ!
ಬೆಂಗಳೂರಿನ ಪ್ರಮುಖ ಸ್ಥಳದಲ್ಲಿನ ಟ್ರಾಫಿಕ್ ಸೈನ್ ಬೋರ್ಡ್‍ನಲ್ಲಿ ಮುದ್ರಣ ದೋಷವೊಂದು ಕಂಡುಬಂದಿದ್ದು, ಇದನ್ನು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಗುರುತಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅನೇಕರ ಗಮನ ಸೆಳೆದು ವೈರಲ್ ಆಗಿದೆ.


ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಟ್ರಾಫಿಕ್ ಸೈನ್ ಬೋರ್ಡ್‍ನಲ್ಲಿ ಮುದ್ರಣ ದೋಷವನ್ನು ಎತ್ತಿ ತೋರಿಸುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ನಗರದ ವಿಮಾನ ನಿಲ್ದಾಣ ರಸ್ತೆಯ ಓವರ್ ಹೆಡ್ ಟ್ರಾಫಿಕ್ ಸೈನೇಜ್ ಕೆ.ಆರ್.ಪುರಂ ಮತ್ತು ತುಮಕೂರು ಸೇರಿದಂತೆ ನಾಲ್ಕು ವಿಭಿನ್ನ ಸ್ಥಳಗಳಿಗೆ ನಿರ್ದೇಶನಗಳನ್ನು ಹೊಂದಿತ್ತು. ಆ ನಾಲ್ಕು ಸ್ಥಳಗಳಲ್ಲಿ ಬೆಂಗಳೂರನ್ನು ಎರಡು ಬಾರಿ ಮುದ್ರಿಸಲಾಗಿದೆಯಂತೆ.
"ಇದು ನಗರದ ಕಡೆಗೆ ಬರುವ ವಿಮಾನ ನಿಲ್ದಾಣ ರಸ್ತೆಯಲ್ಲಿದೆ. ಎರಡು ಬಾರಿ ಈ ರೀತಿಯಾಗಿ ಬರೆದಿರುವುದರಿಂದ ಹೊಸಬರಿಗೆ ಇದು ಗೊಂದಲವಾಗುತ್ತದೆ. ಬೆಂಗಳೂರು ಮತ್ತು ಬೆಂಗಳೂರು ಎರಡು ವಿಭಿನ್ನ ನಗರಗಳೇ...? ಎಂದು ನಗರಕ್ಕೆ ಬರುವ ಹೊಸಬರು ಯಾರಾದರೂ ಖಂಡಿತವಾಗಿಯೂ ಆಶ್ಚರ್ಯ ಪಡುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ವ್ಯಕ್ತಿಯೊಬ್ಬರು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಬರೆದು ಟ್ರಾಫಿಕ್ ಚಿಹ್ನೆಯ ಫೋಟೊವನ್ನು ಹಂಚಿಕೊಂಡಿದ್ದಾರೆ.
This is on airport road towards the city. I bet someone new to the country and/ or the city will definitely wonder if Bengaluru and Bangaluru are two different cities! 🤦♂️ pic.twitter.com/QcF1Il3CHs
— Sanjeev (@geniusparadox) January 22, 2025
ಈ ತಪ್ಪನ್ನು ನೋಡಿದ ನಂತರ ಅನೇಕ ನೆಟ್ಟಿಗರ ಗಮನವನ್ನು ಈ ಪೋಸ್ಟ್ ಸೆಳೆಯಿತು. ಇದು ಹೊಸಬರಿಗೆ ಗೊಂದಲವನ್ನುಂಟು ಮಾಡಬಹುದು ಎಂದು ಭಾವಿಸಿ ಕೆಲವರು ನಗರ ಅಧಿಕಾರಿಗಳನ್ನು ಟೀಕಿಸಿದ್ದಾರೆ.
ಮಣಿಪಾಲ್ (ಹಿಂದೆ ಕೊಲಂಬಿಯಾ ಏಷ್ಯಾ) ಆಸ್ಪತ್ರೆ / ಎಸ್ಟೀಮ್ ಮಾಲ್ ಬಳಿ ಈ ಸೈನ್ ಬೋರ್ಡ್ ಇದೆ ಎಂದು ವ್ಯಕ್ತಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಬ್ಬ ನೆಟ್ಟಿಗರು ತಮಾಷೆಯಾಗಿ,"ಬೆಂಗಳೂರಿನಲ್ಲಿ ಬಾಂಗ್ಲಾ ವಸಾಹತು ಅಸ್ತಿತ್ವದಲ್ಲಿದೆ" ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪಾಳುಬಿದ್ದ ಮನೆಗೆ ಹೋದ ವ್ಯಕ್ತಿಗೆ ಗೋಡೆಯಲ್ಲಿ ಸಿಕ್ಕಿದ್ದೇನು? ಬೆಚ್ಚಿ ಬೀಳಿಸುವ ವಿಡಿಯೊ ವೈರಲ್!
"ಇದು ಉತ್ತರ ಬೆಂಗಳೂರಿನ ಒಂದು ಸ್ಥಳವಾದ 'ಬಾಗಲೂರು'. ಮುದ್ರಣ ತಪ್ಪಾಗಿರಬಹುದು" ಎಂದು ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ. "ಇದು ಗೊಂದಲಮಯವಾಗಿದೆ" ಎಂದು ಮೂರನೆಯವರು ಹೇಳಿದ್ದಾರೆ. ಒಬ್ಬ ವ್ಯಕ್ತಿಯು ತಮಾಷೆಯಾಗಿ, "ವೇಗದಲ್ಲಿ ಬರುವ ಚಾಲಕರು ನಿಧಾನವಾಗಿ ಚಲಿಸಲು ಮತ್ತು ಅಪಘಾತಗಳು ಕಡಿಮೆಯಾಗಲು ಇದನ್ನು ಉದ್ದೇಶಪೂರ್ವಕವಾಗಿ ಮಾಡಿರಬಹುದು" ಎಂದಿದ್ದಾರೆ. ಈ ಪೋಸ್ಟ್ 40,000ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.