Monday, 13th May 2024

ಗ್ರಾಮಸ್ಥರು ಒಪ್ಪಿದರೆ ನವಗ್ರಾಮ ನಿರ್ಮಾಣ…

ಮನೆ ಅಡಿಪಾಯ ಹಾಕಲು ವಾರದೊಳಗೆ 1 ಲಕ್ಷ ರು. ನೇಕಾರ ಕುಟುಂಬಗಳಿಗೂ ಸೂಕ್ತ ಪರಿಹಾರ

ಗ್ರಾಮ ಸ್ಥಳಾಂತರಕ್ಕೆೆ ನದಿ ತೀರದ ಗ್ರಾಾಮಸ್ಥರು ಲಿಖಿತವಾಗಿ ಒಪ್ಪಿಿಗೆ ಸೂಚಿಸಿದರೆ ಇಡೀ ಗ್ರಾಾಮವನ್ನು ಎತ್ತರದ ಪ್ರದೇಶಕ್ಕೆೆ ಸ್ಥಳಾಂತರಿಸಲಾಗುವುದು ಎಂದು ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಜಿಲ್ಲೆೆಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಾಮಕ್ಕೆೆ ಭೇಟಿ ನೀಡಿದ ಬಳಿಕ ಸುರೇಬಾನ ಗ್ರಾಾಮದ ಪರಿಹಾರ ಕೇಂದ್ರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ನವಗ್ರಾಾಮಗಳಲ್ಲಿ ಶಾಲೆ, ಆಸ್ಪತ್ರೆೆ ಸೇರಿದಂತೆ ಎಲ್ಲ ಬಗೆಯ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರ ಸಿದ್ಧವಿದೆ. ಪ್ರವಾಹದಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣಕ್ಕೆೆ ಅಡಿಪಾಯ ಹಾಕಲು ಒಂದು ವಾರದೊಳಗೆ ಒಂದು ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು. ಒಂದು ಮನೆ ನಿರ್ಮಾಣಕ್ಕೆೆ ಒಟ್ಟಾಾರೆ 5 ಲಕ್ಷ ರು. ನೀಡಲು ಸರಕಾರ ನಿರ್ಧರಿಸಿದ್ದು, ಮೊದಲ ಕಂತಿನಲ್ಲಿ ಅಡಿಪಾಯಕ್ಕೆೆ ನೀಡುವ 1 ಲಕ್ಷ ರು. ಬಳಸಿಕೊಂಡು ಕೆಲಸ ಆರಂಭಿಸಬೇಕು ಎಂದರು.

ಅದೇ ರೀತಿ ಮನೆಗಳ ದುರಸ್ತಿಿಗೆ 1 ಲಕ್ಷ ರು. ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ವ್ಯಾಪಾರಿಗಳಿಗೂ 10 ಸಾವಿರ ಪರಿಹಾರ
ಪ್ರವಾಹದಿಂದ ಹಾನಿಗೊಳಗಾದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಕೂಡ ತಲಾ 10 ಸಾವಿರ ರು. ಪರಿಹಾರ ನೀಡಲಾಗುವುದು ಹಾಗೂ ಬೆಳೆನಾಶಕ್ಕೆೆ ಸೂಕ್ತ ಪರಿಹಾರ ನೀಡಲು ಕೇಂದ್ರದಿಂದ ಹೆಚ್ಚಿಿನ ಪರಿಹಾರ ನೀಡಲು ಪ್ರಯತ್ನಿಿಸಲಾಗುತ್ತಿಿದ್ದು, ನೇಕಾರ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಅಂದಾಜುಪಟ್ಟಿಿ ತಯಾರಿಸಲು ಸೂಚನೆ
ಮಲಪ್ರಭಾ ನದಿ ದಂಡೆಯ ತಡೆಗೋಡೆ ಒಡೆದ ಪರಿಣಾಮ ಹಂಪಿಹೊಳಿ ಗ್ರಾಾಮಕ್ಕೆೆ ನೀರು ನುಗ್ಗುತ್ತಿಿರುವುದರಿಂದ ತಡೆಗೋಡೆ ನಿರ್ಮಾಣಕ್ಕೆೆ ಕೂಡಲೇ ಅಂದಾಜು ಪಟ್ಟಿಿಯನ್ನು ತಯಾರಿಸುವಂತೆ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಲ್ಲದೇ ತಡೆಗೋಡೆ ನಿರ್ಮಿಸಲು ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂತ್ರಸ್ತ ಕೇಂದ್ರದಲ್ಲಿ ಬಾಲಕ ಮೃತ
ರಾಮದುರ್ಗ ತಾಲೂಕಿನ ಸುರೇಬಾನ ಪ್ರವಾಹಪೀಡಿತರ ಸಂತ್ರಸ್ತ ಕೇಂದ್ರದಲ್ಲಿದ್ದ ಅಬ್ದುಲ್ ಸಾಬ್ ಮುಲ್ಲಾಾನವರ(5) ಜ್ವರದಿಂದ ಮೃತಪಟ್ಟಿಿದ್ದಾನೆ.
ಮೃತ ಬಾಲಕನ ಕುಟುಂಬಕ್ಕೆೆ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ 5 ಲಕ್ಷ ರು. ಪರಿಹಾರದ ಚೆಕ್ ವಿತರಿಸಿದರು. ದೊಡ್ಡ ಹಂಪಿಹೊಳಿ ಗ್ರಾಾಮದಲ್ಲಿ ಮನೆ ಬಿದ್ದಿದ್ದರಿಂದ ಕುಟುಂಬ ಸಂತ್ರಸ್ತರ ಕೇಂದ್ರದಲ್ಲಿತ್ತು.

ಸಂತ್ರಸ್ತರಿಗೆ ಸಾಂತ್ವನ ಹೇಳುವುದರ ಜತೆಗೆ ಸಮಸ್ಯೆೆಗಳಿಗೆ ಪರಿಹಾರ ಒದಗಿಸಲು ಸಂತ್ರಸ್ತರ ಮನೆಬಾಗಿಲಿಗೆ ಸಿಎಂ ಬಂದಿದ್ದಾರೆ. ಮನೆಗಳ ಹಾನಿ, ಮಗ್ಗಗಳ ನಷ್ಟ ಮತ್ತು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವುದರ ಜತೆಗೆ ಶಾಶ್ವತ ಪರಿಹಾರಕ್ಕೆೆ ಸರಕಾರ ಬದ್ಧವಾಗಿದ್ದು, ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆೆ ಸರಕಾರಕ್ಕೆೆ ಈಗಾಗಲೇ ಸಂಪೂರ್ಣ ಮಾಹಿತಿ ಇದೆ.
– ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿಿ

Leave a Reply

Your email address will not be published. Required fields are marked *

error: Content is protected !!