Viral Video: ಈ ಮನೆಯ ಕಾಂಪೌಂಡ್ ನೋಡಿ ಶಾಕ್ ಆದ ನೆಟ್ಟಿಗರು; ಅಂತಹದ್ದೇನಿದೆ?
ಕೇರಳದ ಕೋಯಿಕ್ಕೋಡ್‍ನ ಮನೆಯೊಂದರ ಕಾಂಪೌಂಡ್ ಗೋಡೆಯನ್ನು ರೈಲಿನ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಇದು ಕಂಪಾರ್ಟ್‌ಮೆಂಟ್‌ಗಳು ಮತ್ತು ರೈಲಿನ ರೀತಿಯ ಚಕ್ರಗಳನ್ನು ಹೊಂದಿದ್ದರಿಂದ ಇದು ನೋಡುಗರಿಗೆ ನಿಜವಾದ ರೈಲು ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

train viral video

ತಿರುವನಂತಪುರಂ: ಈಗೀಗ ಹಲವರು ನಾನಾ ವಿನ್ಯಾಸದ ರೀತಿಯಲ್ಲಿ ಮನೆ ಕಟ್ಟುತ್ತಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೇರಳದಲ್ಲಿನ ಮನೆಯೊಂದರ ಕಾಂಪೌಂಡ್ ವಿನ್ಯಾಸ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರೈಲಿನಂತೆ ಕಾಣುವ ಮನೆಯ ಕಾಂಪೌಂಡ್ ನೋಡಿ ನೆಟ್ಟಿಗರು ಕೂಡ ಬೆಕ್ಕಸ ಬೆರಗಾಗಿದ್ದಾರೆ. ಕೋಯಿಕ್ಕೋಡ್‍ನ ಮನೆಯೊಂದರ ಕಾಂಪೌಂಡ್‌ನ ಗೋಡೆಯನ್ನು ರೈಲು ಬೋಗಿಯನ್ನು ಹೋಲುವಂತೆ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಕಂಪಾರ್ಟ್‌ಮೆಂಟ್‌ಗಳು ಮತ್ತು ರೈಲು ಚಕ್ರಗಳನ್ನು ಹೊಂದಿದೆ. ಹಾಗಾಗಿ ಇದನ್ನು ನೋಡಿದವರಿಗೆ ಇದು ನಿಜವಾದ ರೈಲು ಎಂಬ ಭ್ರಮೆ ಹುಟ್ಟಿಸುವಂತಿದೆ (Viral Video). ಈ ರೈಲು ವಿನ್ಯಾಸ ಗೋಡೆಯು ನಿರ್ಮಿಸಿದ ವರ್ಷ 2019 ಎಂದು ಅದರ ಮೇಲೆ ಬರೆಯಲಾಗಿದೆ. ಹಾಗೇ ಅದಕ್ಕೆ 22597 ಪಲಂಗಾಡ್ ಎಕ್ಸ್‌ಪ್ರೆಸ್ ಎಂದೂ ಹೆಸರು ನೀಡಲಾಗಿದೆ.
ಕುಂಜಿಪ್ಪ ಅರಂಬ್ರಮ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ನೆಟ್ಟಿಗರನ್ನು ಆಶ್ಚರ್ಯಚಕಿತಗೊಳಿಸಿದೆ. "ಕೋಝಿಕೋಡ್ ನರಿಕ್ಕುನಿ ಪಾಲಂಗಾಡ್ ಈಗ ನಿರ್ಗಮಿಸಲಿದೆ" ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಹಾಸ್ಯಮಯವಾಗಿ ಬರೆಯಲಾಗಿದೆ. ಈ ವಿಡಿಯೊ ನೆಟ್ಟಿಗರ ಗಮನ ಸೆಳೆದು ಇದಕ್ಕೆ 65,000ಕ್ಕೂ ಹೆಚ್ಚು ವ್ಯೂವ್ಸ್ ಸಿಕ್ಕಿದೆ.
ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬರು "ಉತ್ತಮ ಸೃಜನಶೀಲತೆ'' ಪೋಸ್ಟ್ ಮಾಡಿದರೆ, ಕೆಲವು ನೆಟ್ಟಿಗರು ಅದಕ್ಕೆ ಹೆಸರನ್ನು ಸಹ ಸೂಚಿಸಿದ್ದಾರೆ. "ಇದಕ್ಕೆ ರೈಲು ಮನೆ ಎಂಬ ಹೆಸರು ಇರಬಹುದು" ಎಂದು ಒಬ್ಬರು ಬರೆದಿದ್ದಾರೆ. "ಈ ಮನೆಯ ಮಾಲೀಕ ರೈಲ್ವೆಯಿಂದ ನಿವೃತ್ತರಾಗಿದ್ದಾರೆಯೇ?" ಎಂದು ಇನ್ನೊಬ್ಬರು ಕೇಳಿದ್ದಾರೆ. "ಇದು ಅದ್ಭುತ ಸೃಜನಶೀಲತೆ" ಎಂದು ನೆಟ್ಟಿಗರೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮೊದಲು, 'ಎಂಜಿನ್ ಮ್ಯಾನ್' ಅಥವಾ 'ಲೋಕೋ ಪೈಲಟ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಂಜಯ್ ಕುಮಾರ್ ಒಡೆತನದ ಮತ್ತೊಂದು ರೈಲ್ವೆ- ಮನೆ ಸಾರ್ವಜನಿಕರ ಗಮನವನ್ನು ಸೆಳೆದಿತ್ತು. ಈ ಅಸಾಧಾರಣ ಮನೆ ನಿಜವಾದ ರೈಲಿನಂತೆ ಎದ್ದು ಕಾಣುತ್ತದೆ. ಇದನ್ನು ಹಳಿಗಳ ಮೇಲೆ ನಿಂತಿರುವಂತೆ ಚಿತ್ರಿಸಲಾಗಿದ್ದು, ಇನ್ನಷ್ಟು ಆಕರ್ಷಕವಾಗಿಸಿದೆ. ಇದರ ವಿಶಿಷ್ಟತೆಯಿಂದ ಆಕರ್ಷಿತರಾದ ಸ್ಥಳೀಯರು ಇದನ್ನು 'ಮಿನಿ ರೈಲ್ವೆ ನಿಲ್ದಾಣ' ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ.
ಈ ಸುದ್ದಿಯನ್ನೂ ಓದಿ:Viral News: ಪಾಕಿಸ್ತಾನದಲ್ಲಿಯೇ ಉಳಿದ ಭಾರತದ ಈ ರೈಲು; ಅದರ ಹಿಂದಿನ ರೋಚಕ ಕಥೆ ಏನು ಗೊತ್ತಾ?
ಕಳೆದ ಐದು ವರ್ಷಗಳಿಂದ ಲಾಹೋರ್‌ನಲ್ಲಿ ಭಾರತೀಯ ರೈಲು ಸಂಜೌತಾ ಎಕ್ಸ್‌ಪ್ರೆಸ್ ನಿಂತಿದೆ. ಅದರ ಸ್ಥಿತಿ ಎಷ್ಟು ಕೆಟ್ಟದಾಗಿದೆಯೆಂದರೆ ಈಗ ಈ ರೈಲಿನ ಬೋಗಿಗಳಿಗೆ ತುಕ್ಕು ಹಿಡಿಯುತ್ತಿದೆಯಂತೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಅಂದಹಾಗೇ ಈ ರೈಲು ಪಾಕಿಸ್ತಾನದಲ್ಲಿ ಹೇಗೆ ಸಿಲುಕಿಕೊಂಡಿತು ಮತ್ತು ಅದರ ಹಿಂದಿನ ಕಥೆ ಏನು ಎಂಬುದರ ಮಾಹಿತಿ ಇಲ್ಲಿದೆ.
ಸಂಜೌತಾ ಎಕ್ಸ್‌ಪ್ರೆಸ್ 1976ರ ಜು. 22ರಂದು ಅಟ್ಟಾರಿ ಮತ್ತು ಲಾಹೋರ್ ನಡುವೆ ಮೊದಲ ಬಾರಿಗೆ ಸೇವೆಯನ್ನು ಶುರು ಮಾಡಿತ್ತು. ಆರಂಭದಲ್ಲಿ ಸಂಜೌತಾ ಎಕ್ಸ್‌ಪ್ರೆಸ್ ಪ್ರತಿದಿನ ಚಲಿಸುತ್ತಿತ್ತು. ಆದರೆ 1994ರಲ್ಲಿ ಇದನ್ನು ವಾರಕ್ಕೆ ಎರಡು ಬಾರಿ ಮಾತ್ರ ನಡೆಸಲು ನಿರ್ಧರಿಸಲಾಗಿತ್ತು. ಈ ರೈಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಮತ್ತು ಸಹಕಾರದ ಸಂಕೇತವಾಗಿತ್ತು.
2019ರಲ್ಲಿ ಕಥೆ ಏಕೆ ಬದಲಾಯಿತು?
2019ರಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕುವ ಐತಿಹಾಸಿಕ ನಿರ್ಧಾರವನ್ನು ಭಾರತ ತೆಗೆದುಕೊಂಡಾಗ, ಪಾಕಿಸ್ತಾನ ಅದನ್ನು ಬಲವಾಗಿ ವಿರೋಧಿಸಿತು. ಈ ನಡುವೆ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಯಿತು ಮತ್ತು ಸಂಜೌತಾ ಎಕ್ಸ್‌ಪ್ರೆಸ್ ಅನ್ನು ನಿಲ್ಲಿಸಲಾಯಿತು. ರೈಲು ಸೇವೆಯನ್ನು ನಿಲ್ಲಿಸಿದಾಗ ಸಂಜೌತಾ ಎಕ್ಸ್‌ಪ್ರೆಸ್‌ನ ಬೋಗಿಗಳು ಪಾಕಿಸ್ತಾನದ ಲಾಹೋರ್‌ನಲ್ಲಿದ್ದವು. ಈ 11 ಬೋಗಿಗಳು ಇನ್ನೂ ಪಾಕಿಸ್ತಾನದಲ್ಲಿಯೇ ಇದ್ದರೆ, ಪಾಕಿಸ್ತಾನದ ರೈಲಿನ 16 ಬೋಗಿಗಳು ಭಾರತದ ಅಟ್ಟಾರಿ ರೈಲ್ವೆ ನಿಲ್ದಾಣದಲ್ಲಿ ನಿಂತಿವೆ.