ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shantanu Naidu: ರತನ್‌ ಟಾಟಾ ಆಪ್ತ ಗೆಳೆಯ ಶಂತನು ನಾಯ್ಡುಗೆ ಟಾಟಾ ಮೋಟಾರ್ಸ್‌ನಲ್ಲಿ ಉನ್ನತ ಹುದ್ದೆ!

ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಅವರೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದ ಶಂತನು ನಾಯ್ಡು ಅವರಿಗೆ ಟಾಟಾ ಮೋಟರ್ಸ್‌ನಿಂದ ಉನ್ನತ ಹುದ್ದೆಯೊಂದು ಒಲಿದು ಬಂದಿದೆ. ಟಾಟಾ ಸನ್ಸ್‌ನಲ್ಲಿ ಆರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಟಾಟಾ ಮೋಟಾರ್ಸ್‌ನಲ್ಲಿ ನಾಯ್ಡು ಸ್ಟ್ರಾಟಜಿಕ್‌ ಇನಿಷಿಯೇಟಿವ್ಸ್‌ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದಾರೆ.

ಶಂತನು ನಾಯ್ಡುಗೆ ಟಾಟಾ ಮೋಟಾರ್ಸ್‌ನಲ್ಲಿ ಉನ್ನತ ಹುದ್ದೆ!

Shantanu Naidu

Profile Deekshith Nair Feb 5, 2025 11:35 AM

ಮುಂಬೈ: ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ(Ratan Tata) ಅವರೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದ ಶಂತನು ನಾಯ್ಡು(Shantanu Naidu) ಅವರಿಗೆ ಟಾಟಾ ಮೋಟಾರ್ಸ್‌ನಿಂದ(Tata Motors) ಉನ್ನತ ಹುದ್ದೆಯೊಂದು ಒಲಿದು ಬಂದಿದೆ. ಟಾಟಾ ಸನ್ಸ್‌ನಲ್ಲಿ ಆರು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಟಾಟಾ ಮೋಟಾರ್ಸ್‌ನಲ್ಲಿ ನಾಯ್ಡು ಸ್ಟ್ರಾಟಜಿಕ್‌ ಇನಿಷಿಯೇಟಿವ್ಸ್‌ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆದಿದ್ದಾರೆ. ಟಾಟಾ ಅವರಿಗೆ ನಂಬಿಕಸ್ಥ ಗೆಳೆಯ ಮತ್ತು ಆಪ್ತ ಸಹಾಯಕರಾಗಿದ್ದ ಶಂತನು ನಾಯ್ಡು ಅವರಿಗೆ ಈ ಮಹತ್ವದ ಹುದ್ದೆಯು ಅವರ ಬದುಕಿನಲ್ಲಿ ಹೊಸ ಮೈಲಿಗಲ್ಲಾಗಲಿದೆ.

ಶಂತನು ನಾಯ್ಡು ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಈ ವಿಷಯವನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ. . "ಟಾಟಾ ಮೋಟಾರ್ಸ್‌ನಲ್ಲಿಸ್ಟ್ರಾಟಜಿಕ್‌ ಇನಿಷಿಯೇಟಿವ್ಸ್‌ನ ಜನರಲ್ ಮ್ಯಾನೇಜರ್ ಆಗಿ ಹೊಸ ಹುದ್ದೆಯನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಹೇಳಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.



ನನ್ನ ತಂದೆ ಟಾಟಾ ಮೋಟಾರ್ಸ್‌ಗೆ ಬಿಳಿ ಶರ್ಟ್ ಮತ್ತು ನೇವಿ ಪ್ಯಾಂಟ್ ಧರಿಸಿ ಹೋಗುತ್ತಿದ್ದರು. ನನಗೆ ಎಲ್ಲವೂ ನೆನಪಿದೆ. ನಾನು ಸದಾ ಅವರ ದಾರಿಯನ್ನೇ ಕಾಯುತ್ತಾ ಕಿಟಕಿಯಲ್ಲಿ ನೋಡುತ್ತಿದ್ದೆ. ಈಗ ನನ್ನ ಬಹುದಿನದ ಕನಸು ನನಸಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:Shantanu Naidu: ಬದುಕಿನ ಹೊಸ ಅಧ್ಯಾಯ ಆರಂಭಿಸಿದ ರತನ್‌ ಟಾಟಾ ನಂಬಿಕಸ್ಥ ಗೆಳೆಯ ಶಂತನು ನಾಯ್ಡು

ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾದ ಶಾಂತನು ನಾಯ್ಡು, ಟಾಟಾ ಎಲ್ಕ್ಸಿಗೆ ಸೇರುವ ಮೊದಲು ಟಾಟಾ ಟೆಕ್ನಾಲಜೀಸ್‌ನಲ್ಲಿ ಇಂಟರ್ನ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. 2014 ರಲ್ಲಿ ಅವರು ರತನ್‌ ಟಾಟಾ ಅವರಿಗ ಆಪ್ತ ಸಹಾಯಕರಾದರು. ರತನ್‌ ನಂಬಿಕಸ್ಥ ಗೆಳೆಯರಾಗಿ ಸಾಕಷ್ಟು ವಿಶ್ವಾಸಗಳಿಸಿದ್ದರು. ರತನ್‌ ಟಾಟಾ ತಮ್ಮ 10 ಸಾವಿರ ಕೋಟಿ ವಿಲ್‌ನಲ್ಲಿ ಶಂತನು ನಾಯ್ಡು ಅವರಿಗೂ ಆಸ್ತಿ ಬರೆದಿದ್ದರು.