Raj B shetty- Anushree: ಕುಂಭಮೇಳದಲ್ಲಿ ಸ್ನೇಹಿತರ ಜತೆಗೆ ರಾಜ್ ಬಿ ಶೆಟ್ಟಿ ಹಾಗೂ ಆ್ಯಂಕರ್ ಅನುಶ್ರೀ ಪುಣ್ಯಸ್ನಾನ!
ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಹರಿದು ಬರುತ್ತಿದ್ದಾರೆ. ನಿನ್ನೆ ಮೌನಿ ಅಮಾವಾಸ್ಯೆಯ ಪ್ರಯುಕ್ತ ಪ್ರಯಾಗ್‌ರಾಜ್‌ನಲ್ಲಿ ಹತ್ತು ಕೋಟಿಗೂ ಹೆಚ್ಚು ಭಕ್ತರು ಸೇರಿದ್ದರು ಎನ್ನಲಾಗಿದೆ. ಈ ಮಧ್ಯೆ ಕನ್ನಡದ ಖ್ಯಾತ ನಟ ರಾಜ್ ಬಿ ಶೆಟ್ಟಿ ಮತ್ತು ಆ್ಯಂಕರ್ ಅನುಶ್ರೀ ಕೂಡ ಕುಂಭಮೇಳದಲ್ಲಿ ಪಾಲ್ಗೊಂಡು ನಿನ್ನೆ ಅಮೃತ ಸ್ನಾನ ಮಾಡಿದ್ದಾರೆ.

Mahakumbh 2025

ಬೆಂಗಳೂರು: ಪ್ರಯಾಗ್‌ರಾಜ್‌ನಲ್ಲಿ(Prayagraj) ಮಹಾ ಕುಂಭಮೇಳವು (Mahakumbh) ಅದ್ಧೂರಿಯಾಗಿ ನಡೆಯುತ್ತಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವಕ್ಕೆ ಕೋಟ್ಯಂತರ ಭಕ್ತರು ಹರಿದು ಬರುತ್ತಿದ್ದಾರೆ. ಇದೀಗ ಕನ್ನಡಿಗರ ದಂಡೇ ಅಲ್ಲಿ ಸೇರಿದೆ. ಸ್ಯಾಂಡಲ್ ವುಡ್ ನಟ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ರಾಜ್ ಬಿ ಶೆಟ್ಟಿ(Raj B Shetty) ಮತ್ತು ಖ್ಯಾತ ನಿರೂಪಕಿ ಅನುಶ್ರೀ(Anushree) ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದು, ಮೌನಿ ಅಮಾವಾಸ್ಯೆಯ(Mauni Amavasya) ಪ್ರಯುಕ್ತ ಅಮೃತ ಸ್ನಾನ(Amrit Snaan) ಮಾಡಿದ್ದಾರೆ. ಅಲ್ಲಿನ ತ್ರಿವೇಣಿ ಸಂಗಮದ ಮುಂದೆ ನಿಂತಿರುವ ಒಂದಷ್ಟು ಫೋಟೊಗಳನ್ನು ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಟ ರಾಜ್ ಬಿ ಶೆಟ್ಟಿ ಬಿಳಿ ಶರ್ಟ್ ಹಾಕಿಕೊಂಡಿದ್ದು, ಕುತ್ತಿಗೆಯಲ್ಲಿ ರುದ್ರಾಕ್ಷಿ ಹಾರ ಧರಿಸಿ, ಹಣೆ ಮೇಲೆ ಗಂಧವನ್ನು ಹಚ್ಚಿ ಅದರ ಮೇಲೆ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ. ಕರ್ನಾಟಕದ ಜನಪ್ರಿಯ ನಿರೂಪಕಿ, ನಟಿ, ನಿರ್ದೇಶಕಿ ಅನುಶ್ರೀಯವರು ಹಾಗೂ ಚಾರ್ಲಿ 777 ನಿರ್ದೇಶಕರಾಗಿರುವ ಕಿರಣ್ ರಾಜ್ ಕೂಡ ಜೊತೆಯಾಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಂತಾರಾ ಸಿನಿಮಾ ಖ್ಯಾತಿಯ ರಂಜನ್ ಎಸ್ ಹಾಗೂ ಮತ್ತಿತರರು ಕೂಡ ಭಾಗಿಯಾಗಿದ್ದಾರೆ.
ಈ ಸುದ್ದಿಯನ್ನೂ ಓದಿ:Mahakumbh Mela Stampede: ಮಹಾ ಕುಂಭಮೇಳ ಕಾಲ್ತುಳಿತ; ಕನ್ನಡಿಗರ ನೆರವಿಗಾಗಿ ಸಹಾಯವಾಣಿ ಆರಂಭ
ನಿರೂಪಕಿ ಅನುಶ್ರೀಯವರು ಈ ವಾರ ಸರಿಗಮಪ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಅನುಶ್ರೀ ನಿರೂಪಣೆಗೆ ಗುಡ್ ಬೈ ಹೇಳುತ್ತಿದ್ದಾರೆ, ಅಥವಾ ಮದುವೆಯ ತಯಾರಿಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಮದುವೆ ಶಾಪಿಂಗ್ ಮಾಡೋದಕ್ಕೆ ದುಬೈಗೆ ತೆರಳುವುದಾಗಿ ಸಾಕಷ್ಟು ಗುಸು ಗುಸು ಕೇಳಿ ಬರುತ್ತಿತ್ತು. ಆದರೆ ಇದೀಗ ರಾಜ್ ಬಿ ಶೆಟ್ಟಿ ಹಾಗೂ ಇತರರೊಂದಿಗೆ ಮಹಾಕುಂಭಕ್ಕೆ ತೆರಳಿ ತ್ರಿವೇಣಿ ಸಂಗಮದಲ್ಲಿ ಮಿಂದಿದ್ದಾರೆ.
ಅನುಶ್ರೀ ಅವರ ಮದುವೆ ನಿಶ್ಚಯವಾಗಿದೆ ಎನ್ನಲಾಗುತ್ತಿದೆ. ಆದರೆ ಮದುವೆ ಯಾವಾಗ ಎಂಬ ಮಾಹಿತಿ ಈವರೆಗೂ ಹೊರ ಬಿದ್ದಿಲ್ಲ.