ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shantanu Naidu: ಬದುಕಿನ ಹೊಸ ಅಧ್ಯಾಯ ಆರಂಭಿಸಿದ ರತನ್‌ ಟಾಟಾ ನಂಬಿಕಸ್ಥ ಗೆಳೆಯ ಶಂತನು ನಾಯ್ಡು

Shantanu Naidu : ರತನ್‌ ಟಾಟಾ ಅವರ ಆಪ್ತ ಸಹಾಯಕ ಶಂತನು ನಾಯ್ಡು ಅವರು ಇದೀಗ ತಮ್ಮ ಬದುಕಿನ ಹೊಸ ಅಧ್ಯಾಯವನನು ಆರಂಭಿಸಿದ್ದಾರೆ.

Profile Deekshith Nair Dec 6, 2024 1:08 PM
ಮುಂಬೈ: ಉದ್ಯಮಿ ದಿ. ರತನ್ ಟಾಟಾ (Ratan Tata) ಅವರ ಆಪ್ತ ಸಹಾಯಕ ಮತ್ತು ನಂಬಿಕಸ್ಥ ಗೆಳೆಯ ಶಂತನು ನಾಯ್ಡು(Shantanu Naidu) ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ನಾಯ್ಡು ಅವರು ಈಗ ತಮ್ಮ ಅತೀ ಇಷ್ಟದ ಪ್ರಾಜೆಕ್ಟ್ ಬುಕ್ಕಿಸ್‌ (Bookies)‌ ಅನ್ನು ದೇಶದೆಲ್ಲೆಡೆ ವಿಸ್ತರಿಸುತ್ತಿದ್ದಾರೆ. ಇದು ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸಲಿದ್ದು, ಪುಸ್ತಕ ಓದುವ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಗುರಿಯನ್ನು ಹೊಂದಿದೆ.
ಮೊದಲಿಗೆ ಮುಂಬೈ ನಗರದಲ್ಲಿ ಪ್ರಾರಂಭವಾದ ಈ ಯೋಜನೆಯು ಈಗಾಗಲೇ ಪುಣೆ ಮತ್ತು ಬೆಂಗಳೂರಿನಲ್ಲಿ ತನ್ನ ಛಾಪನ್ನು ಮೂಡಿಸಿದ್ದು, ಇದೀಗ ಪಿಂಕ್‌ ಸಿಟಿ ಜೈಪುರದತ್ತ(Jaipur) ಸಾಗುತ್ತಿದೆ. ಶಂತನು ನಾಯ್ಡು ಅವರು ಇತ್ತೀಚೆಗಷ್ಟೇ ಜೈಪುರ ಬುಕ್ಕಿಸ್ ಬಿಡುಗಡೆಯ ಕುರಿತು ಪೋಸ್ಟ್‌ ಶೇರ್‌ ಮಾಡಿದ್ದಾರೆ. ಡಿಸೆಂಬರ್ 8ರಂದು ನಡೆಯಲಿರುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಓದುಗರನ್ನು ಪ್ರೀತಿಯಿಂದ ಆಹ್ವಾನಿಸಿದ್ದಾರೆ. ಲಿಂಕ್ಡ್‌ಇನ್‌ ಮೂಲಕ( LinkedIn) ನಾಯ್ಡು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದು , “Jaipur, it's time. We will see you on Sunday the 8th at Jaipur Bookies. Sign up for the launch below. SO EXCITED!!!" ಎಂದು ಬರೆದುಕೊಂಡಿದ್ದಾರೆ. ಭಾಗವಹಿಸಲು ಆಸಕ್ತಿ ಇರುವವರಿಗೆ ಸೈನ್-ಅಪ್ ಫಾರ್ಮ್‌ನ ಲಿಂಕ್‌ ಕೊಡಲಾಗಿದೆ.
ನಾಯ್ಡು ಅವರು ಈ ಯೋಜನೆಯನ್ನು ದೆಹಲಿ, ಕೋಲ್ಕತ್ತಾ, ಅಹಮದಾಬಾದ್ ಮತ್ತು ಸೂರತ್‌ ನಗರಗಳಿಗೆ ವಿಸ್ತರಿಸುವ ಬಯಕೆಯನ್ನು ಇಟ್ಟುಕೊಂಡಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬುಕ್ಕಿಸ್‌ ಕೂಟದಲ್ಲಿ ಮಾತನಾಡಿದ್ದ ನಾಯ್ಡು ಓದಿನ ಮಹತ್ವದ ಬಗ್ಗೆ ಹೇಳಿದ್ದರು. “ಬುಕ್ಕಿಸ್ ಯಾವಾಗಲೂ ನಮ್ಮಲ್ಲಿ ಓದುವ ರುಚಿ ಹತ್ತಿಸುತ್ತದೆ. ಓದುವುದರಿಂದ ಮನುಷ್ಯನಿಗೆ ಒಳ್ಳೆಯ ಅನುಭವ ಸಿಗಲಿದ್ದು, ಮನಃ ಸಂತೋಷವನ್ನುಂಟು ಮಾಡುತ್ತದೆ ಎಂದಿದ್ದರು. ನಾಯ್ಡು ಅವರು ಆಧುನಿಕ ಜಗತ್ತಿನ ತಾಕಲಾಟಗಳ ಕುರಿತು ಹೇಳುತ್ತಾ "ನಾವು ಈ ಹಿಂದೆ ಮೂರು ನಿಮಿಷಗಳ ರೀಲ್‌ಗಳನ್ನು ವೀಕ್ಷಿಸುತ್ತಿದ್ದೆವು. ಆದರೆ ಇನ್ನು ಮುಂದೆ 1:30 ನಿಮಿಷಗಳ ವಿಡಿಯೊವನ್ನೂ ನಮ್ಮಿಂದ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
ರತನ್‌ ಟಾಟಾ ಅವರ ಆಪ್ತ ಸಹಾಯಕರಾಗಿದ್ದ ಶಂತನು ನಾಯ್ಡು ಅವರ ಹೆಸರು ಕೂಡ ಟಾಟಾ ಅವರ 10 ಸಾವಿರ ಕೋಟಿ ರೂ.ಯ ವಿಲ್‌ನಲ್ಲಿ ದಾಖಲಾಗಿತ್ತು. ಶಂತನು ನಾಯ್ಡು ಆರಂಭ ಮಾಡಿದ್ದ ಸ್ಟಾರ್ಟ್‌ಅಪ್‌ ಗುಡ್‌ಫೆಲೋಸ್‌ನಲ್ಲಿ ರತನ್‌ ಟಾಟಾ ಕೂಡ ಮಾಲೀಕರಾಗಿದ್ದರು. ಈ ಮಾಲೀಕತ್ವವನ್ನು ಅವರು ತ್ಯಜಿಸಿದ್ದು, ಆ ಮೂಲಕ ಇಡೀ ಗುಡ್‌ಫೆಲೋಸ್‌ಗೆ ಶಂತನು ನಾಯ್ಡು ಅವರೇ ಈಗ ಏಕೈಕ ಮಾಲೀಕರಾಗಿದ್ದಾರೆ. ಅದರೊಂದಿಗೆ ಶಂತನು ನಾಯ್ಡು ವಿದೇಶದಲ್ಲಿ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ರತನ್‌ ಟಾಟಾ ಅವರಿಂದ ವೈಯಕ್ತಿಕ ಸಾಲ ಪಡೆದುಕೊಂಡಿದ್ದರು. ಆ ಸಾಲವನ್ನೂ ಮನ್ನಾ ಮಾಡಿದ್ದಾಗಿ ರತನ್‌ ಟಾಟಾ ತಮ್ಮ ವಿಲ್‌ನಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Vishwavani Editorial: ರತನ್ ಟಾಟಾ ದೇಶದ ವರಪುತ್ರ