Viral News: ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ: ಡಾಕ್ಟರ್‌ಗೆ ಮೆಸೇಜ್ ಕಳಿಸಿದ ಸೊಸೆ!
ಈ ಬಗ್ಗೆ ದೂರು ನೀಡಲು ತೆರಳುವಾಗ ವಿಡಿಯೋ ಮೂಲಕ ಮಾತನಾಡಿರುವ ವೈದ್ಯ ಸುನಿಲ್, ಯುವತಿ ಒಬ್ಬರು ಮೆಸೇಜ್ ಮಾಡಿ, ನಾನು ನಮ್ಮ ಅತ್ತೆಯನ್ನು ಸಾಯಿಸಬೇಕು. ಅವರಿಗೆ 70 ವರ್ಷವಾಗಿದೆ, ಯಾವುದಾದರೂ ಮಾತ್ರೆ ಇದ್ದರೆ ಹೇಳಿ ಅಂದರು. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಲು ಬಂದಿದ್ದೇನೆ ಎಂದರು.

ದೂರು ನೀಡಿದ ವೈದ್ಯ ಸುನಿಲ್ ಕುಮಾರ್

ಬೆಂಗಳೂರು: ನಮ್ಮ ಅತ್ತೆ (mother in law) ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ (Idea to kill) ಕೊಡಿ, ಯಾವುದಾದರೂ ಮಾತ್ರೆ ಕೊಡಿ ಎಂದು ಮಹಿಳೆಯೊಬ್ಬರು ವೈದ್ಯರೊಬ್ಬರ ಬಳಿ ಸಲಹೆ ಕೇಳಿರುವ ವಿಚಿತ್ರ ಘಟನೆ (Viral news) ಬೆಂಗಳೂರಿನಲ್ಲಿ (Bengaluru News) ಬೆಳಕಿಗೆ ಬಂದಿದೆ. ಇದರಿಂದ ಗಾಬರಿಯಾದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ (Crime News) ದಾಖಲಿಸಿಕೊಂಡಿದ್ದಾರೆ.
ವೈದ್ಯ ಸುನಿಲ್ ಕುಮಾರ್ ಎಂಬವರಿಗೆ ಮೆಸೇಜ್ ಕಳುಹಿಸಿರುವ ಮಹಿಳೆಯೊಬ್ಬರು, ತಮ್ಮ ಅತ್ತೆಯನ್ನು ಸಾಯಿಸಲು ಮಾತ್ರೆಯ ವಿವರ ಕೊಡುವಂತೆ ಕೇಳಿದ್ದಾರೆ. ಮಹಿಳೆಯ ಮಾತು ಕೇಳಿ ಆತಂಕಗೊಂಡ ವೈದ್ಯ ಸುನಿಲ್ ಕುಮಾರ್ ಅವರು ಸಂಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಸುನಿಲ್ ಕುಮಾರ್ ಅವರ ನಂಬರ್ ಪಡೆದಿದ್ದ ಮಹಿಳೆ, ಸೋಮವಾರ ವಾಟ್ಸ್ಆ್ಯಪ್‌ನಲ್ಲಿ ಮೆಸೇಜ್ ಮಾಡಿದ್ದಾರೆ. 'ನಮ್ಮ ಅತ್ತೆಗೆ ವಯಸ್ಸಾಗಿದೆ, ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅವರನ್ನು ಸಾಯಿಸಲು ಯಾವುದಾದರೂ ಐಡಿಯಾ ಹೇಳಿ, ಟ್ಯಾಬ್ಲೆಟ್ ಕುರಿತು ಮಾಹಿತಿ ಕೊಡಿ' ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ 'ನಾವು ಪ್ರಾಣ ಉಳಿಸುವವರು' ಎಂದಿದ್ದಾರೆ. ತಕ್ಷಣ ತನ್ನ ಮೆಸೇಜ್‌ಗಳನ್ನ ಡಿಲೀಟ್ ಮಾಡಿರುವ ಮಹಿಳೆ ಸುನಿಲ್ ಕುಮಾರ್ ಅವರ ನಂಬರ್ ಬ್ಲಾಕ್ ಮಾಡಿದ್ದಾರೆ. ಇದೊಂದು ಪ್ರಾಂಕ್ ಸಂದೇಶವೋ ಅಥವಾ ಅಸಲಿ ಉದ್ದೇಶವೋ ಎಂಬುದು ತಿಳಿಯದೇ, ಗೊಂದಲಕ್ಕೀಡಾಗಿರುವ ಸುನಿಲ್ ಕುಮಾರ್ ಮಹಿಳೆಯ ಕುರಿತು ಸಂಜಯನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ದೂರು ನೀಡಲು ತೆರಳುವಾಗ ವಿಡಿಯೋ ಮೂಲಕ ಮಾತನಾಡಿರುವ ವೈದ್ಯ ಸುನಿಲ್, ''ಯುವತಿ ಒಬ್ಬರು ಮೆಸೇಜ್ ಮಾಡಿ, ನಾನು ನಮ್ಮ ಅತ್ತೆಯನ್ನು ಸಾಯಿಸಬೇಕು. ಅವರಿಗೆ 70 ವರ್ಷವಾಗಿದೆ, ಯಾವುದಾದರೂ ಮಾತ್ರೆ ಇದ್ದರೆ ಹೇಳಿ ಅಂದರು. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಲು ಬಂದಿದ್ದೇನೆ. ನಾವು ಎಷ್ಟೋ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತೇವೆ. ಆದರೆ, ಆಶ್ಚರ್ಯವೇನೆಂದರೆ ತಮ್ಮ ಅತ್ತೆಯನ್ನು ಸಾಯಿಸಲು ಮಾತ್ರೆ ಬರೆದುಕೊಡಿ ಎಂದು ಕೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ತರಹದ ಬಹಳಷ್ಟು ಘಟನೆಗಳು ನಡೆಯುತ್ತಲೇ ಇರುತ್ತವೆ. ಹಲವರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ನಾನು ಪೊಲೀಸರಿಗೆ ದೂರು ನೀಡುತ್ತಿದ್ದೇನೆ'' ಎಂದು ಹೇಳಿದ್ದಾರೆ.
''ಮೆಸೇಜ್‌ಗಳನ್ನು ಕಳುಹಿಸಿರುವ ನಂಬರ್ ಸ್ವಿಚ್ಡ್ ಆಫ್ ಆಗಿದೆ. ಪ್ರಾಂಕ್ ಮೆಸೇಜ್ ಆಗಿರಬಹುದು ಎಂದು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸುನಿಲ್ ಕುಮಾರ್ ಅವರು ನೀಡಿರುವ ಮಾಹಿತಿಯ ಅನ್ವಯ ತನಿಖೆ ನಡೆಸುತ್ತಿದ್ದೇವೆ'' ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಸಿಂಗಾಪುರ್ ಏರ್‌ಲೈನ್ಸ್‌ನಲ್ಲಿ ಟಾಯ್ಲೆಟ್‍ಗೆ ಹೋಗದೆ ಈ ಶ್ವಾನ ಮಾಡಿದ್ದೇನು? ವಿಡಿಯೊ ನೋಡಿ