ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral News: ದೇಶಕ್ಕೆ ಸ್ವಾತಂತ್ಯ್ರ ಬಂದು 75 ವರ್ಷಗಳಾದರೂ ಮೊದಲ ಬಾರಿಗೆ ಮತದಾನ ಮಾಡಿದ ಈ ಗ್ರಾಮದ ಜನ!

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ನಕ್ಸಲ್ ಪೀಡಿತ ಕೆರ್ಲಪೆಂಡಾ ಗ್ರಾಮದ ನಿವಾಸಿಗಳು ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿದ್ದಾರೆ. ಭಾನುವಾರ ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.

ಸ್ವಾಂತ್ರತ್ಯ ಬಂದು ಏಳು ದಶಕಗಳ ಬಳಿಕ ಮೊದಲ ಬಾರಿಗೆ ಮತ ಹಾಕಿದ ಇಲ್ಲಿನ ಜನ

ಸಾಂದರ್ಭಿಕ ಚಿತ್ರ

Profile Vishakha Bhat Feb 24, 2025 3:12 PM

ರಾಯ್ಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ನಕ್ಸಲ್ ಪೀಡಿತ ಕೆರ್ಲಪೆಂಡಾ ಗ್ರಾಮದ ನಿವಾಸಿಗಳು ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿದ್ದಾರೆ. ಭಾನುವಾರ ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಕೆರ್ಲಪೆಂಡಾದ ನಿವಾಸಿಯೊಬ್ಬರು, "ನಾನು ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ. ನಾವು ಹಿಂದೆಂದೂ ಮತ ಚಲಾಯಿಸಿರಲಿಲ್ಲ" ಎಂದು ಹಂಚಿಕೊಂಡರು. ರಾಜ್ಯ ಪಂಚಾಯತ್ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಸುಕ್ಮಾ ಜಿಲ್ಲೆಯ ಕೆರ್ಲಪೆಂಡಾ ಗ್ರಾಮದ ಜನರು ಬಿಗಿ ಭದ್ರತೆಯ ನಡುವೆ ಮತ (Viral News) ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.

ಮತ್ತೊಬ್ಬ ನಿವಾಸಿ ಹೇಳುವಂತೆ, 75 ವರ್ಷಗಳ ನಂತರ ಇಲ್ಲಿ ಮತದಾನ ನಡೆಯುತ್ತಿದೆ. ನಾವು ಅಭಿವೃದ್ಧಿಯತ್ತ ಸಾಗುತ್ತೇವೆ ಎಂದು ನನಗೆ ಸಂತೋಷವಾಗಿದೆ. ನಾಯಕರ ಮುಂದೆ ನಮ್ಮ ಬೇಡಿಕೆಗಳನ್ನು ಮಂಡಿಸಲು ಇದೇ ಮೊದಲ ಬಾರಿಗೆ ನಮಗೆ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.



ಫೆಬ್ರವರಿ 20 ರಂದು ನಡೆದ ಎರಡನೇ ಹಂತದ ಚುನಾವಣೆಯ ಸಮಯದಲ್ಲಿ, ಮತ್ತೊಂದು ನಕ್ಸಲ್ ಪೀಡಿತ ಜಿಲ್ಲೆಯಾದ ಬಿಜಾಪುರ ಜಿಲ್ಲೆಯ ಜನರು ಸಹ ಮತದಾನದಲ್ಲಿ ಭಾಗವಹಿಸಿದ್ದರು. ದಟ್ಟವಾದ ಕಾಡುಗಳು ಮತ್ತು ನದಿಯನ್ನು ದಾಟಿ 70 ಕಿಲೋಮೀಟರ್ ದೂರವನ್ನು ಕ್ರಮಿಸಿ ಜನರು ಭೋಪಾಲಪಟ್ಟಣಂ ಗ್ರಾಮದ ಮತದಾನ ಕೇಂದ್ರವನ್ನು ತಲುಪಿದರು ಎಂದು ವರದಿಯಾಗಿತ್ತು. ನಮಗೆ ಸರ್ಕಾರದಿಂದ ಉದ್ಯೋಗಾವಕಾಶಗಳು, ರಸ್ತೆ ಸಂಪರ್ಕ, ವಿದ್ಯುತ್, ಪಿಂಚಣಿ ಮತ್ತು ಇತರ ಮೂಲಭೂತ ಸೌಲಭ್ಯಗಳು ಬೇಕು" ಎಂದು ಮತದಾರರೊಬ್ಬರು ಹೇಳಿದ್ದರು.



ಈ ಸುದ್ದಿಯನ್ನೂ ಓದಿ: Naxalites Surrender : ಛತ್ತೀಸ್‌ಗಢದಲ್ಲಿ 7 ಮಹಿಳೆಯರು ಸೇರಿದಂತೆ 29 ನಕ್ಸಲೈಟ್‌ಗಳ ಶರಣಾಗತಿ

ಛತ್ತೀಸ್‌ಗಢ ಪಂಚಾಯತ್ ಚುನಾವಣೆಯ ಮೊದಲ ಹಂತ ಫೆಬ್ರವರಿ 17 ರಂದು ಮತ್ತು ಎರಡನೇ ಹಂತ ಫೆಬ್ರವರಿ 20 ರಂದು ನಡೆದಿತ್ತು. ಮೂರನೇ ಹಂತದ ಮತದಾನಕ್ಕೆ ಭಾನುವಾರ ಶೇ. 77.54 ರಷ್ಟು ಮತದಾನವಾಗಿದೆ.