ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shanmukha Govindraj: ಅಣ್ಣಾವ್ರ ಹೆಸರು ಹೇಳಿಕೊಂಡು ಸಿನಿಮಾಕ್ಕೆ ಬರಬೇಡಿ... ಷಣ್ಮುಖ ಗೋವಿಂದ ರಾಜ್‌ಗೆ ನೆಟ್ಟಿಗರ ಟೀಕೆ!

ರಾಜ್ ಕುಮಾರ್‌ ಮೊಮ್ಮಗ ಷಣ್ಮುಕ ಗೋವಿಂದ ರಾಜ್ (Shanmukha Govindraj)ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ನಿಂಬಿಯ ಬನದ ಮ್ಯಾಗ‌ ಚಿತ್ರದ ಮೂಲಕ‌ ಸಿನಿ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ‌. ಈಗಾಗಲೇ ಸಿನಿಮಾ ಎಪ್ರಿಲ್‌ 4ರಂದು ಬಿಡುಗಡೆಯಾಗಿದ್ದು‌ ಚಿತ್ರದ ಪ್ರಚಾರ ಕೆಲಸ ಜೋರಾಗಿಯೇ ನಡೆಯುತ್ತಿದೆ. ಒಂದೆಡೆ ದೊಡ್ಮನೆ ಅಭಿ ಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ  ಷಣ್ಮುಖ ಗೋವಿಂದರಾಜ್‌ ಅವರನ್ನು ಟ್ರೋಲ್‌ ಕೂಡ ಮಾಡುತ್ತಿದ್ದಾರೆ.

ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದ್‌ರಾಜ್‌ಗೆ ಫುಲ್‌ ಟ್ರೋಲ್!

Profile Pushpa Kumari Apr 8, 2025 7:20 PM

ಬೆಂಗಳೂರು: ದೊಡ್ಮನೆ ಕುಟುಂಬದ ಅನೇಕರು ಸಿನಿ ಪರದೆಯಲ್ಲಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಕನ್ನಡದ ವರನಟ ಡಾ. (Dr Rajkumar) ರಾಜ್ ಕುಮಾರ್‌ ಕುಟುಂಬದ ಕುಡಿ ಷಣ್ಮುಖ ಗೋವಿಂದ ರಾಜ್ (Shanmukha Govindraj) ಅವರುನಿಂಬಿಯ ಬನದ ಮ್ಯಾಗ‌ (Nimbiya Banada Myaga)ಚಿತ್ರದ ಮೂಲಕ‌ ಸಿನಿ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ‌. ಈಗಾಗಲೇ ಸಿನಿಮಾ ಎಪ್ರಿಲ್‌ 4ರಂದು ಬಿಡುಗಡೆಯಾಗಿದ್ದು‌ ಚಿತ್ರದ ಪ್ರಚಾರ ಕೆಲಸ ಜೋರಾ ಗಿಯೇ ನಡೆಯುತ್ತಿದೆ. ಒಂದೆಡೆ ದೊಡ್ಮನೆ ಅಭಿ ಮಾನಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಷಣ್ಮುಖ ಗೋವಿಂದರಾಜ್‌ ಅವರನ್ನು ಟ್ರೋಲ್‌ ಕೂಡ ಮಾಡುತ್ತಿದ್ದಾರೆ. ಷಣ್ಮುಖ ಗೋವಿಂದರಾಜ್‌  ರೂಪದ ಬಗ್ಗೆ ಕೆಲವರು  ಟೀಕೆ ಮಾಡುತ್ತಿದ್ದು ಅಣ್ಣಾವ್ರ ಹೆಸರು ಹೇಳಿ ಸಿನಿಮಾಕ್ಕೆ ಬರಬಾರದಿತ್ತು ಎನ್ನುವ ಅಭಿಪ್ರಾಯವು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿಬರುತ್ತಿದೆ.

ಡಾ ರಾಜ್‌ಕುಮಾರ್‌ ಬಳಿಕ ದೊಡ್ಮನೆ ಕುಟುಂಬ ಚಿತ್ರರಂಗದಲ್ಲಿ ಸಕ್ರಿಯವಿದೆ. ಅಣ್ಣಾವ್ರ ಬಳಿಕ ಶಿವರಾಜ್‌ ಕುಮಾರ್‌, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌ ಅವರ ಇಬ್ಬರು ಪುತ್ರರು‌ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ರಾಜ್‌ಕುಮಾರ್‌ ಹಿರಿ ಮಗಳು ಲಕ್ಷ್ಮೀ ಗೋವಿಂದರಾಜು ಅವರ ಪುತ್ರ ಷಣ್ಮುಖ ಗೋವಿಂದರಾಜ್‌ ʻನಿಂಬಿಯ ಬನದ ಮ್ಯಾಗʼ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ. ಆದರೆ ಡಾ ರಾಜ್‌ಕುಮಾರ್‌ ಮೊಮ್ಮಗ ಷಣ್ಮುಖ ಗೋವಿಂದ ರಾಜ್ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ದೊಡ್ಮನೆಯ ವಿರುದ್ಧ ಕೆಲವರು ಟ್ರೋಲ್‌ ಮಾಡಿದ್ದಾರೆ. ಟ್ಯಾಲೆಂಟ್‌ ಮೇಲೆ ಸಿನಿಮಾರಂಗಕ್ಕೆ ಬರಬೇಕು ರಾಜ್‌ಕುಮಾರ್‌ ಅವರ ಹೆಸರು ಹೇಳಿಕೊಂಡು ಬರುವುದು ಸರಿಯಲ್ಲ. ಡಾ ರಾಜ್‌ಕುಮಾರ್‌ ಅವರ ಹೆಸರು ಹೇಳಿಕೊಂಡು ಬಂದರೆ ಜನ ಒಪ್ಪಿಕೊಳ್ಳುವುದಿಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವರು, ಬಾಡಿ ಶೇಮಿಂಗ್‌ ಬಗ್ಗೆ ಕಾಮೆಂಟ್‌ ಮಾಡುತ್ತಿದ್ದಾರೆ.

ಸಿನಿಮಾ ಎನ್ನುವುದು ಎಲ್ಲರ ಪಾಲಿಗೆ ಒಲಿಯುವ ಕ್ಷೇತ್ರವಲ್ಲ. ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ನೇರವಾಗಿ ನಾಯಕ ನಟನಾಗಿ ಬರಬಾರದು. ಅಭಿನಯವನ್ನು ಕಲಿಯಬೇಕು, ಸಣ್ಣಪುಟ್ಟ ಪಾತ್ರ ಮಾಡಿ ಅನುಭವ ಸಂಪಾದಿಸಬೇಕು ಎಂದು. ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನು ಕೆಲವರು ಷಣ್ಮುಖ ಅವರ ಲುಕ್‌ ಕಂಡು ‌ ಮೂಗು ಸರ್ಜರಿ ಮಾಡಿಸಿ ಕೊಳ್ಳಬಹುದಿತ್ತು, ರಾಜಕುಮಾರ್ ಮೊಮ್ಮಗ ಎನ್ನುವ ಕಾರಣಕ್ಕೆ ನಟನೆಗೆ ಅವಕಾಶ ಸಿಕ್ಕಿರಬಹುದು ಎಂದು ಟ್ವೀಟ್ ‌ಮಾಡಿದ್ದಾರೆ. ಸದ್ಯ ಗೋವಿಂದರಾಜ್ ಅವರ ಮೊದಲ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆಯೇ ದೊಡ್ಮನೆಯ ವಿರುದ್ಧ ಟ್ರೋಲ್‌ಗಳ ಸುರಿಮಳೆಯೇ ಶುರುವಾಗಿದೆ. 

ಇದನ್ನು ಓದಿ: Nimbiya Banada Myaga Movie: ‘ನಿಂಬಿಯಾ ಬನಾದ ಮ್ಯಾಗ’ ಚಿತ್ರಕ್ಕೆ ಶಿವಣ್ಣ ದಂಪತಿ ಮೆಚ್ಚುಗೆ

ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು ನಾಯಕ ಷಣ್ಮುಖ ಜೊತೆ ನಟಿ ತನುಶ್ರೀ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಅಶೋಕ್ ಕಡಬ ನಿರ್ದೇಶನದ ಮಾಡಿದ್ದು ವಿ. ಮಾದೇಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಟ ಸುನಾದ್‌ ರಾಜ್ ಸೇರಿದಂತೆ ತ್ರಿಶಾ, ಪಂಕಜ್ ನಾರಾಯಣ್, ಸಂಗೀತ, ಭವ್ಯ, ರಾಮಕೃಷ್ಣ, ಮೂಗು ಸುರೇಶ್, ಸಿದ್ದು ಕಾಂಚನಹಳ್ಳಿ‌ ಛಾಯಾಗ್ರಹಣ, ರವಿತೇಜ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನವು ನಿಂಬಿಯಾ ಬನಾದ ಮ್ಯಾಗ ಸಿನಿಮಾಕ್ಕಿದೆ. ಈ ಸಿನೆ ಮಾವನ್ನು ದೊಡ್ಮನೆ ಕುಟುಂಬವು‌ ಈಗಾಗಲೇ ವೀಕ್ಷಿಸಿದ್ದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಸಿನಿಮಾ ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.