ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hina Rabbani Khar: ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕನಲ್ಲ ಎಂದ ಪಾಕ್ ಮಾಜಿ ಸಚಿವೆ ಹಿನಾ ರಬ್ಬಾನಿ ಖಾರ್

ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಿರುವುದು ಜಗತ್ತಿಗೆ ಗೊತ್ತಿರುವ ವಿಚಾರವಾದರೂ ಸದಾ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ ಇಲ್ಲಿನ ನಾಯಕರು, ಅಧಿಕಾರಿಗಳು. ಈಗ ಇದು ಮತ್ತೊಮ್ಮೆ ಸಾಬೀತಾಗಿದೆ. ಭಯೋತ್ಪಾದಕರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಮರಿಕ ಗುರುತಿಸಿರುವ ಜಾಗತಿಕ ಭಯೋತ್ಪಾದಕ ಹಫೀಜ್ ಅಬ್ದುರ್ ರೌಫ್‌ನನ್ನು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಸಮರ್ಥಿಸಿಕೊಂಡಿದ್ದಾರೆ.

ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕನಲ್ಲ ಎಂದ ಹಿನಾ ರಬ್ಬಾನಿ

ಇಸ್ಲಾಮಾಬಾದ್: ಹಫೀಜ್ ಅಬ್ದುರ್ ರೌಫ್ (Hafiz Abdur Rauf) ಭಯೋತ್ಪಾದಕನಲ್ಲ (Terrorists). ಆತ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ಸಂದರ್ಶನವೊಂದರಲ್ಲಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ (Former Pakistani Foreign Minister) ಹಿನಾ ರಬ್ಬಾನಿ ಖಾರ್ (Hina Rabbani Khar) ಹೇಳಿದ್ದು ಪಾಕಿಸ್ತಾನ ಮತ್ತೊಮ್ಮೆ ಜಗತ್ತಿನ ಮುಂದೆ ಬೆತ್ತಲಾಗುವಂತೆ ಮಾಡಿದೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಿರುವುದು ಜಗತ್ತಿಗೆ ಗೊತ್ತಿರುವ ವಿಚಾರವಾದರೂ ಸದಾ ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದಾರೆ ಇಲ್ಲಿನ ನಾಯಕರು, ಅಧಿಕಾರಿಗಳು. ಈಗ ಇದು ಮತ್ತೊಮ್ಮೆ ಸಾಬೀತಾಗಿದೆ. ಭಯೋತ್ಪಾದಕರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಮರಿಕ ಗುರುತಿಸಿರುವ ಜಾಗತಿಕ ಭಯೋತ್ಪಾದಕ ಹಫೀಜ್ ಅಬ್ದುರ್ ರೌಫ್‌ನನ್ನು ಹಿನಾ ರಬ್ಬಾನಿ ಖಾರ್ ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಅಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿ ಸುಮಾರು ನೂರಕ್ಕೂ ಹೆಚ್ಚು ಮಂದಿ ಉಗ್ರರನ್ನು ನಾಶ ಮಾಡಿತ್ತು. ಇವರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಪಾಲ್ಗೊಂಡ ಹಫೀಜ್ ಅಬ್ದುರ್ ರೌಫ್ ಜಾಗತಿಕ ಭಯೋತ್ಪಾದಕನಲ್ಲ ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಹಿನಾ ರಬ್ಬಾನಿ ಖಾರ್ ಹೇಳಿದ್ದಾರೆ.

ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಳಿಕ ಇಸ್ಲಾಮಾಬಾದ್‌ನ ನಿಲುವನ್ನು ಸಮರ್ಥಿಸಿಕೊಳ್ಳುವ ಗುರಿಯನ್ನು ಹೊಂದಿರುವ ಖಾರ್, ಅಂತ್ಯಕ್ರಿಯೆಯನ್ನು ಮುನ್ನಡೆಸುತ್ತಿರುವ ವ್ಯಕ್ತಿ ಹಫೀಜ್ ಅಬ್ದುರ್ ರೌಫ್. ಆತ ಒಬ್ಬ ಸಾಮಾನ್ಯ ವ್ಯಕ್ತಿ ಮತ್ತು ಅಮೆರಿಕ ನಿರ್ಬಂಧಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಜಾಗತಿಕ ಭಯೋತ್ಪಾದಕನಲ್ಲ ಎಂದು ಹೇಳಿದರು.

ಸಂದರ್ಶಕನ ಮರು ಪ್ರಶ್ನೆಗೆ ಉತ್ತರಿಸಿದ ಹಿನಾ, ಪಾಕಿಸ್ತಾನದಲ್ಲಿ ಆ ಹೆಸರಿನ ಲೆಕ್ಕವಿಲ್ಲದಷ್ಟು ಜನರಿದ್ದಾರೆ. ಭಾರತ ಹೇಳಿಕೊಳ್ಳುವ ವ್ಯಕ್ತಿ ಇವನಲ್ಲ. ತಮ್ಮ ಹೇಳಿಕೆಗೆ ಪುರಾವೆಗಳು ಇವೆ ಎಂದರು.



ಅದಕ್ಕೆ ಪ್ರತಿಯಾಗಿ ಸಂದರ್ಶಕರು ಪಾಕಿಸ್ತಾನ ಸೇನೆಯು ಈ ಚಿತ್ರದ ದೃಢೀಕರಣ ನೀಡಿಲ್ಲ ಎಂದಾಗ ಆ ವ್ಯಕ್ತಿಯನ್ನು ರಾಜಕೀಯ ಪಕ್ಷದ ಸದಸ್ಯ ಎಂದ ಹಿನಾ, ಆತನ ರಾಷ್ಟ್ರೀಯ ಗುರುತಿನ ಚೀಟಿ ಸಂಖ್ಯೆಯನ್ನು ಸಹ ತಿಳಿಸಿದರು. ಆದರೆ ಇದು ಅಮೆರಿಕ ಭಯೋತ್ಪಾದನಾ ನಿರ್ಬಂಧಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಐಡಿಗೆ ಹೊಂದಿಕೆಯಾಗುತ್ತದೆ ಎಂದು ಸಂದರ್ಶಕ ಹೇಳಿದಾಗ, ಉತ್ತರಿಸಲು ತಪ್ಪಿಸಿಕೊಂಡ ಖಾರ್, ಪಾಕಿಸ್ತಾನಿ ಸೈನ್ಯವು ಯುಎಸ್ ನಿಷೇಧಿತ ಭಯೋತ್ಪಾದಕನನ್ನು ರಕ್ಷಿಸುತ್ತಿಲ್ಲ ಎಂದರು.

ಇದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅಂತಾರಾಷ್ಟ್ರೀಯವಾಗಿ ನಿಷೇಧಿತ ವ್ಯಕ್ತಿಗಳನ್ನು ಪಾಕಿಸ್ತಾನ ಪೋಷಿಸುತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.

ಏ. 22ರಂದು ಪಾಕಿಸ್ತಾನ ಬೆಂಬಲಿತ ಉಗ್ರರು ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರನ್ನು ಹತ್ಯೆಗೈದಿದ್ದು, ಇದಕ್ಕೆ ಪ್ರತಿಯಾಗಿ ಭಾರತ ನಡೆಸಿದ ಅಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆಗಳು ಹತ್ಯೆಗೈದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರಿಗೆ ರೌಫ್ ಅಂತ್ಯಕ್ರಿಯೆಯ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರುವ ಚಿತ್ರ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಪಾಕಿಸ್ತಾನಕ್ಕೆ ತೀವ್ರ ಮುಖಭಂಗವನ್ನು ಉಂಟು ಮಾಡಿತ್ತು. ಇದರ ಬಳಿಕ ಪಾಕ್ ನಾಯಕರು ಇದನ್ನು ಸ್ಪಷ್ಟಪಡಿಸುವ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: Sheikh Hasina: ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಲು ಆದೇಶಿಸಿದ್ದ ಶೇಖ್ ಹಸೀನಾ? ಸದ್ದು ಮಾಡುತ್ತಿದೆ ಆಡಿಯೊ

ಈ ಚಿತ್ರದಲ್ಲಿ ರೌಫ್ ಜತೆಗೆ ಹಲವಾರು ಪಾಕಿಸ್ತಾನಿ ಸೇನಾ ಸಿಬ್ಬಂದಿ ಕೂಡ ಇದ್ದರು ಎಂದು ಭಾರತೀಯ ಸೇನಾ ಮೂಲಗಳು ದೃಢಪಡಿಸಿದ್ದವು.

hafiz

ಹಫೀಜ್ ಅಬ್ದುರ್ ರೌಫ್ ಯಾರು?

ಎಲ್‌ಇಟಿಯ ಪ್ರಮುಖ ಸಂಘಟನೆಯಾದ ಜಮಾತ್-ಉದ್-ದವಾ (ಜೆಯುಡಿ) ಜೊತೆಗಿನ ನಿಕಟ ಸಂಬಂಧ ಹೊಂದಿರುವ ಹಫೀಜ್ ಅಬ್ದುರ್ ರೌಫ್ ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಜೊತೆ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸೈದ್ಧಾಂತಿಕ ಮತ್ತು ಕಾರ್ಯಾಚರಣೆಯ ನಾಯಕತ್ವದಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಇತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1,267 ನಿರ್ಬಂಧಗಳ ಅಡಿಯಲ್ಲಿ ಭಯೋತ್ಪಾದಕನೆಂದು ಗುರುತಿಸಲಾಗಿದೆ.