Narendra Modi: ಬೊಜ್ಜಿನ ಸಮಸ್ಯೆಯ ವಿರುದ್ಧ ಮೋದಿ ಸಮರ; ವಿಶೇಷ ಟಾಸ್ಕ್‌ಗೆ ಸುಧಾ ಮೂರ್ತಿ ಸೇರಿದಂತೆ 10 ಗಣ್ಯರ ನೇಮಕ
ಪ್ರಧಾನಿ ಮೋದಿ ಬೊಜ್ಜಿನ ವಿರುದ್ಧ ಸಮರ ಸಾರಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ದೇಶದ 10 ಖ್ಯಾತ ನಾಯಕರಿಗೆ ಕರೆ ಕೊಟ್ಟಿದ್ದಾರೆ. , ಇನ್ಫೋಸಿಸ್ನ ಸುಧಾಮೂರ್ತಿ ಸೇರಿದಂತೆ 10 ಜನರಿರುವ ತಂಡವನ್ನು ಅವರು ರಚಿಸಿದ್ದಾರೆ.

ನರೇಂದ್ರ ಮೋದಿ

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಭಾನುವಾರ ಮನ್ ಕೀ ಬಾತ್ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದು, ಅದರಲ್ಲಿ ಮುಖ್ಯವಾಗಿ ಬೊಜ್ಜಿನ ವಿಷಯ ಕುರಿತು ಮಾತನಾಡಿದ್ದರು. ಪ್ರತಿ 8 ಜನರಲ್ಲಿ ಒಬ್ಬರು ಈ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಅದರಲ್ಲಿಯೂ ಈಗ ಚಿಕ್ಕ ಮಕ್ಕಳಲ್ಲಿಯೂ ಬೊಜ್ಜು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಮೋದಿ ಈ ಸಮಸ್ಯೆಯನ್ನು ನಿವಾರಿಸಲು , ಇನ್ಫೋಸಿಸ್ನ ಸುಧಾಮೂರ್ತಿ ಸೇರಿದಂತೆ 10 ಜನರಿರುವ ತಂಡವನ್ನು ರಚಿಸಿದ್ದಾರೆ.
ಬೊಜ್ಜಿನ ವಿರುದ್ಧ ಸಮರ ಸಾರಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ದೇಶದ 10 ಖ್ಯಾತ ನಾಯಕರಿಗೆ ಕರೆ ಕೊಟ್ಟಿದ್ದಾರೆ. ಖ್ಯಾತನಾಮರಾದ ಆನಂದ್ ಮಹೀಂದ್ರಾ, ನಂದನ್ ನೀಲಕಣಿ, ಮನುಬಾಕರ್, ಮಿರಾಬಾಯಿ ಚಾನು, ಜಮ್ಮು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ, ಸಂಸದ ಮೋಹನಲಾಲ್ ಮತ್ತು ಇನ್ಫೋಸಿಸ್ನ ಸುಧಾಮೂರ್ತಿ, ಬಿಜೆಪಿ ನಾಯಕ ದಿನೇಶ್ ಲಾಲ್ ಯಾದವ್, ನಟ ಮಾಧವನ್ ಹಾಗೂ ಗಾಯಕಿ ಶ್ರೇಯಾ ಘೋಷಾಲ್ ಅವರ ಹೆಸರನ್ನು ಮೋದಿ ಘೋಷಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಆಹಾರದಲ್ಲಿ ಖಾದ್ಯ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ನಾನು ಈ ಕೆಳಗಿನ ಜನರನ್ನು ನಾಮನಿರ್ದೇಶನ ಮಾಡಲು ಬಯಸುತ್ತೇನೆ. ನಮ್ಮ ಆಂದೋಲನವು ದೊಡ್ಡದಾಗಲು ತಲಾ 10 ಜನರನ್ನು ನಾಮನಿರ್ದೇಶನ ಮಾಡುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
As mentioned in yesterday’s #MannKiBaat, I would like to nominate the following people to help strengthen the fight against obesity and spread awareness on reducing edible oil consumption in food. I also request them to nominate 10 people each so that our movement gets bigger!… pic.twitter.com/bpzmgnXsp4
— Narendra Modi (@narendramodi) February 24, 2025
ಪ್ರಧಾನಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಬೊಜ್ಜು ವಿರುದ್ಧದ ಅಭಿಯಾನಕ್ಕೆ ಸೇರಲು 'ತುಂಬಾ ಸಂತೋಷವಾಗಿದೆ' ಎಂದು ಹೇಳಿದರು ಮತ್ತು ಅಭಿಯಾನದ ಭಾಗವಾಗಲು ಇನ್ನೂ 10 ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದರು.
ಈ ಸುದ್ದಿಯನ್ನೂ ಓದಿ:Mann Ki Baat: ಮನ್ ಕಿ ಬಾತ್‌ನಲ್ಲಿ ರಾಜ್ಯದ ಬುಡಕಟ್ಟು ಜನಾಂಗವನ್ನು ಶ್ಲಾಘಿಸಿದ ಮೋದಿ
ಮನ್ ಕಿ ಬಾತ್' ಪ್ರಸಾರದಲ್ಲಿ ಪ್ರಧಾನಿ ಮೋದಿ, ಜನರು ಆಹಾರದಲ್ಲಿ ಕಡಿಮೆ ಎಣ್ಣೆಯನ್ನು ಬಳಸುವಂತೆ ಮತ್ತು ತೈಲ ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವ ಸವಾಲನ್ನು ಇತರ 10 ಜನರಿಗೆ ರವಾನಿಸುವಂತೆ ಒತ್ತಾಯಿಸಿದ್ದರು. ಸದೃಢ ಮತ್ತು ಆರೋಗ್ಯಕರ ರಾಷ್ಟ್ರವಾಗಲು, ನಾವು ಬೊಜ್ಜಿನ ಸಮಸ್ಯೆಯನ್ನು ನಿಭಾಯಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿವೆ, ಆದರೆ ಇನ್ನೂ ಆತಂಕಕಾರಿ ಸಂಗತಿಯೆಂದರೆ ಮಕ್ಕಳಲ್ಲಿ ಈ ಸಮಸ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟಿದ್ದರು.