ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಡಾಗ್‌ ಜರ್ನಿ! 5.5 ಗಂಟೆಗಳ ಹಾರಾಟ ಹೇಗಿತ್ತು? ವಿಡಿಯೊ ನೋಡಿ

ಸಿಂಗಾಪುರ್ ಏರ್‌ಲೈನ್ಸ್‌ನ ಬಿಸಿನೆಸ್ ಕ್ಲಾಸ್‍ನಲ್ಲಿ ಸ್ಪಾಟಿ ಎಂಬ ಸ್ವಿಸ್ ಡಾಲ್ಮೇಶಿಯನ್ ನಾಯಿ ಸಿಂಗಾಪುರದಿಂದ ಟೋಕಿಯೊಗೆ 5.5 ಗಂಟೆಗಳ ಹಾರಾಟದಲ್ಲಿ ಟಾಯ್ಲೆಟ್‍ಗೆ ಹೋಗದೆ ತನ್ನ ಸೀಟ್‌ನಲ್ಲಿ ಕುಳಿತಿದೆಯಂತೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral vIdeo) ಆಗಿದೆ. ಹಲವರು ನಾಯಿಯನ್ನು ಮೆಚ್ಚಿಕೊಂಡಿದ್ದಾರೆ.

ಬ್ಯುಸಿನೆಸ್‌ ಕ್ಲಾಸ್‍ನಲ್ಲಿ ಶ್ವಾನದ ಜರ್ನಿ!ವಿಡಿಯೊ ವೈರಲ್

Profile pavithra Feb 19, 2025 3:14 PM

ಸಿಂಗಾಪುರ: ಕೆಲವರು ಎಷ್ಟೇ ಮುದ್ದಾಗಿ ನಾಯಿಯನ್ನು ಸಾಕಿದ್ರೂ ಅವುಗಳನ್ನು ದೂರದೂರಿಗೆ ಕರೆದುಕೊಂಡು ಪ್ರಯಾಣ ಬೆಳೆಸುವಾಗ ಹಿಂಜರಿಯುತ್ತಾರೆ. ಯಾಕೆಂದರೆ ಅವುಗಳಿಗೆ ಟಾಯ್ಲೆಟ್‌ ಹೋಗಲು ಕಷ್ಟವಾಗುತ್ತದೆ ಎಂಬ ಕಾರಣ ಕೂಡ ಇದರಲ್ಲಿ ಒಂದು. ಆದರೆ ಸಿಂಗಾಪುರ್ ಏರ್‌ಲೈನ್ಸ್‌ನ ಬ್ಯುಸಿನೆಸ್ ಕ್ಲಾಸ್‍ನಲ್ಲಿ ನಾಯಿವೊಂದು ಟಾಯ್ಲೆಟ್‍ಗೆ ಹೋಗದೆ ಹಲವು ಗಂಟೆಗಳ ಕಾಲ ಸದ್ದಿಲ್ಲದೆ ಕುಳಿತಿದೆಯಂತೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಸ್ಪಾಟಿ ಎಂಬ ಸ್ವಿಸ್ ಡಾಲ್ಮೇಶಿಯನ್ ನಾಯಿಯ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗಿದೆ. ಸಿಂಗಾಪುರದಿಂದ ಟೋಕಿಯೊಗೆ 5.5 ಗಂಟೆಗಳ ಹಾರಾಟದಲ್ಲಿ ನಾಯಿ ಮಲ ಮೂತ್ರ ವಿಸರ್ಜನೆ ಮಾಡದೇ ತನ್ನ ಸೀಟ್‌ನಲ್ಲೇ ಕುಳಿತಿದೆಯಂತೆ. "ಸ್ಪಾಟಿ ಜಪಾನ್‍ಗೆ ಹೋಗುತ್ತಿದೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ವಿಡಿಯೊದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವಿಡಿಯೊದಲ್ಲಿ ಸ್ಪಾಟಿ ತನ್ನ ಬ್ಯುಸಿನೆಸ್ ಕ್ಲಾಸ್ ಸೀಟ್‍ನಲ್ಲಿ ಯಾವುದೇ ಕಿರಿಕಿರಿ ಮಾಡದೇ ಸುಮ್ಮನೇ ಕುಳಿತಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರನ್ನು ಆಶ್ಚರ್ಯಗೊಳಿಸಿದೆ. "ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಬ್ಯುಸಿನೆಸ್ ಕ್ಲಾಸ್‍ನಲ್ಲಿ ನಾಯಿಯನ್ನು ಕರೆದುಕೊಂಡು ಹೋಗಲು ನಿಮಗೆ ಹೇಗೆ ಅನುಮತಿ ಸಿಕ್ಕಿತು?” ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿದ ಸ್ಪಾಟಿಯ ಮಾಲೀಕರು, "ಹಲೋ, ಸ್ಪಾಟಿ ರಿಜಿಸ್ಟರ್ಡ್ ಸರ್ವಿಸ್ ನಾಯಿಯಾಗಿದೆ ಎಂದು ಹೇಳಿದ್ದಾರೆ.

ಇನ್ನೊಬ್ಬರು ಕಾಮೆಂಟ್‌ ಮಾಡಿ ಸೂಪರ್ ಕ್ಯೂಟ್ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸ್ಪಾಟಿ ಮಾಲೀಕರು, "ಸಿಂಗಾಪುರದಿಂದ ಟೋಕಿಯೊಗೆ ವಿಮಾನದಲ್ಲಿ ಕೇವಲ 5.5 ಗಂಟೆಗಳು ಪ್ರಯಾಣಿಸಬೇಕಾಗುತ್ತದೆ. ಬೆಳಗಿನ ಉಪಾಹಾರವಿಲ್ಲ, ಇಳಿಯುವ ಒಂದು ಗಂಟೆ ಮೊದಲು ನೀರು ಇಲ್ಲ. ಆದರೂ ಅದು ಆರಾಮವಾಗಿದೆ. ಅದು ಚೆನ್ನಾಗಿ ತರಬೇತಿ ಪಡೆದಿದೆ ಮತ್ತು ಬ್ಯಾಕಪ್ ಆಗಿ ಕೆಲವು ಪೀ ಪ್ಯಾಡ್‍ಗಳನ್ನು ಹೊಂದಿದೆ” ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಶ್ವಾನ ಹಾಗೂ ಮಾಲೀಕರ ನಡುವಿನ ಪ್ರೀತಿಯ ಬೆಸುಗೆಗೆ ಸಾಕ್ಷಿಯಾದ ತಾಜ್ ಮಹಲ್

ತಾಜ್ ಮಹಲ್ ಪ್ರೀತಿಯ ಸಂಕೇತವಾಗಿದೆ. ಇದು ಶಾಹಜಾನ್ ಮತ್ತು ಮುಮ್ತಾಜ್ ಪ್ರೀತಿಗೆ ಸಾಕ್ಷಿಯಾಗಿದೆ. ಇದೀಗ ಈ ತಾಜ್ ಮಹಲ್ ಮತ್ತೊಂದು ಮರೆಯಲಾಗದ ಕತೆಗೆ ಸಾಕ್ಷಿಯಾಗಿದೆ. ಆದರೆ ಅದು ಪ್ರೇಮಿಗಳ ಕತೆಯಲ್ಲ ಬದಲಾಗಿ ನಾಯಿ ಹಾಗೂ ಅದರ ಮಾಲೀಕರ ಪ್ರೀತಿಯ ಕತೆ. ಏರ್ ಇಂಡಿಯಾ ಅಧಿಕಾರಿ ದೀಪಾಯನ್ ಘೋಷ್ ಮತ್ತು ಆತನ ಪತ್ನಿ ಕಸ್ತೂರಿ ಪಾತ್ರಾ 2024 ರ ನವೆಂಬರ್‌ನಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿ ತಮ್ಮ ನಾಯಿಯ ಜೊತೆ ಗುರುಗ್ರಾಮದಿಂದ ಆಗ್ರಾಕ್ಕೆ ಭೇಟಿ ನೀಡಿದ್ದಾರೆ. ನವೆಂಬರ್ 3 ರಂದು ಅವರ ಪ್ರೀತಿಯ ನಾಯಿ ಹೋಟೆಲ್‌ನಿಂದ ಕಣ್ಮರೆಯಾದಾಗ ವಿವಾಹ ಆಚರಣೆಯ ಸಂಭ್ರಮ ಮರೆಯಾಗಿ ನಾಯಿಯನ್ನು ಕಳೆದುಕೊಂಡು ದುಃಖದಲ್ಲಿ ಚಡಪಡಿಸಿದ್ದಾರೆ. ಅವರು ತಮ್ಮ ನಾಯಿಯನ್ನು ಹುಡುಕಲು ಆಗ್ರಾದಾದ್ಯಂತ ಪೋಸ್ಟರ್‌ಗಳನ್ನು ಅಂಟಿಸಿ ಬಹುಮಾನಗಳನ್ನು ಘೋಷಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಕೊನೆಗೆ ಅವರ ನಾಯಿ ಸಿಕ್ಕಿತು. ನಾಯಿ ಹಾಗೂ ಮಾಲೀಕರ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌(Viral News) ಆಗಿದೆ.