#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Spirit Movie: ಸೆಟ್ಟೇರುವ ಮುಂಚೆಯೇ ಪ್ರಭಾಸ್‌ ಚಿತ್ರದ ಬಿಡುಗಡೆ ಡೇಟ್ ಫಿಕ್ಸ್

ಸಂದೀಪ್ ವಂಗಾ ಅವರು ಪ್ರಭಾಸ್ ನಟನೆಯ ʼಸ್ಪಿರಿಟ್ʼ ಚಿತ್ರದ ಕೆಲಸವನ್ನು ಪ್ರಾರಂಭಿಸಲು ಸಿದ್ಧತೆ ಮಾಡಿ ಕೊಂಡಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾದ ಚಿತ್ರೀಕರಣ 2025ರ ಮೇಯಲ್ಲಿಆರಂಭವಾಗಲಿದೆ. ಈಗ ಪ್ರಿಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಬಹಳಷ್ಟು ಎಕ್ಸೈಟ್ ಆಗಿದ್ದಾರೆ. ಪ್ರಭಾಸ್ ಅವರು ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊರಬಿತ್ತು ಪ್ರಭಾಸ್ ನಟನೆಯ 'ಸ್ಪಿರಿಟ್' ಚಿತ್ರದ ಇಂಟ್ರಸ್ಟಿಂಗ್ ಅಪ್‌ಡೇಟ್

ಪ್ರಭಾಸ್‌ ಮತ್ತು ಸಂದೀಪ್ ರೆಡ್ಡಿ ವಂಗಾ.

Profile Pushpa Kumari Jan 30, 2025 9:24 PM

ನವದೆಹಲಿ: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡ ʼಕಲ್ಕಿ 2898 ಎಡಿʼ ಸಿನಿಮಾ ಹಿಟ್ ಆದ ಬಳಿಕ ಟಾಲಿವುಡ್ ಸ್ಟಾರ್ ಪ್ರಭಾಸ್ (Prabhas) ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಎಲ್ಲರಲ್ಲೂ ಇದೆ. ಸದ್ಯ ಸಂದೀಪ್ ರೆಡ್ಡಿ ವಂಗಾ ಜತೆ ಅವರು ʼಸ್ಪಿರಿಟ್ʼ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ʼಸ್ಪಿರಿಟ್ʼ ಸಿನಿಮಾ ಸೆಟ್ಟೇರುವ ಮುನ್ನವೇ ಬಹಳಷ್ಟು ಸುದ್ದಿಯಾಗಿದ್ದು, ಇದೀಗ ಸಖತ್ ಎಕ್ಸೈಟಿಂಗ್ ಅಪ್‌ಡೇಟ್‌ ಹೊರ ಬಿದ್ದಿದೆ.

ರೆಬೆಲ್ ಸ್ಟಾರ್ ಪ್ರಭಾಸ್ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಬ್ಯುಸಿ ಇದ್ದು‌ ಸದ್ಯ ʼಸ್ಪಿರಿಟ್ʼ ಚಿತ್ರದ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಆಗಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಂತೂ ಬಹಳಷ್ಟು ಎಕ್ಸೈಟ್ ಆಗಿದ್ದಾರೆ. ಅಲ್ಲದೆ ಪ್ರಭಾಸ್ ಅವರು ಹಿಂದೆಂದೂ ಕಾಣದ ಆ್ಯಕ್ಷನ್‌ ಅವತಾರ ತಾಳಲಿದ್ದಾರೆ.

ಇದೀಗ ಸಂದೀಪ್ ವಂಗಾ ʼಸ್ಪಿರಿಟ್ʼ ಚಿತ್ರದ ಕೆಲಸವನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾ ʼಸ್ಪಿರಿಟ್ʼನ ಚಿತ್ರೀಕರಣ 2025ರ ಮೇಯಲ್ಲಿ​ ಆರಂಭವಾಗಲಿದೆ. ಈಗ ಪ್ರಿ ಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ಸಾಗುತ್ತಿದ್ದು ಚಿತ್ರ ಮುಂದಿನ ವರ್ಷ ಬಿಡುಗಡೆ ಸಿದ್ಧತೆಯಲ್ಲಿದೆ.

ಇನ್ನೊಂದು ಆಸಕ್ತಿದಾಯಕ ವಿಚಾರ ಅಂದರೆ ‌ ಪವರ್‌ಫುಲ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲು ಪ್ರಭಾಸ್ ತನ್ನ ಪಾತ್ರಕ್ಕೆ ಸರಿಹೊಂದಲು‌ ತರಬೇತಿಯನ್ನು ಕೂಡ ಪಡೆಯುತ್ತಿದ್ದಾರೆ. ಜಕಾರ್ತಾ, ಇಂಡೋನೇಷ್ಯಾದಲ್ಲಿ ಫಸ್ಟ್ ಶೆಡ್ಯೂಲ್ ಶುರು ಮಾಡೋ ಪ್ಲಾನ್ ಇದೆ ಎಂದು ಹೇಳಲಾಗುತ್ತಿದೆ.

ವಂಗಾ ಅವರು ಸ್ಕ್ರಿಪ್ಟ್ ಅನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಇಂಟರ್‌ನ್ಯಾಷನಲ್ ಡ್ರಗ್ಸ್ ಮಾಫಿಯಾ ಬಗ್ಗೆ ಚರ್ಚೆ ನಡೆಯಲಿದೆಯಂತೆ. ಪ್ರಭಾಸ್ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಕಥೆಯು ಇರಲಿದ್ದು, ಅದ್ಧೂರಿಯಾಗಿ ಮೂಡಿ ಬರಲಿದೆ. ಭದ್ರಕಾಳಿ ಬ್ಯಾನರ್ ಅಡಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಟೀ ಸಿರೀಸ್‌’ನ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ.

ಇದನ್ನು ಓದಿ: Share Cinema Teaser: ಕನ್ನಡತಿ ಖ್ಯಾತಿ ಕಿರಣ್‌ ರಾಜ್‌ ನಟನೆಯ ʼಶೇರ್‌ʼ ಸಿನಿಮಾದ ಟೀಸರ್‌ ರಿಲೀಸ್‌

ವರುಣ್ ತೇಜ್ ನೆಗೆಟಿವ್ ರೋಲ್ ಮಾಡ್ತಾರೆ ಎನ್ನುವ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ಬಾಲಿವುಡ್‌ ಬೆಡಗಿ ಕರೀನಾ ಕಪೂರ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ವದಂತಿಗಳೂ ಇದೆ.