Nia Sharma: ಬಿಕಿನಿ ಧರಿಸಿ ಬಿಂದಾಸ್ ಆಗಿ ಹಾಲಿಡೇ ಎಂಜಾಯ್ ಮಾಡಿದ ನಟಿ ನಿಯಾ ಶರ್ಮಾ
ಹಿಂದಿ ಸೀರಿಯಲ್ ಮತ್ತು ಮಾಡೆಲಿಂಗ್ ಮೂಲಕ ಖ್ಯಾತಿ ಪಡೆದ ನಟಿ ನಿಯಾ ಶರ್ಮಾ ಇತ್ತೀಚೆಗೆ ವೃತ್ತಿ ಬದುಕಿಗಿಂತಲೂ ವೈಯಕ್ತಿಕ ವಿಚಾರದಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಇವರು ದುಬೈ ಟ್ರಿಪ್ಗೆ ತೆರಳಿದ್ದರು. ಈ ವೇಳೆ ಸ್ವಿಮ್ಮಿಂಗ್ ಪೂಲ್ ಒಂದರ ಮುಂಭಾಗದಲ್ಲಿ ಅವರು ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಕಂಡಿದ್ದಾರೆ. ಸದ್ಯ ಅವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Nia Sharma


ʼಕಾಳಿ ಏಕ್ ಅಗ್ನಿ ಪರೀಕ್ಷಾʼ ಧಾರವಾಹಿಯ ಅನು ಪಾತ್ರದಲ್ಲಿ ಚಿರಪರಿಚಿತರಾದ ನಿಯಾ ಶರ್ಮಾ ಬಳಿಕ ರಿಯಾಲಿಟಿ ಶೋನಿಂದಲೂ ಜನಮನ ಗೆದ್ದಿದ್ದಾರೆ. ಮಾಡೆಲಿಂಗ್, ಶೂಟಿಂಗ್ ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ ಅವರು ಆಗಾಗ ಟ್ರಿಪ್ಗೆ ತೆರಳಿ ಲೈಫ್ ಎಂಜಾಯ್ ಮಾಡುತ್ತಾರೆ.

ವೈರಲ್ ಆದ ಫೋಟೊದಲ್ಲಿ ನಟಿ ನಿಯಾ ಶರ್ಮಾ ಬಿಕಿನಿ ಸ್ಟೈಲ್ನಲ್ಲಿ ಕಾಣಿಸಿಕೊಂಡಿದ್ದು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಐಷಾರಾಮಿ ಹೊಟೇಲ್ ಒಂದರ ಛಾವಣಿಯ ಸ್ವಿಮ್ಮಿಂಗ್ ಪೂಲ್ ಬಳಿಯಲ್ಲಿ ನಿಯಾ ಅವರು ವಿಶ್ರಾಂತಿ ಪಡೆಯುತ್ತಾ ಎಳನೀರು ಸೇವಿಸುತ್ತಿರುವ ಫೋಟೊ ವೈರಲ್ ಆಗಿದೆ.

ʼಖತ್ರೋನ್ ಕಿ ಖಿಲಾಡಿ ಮೇಡ್ ಇನ್ ಇಂಡಿಯಾʼ ಶೋದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಖ್ಯಾತಿ ಪಡೆದ ನಿಯಾ ಶರ್ಮಾ ದುಬೈ ಪ್ರವಾಸದ ವೇಳೆ ಬ್ಲ್ಯಾಕ್ ಸ್ವಿಮ್ಮಿಂಗ್ ಸೂಟ್ನಲ್ಲಿ ಬೋಲ್ಡ್ ಆಗಿ ಕಂಡಿದ್ದಾರೆ. ಅವರ ಬ್ಲ್ಯಾಕ್ ಬಿಕಿನಿಗೆ ವೈಟ್ ಫ್ಲವರ್ ವಿನ್ಯಾಸವಿದ್ದು ನಟಿಗೆ ಹೊಸ ಲುಕ್ ನೀಡಿದಂತಿದೆ. ಸನ್ ಗ್ಲಾಸ್ ತೊಟ್ಟುಕೊಂಡು ನಟಿ ನಿಯಾ ಶರ್ಮಾ ಸ್ಟೈಲಿಶ್ ಆಗಿ ಕಂಗೊಳಿಸಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಿಯಾ ಶರ್ಮಾ ವೈಟ್ ಕಲರ್ ವೆಸ್ಟರ್ನ್ ಔಟ್ ಫಿಟ್ನಲ್ಲಿ ಗ್ಲ್ಯಾಮರಸ್ ಆಗಿ ಕಂಡಿದ್ದಾರೆ. ಸಿಂಪಲ್ ಮೇಕಪ್ ಹಾಗೂ ಹೇರ್ ಸ್ಟೈಲ್ನಿಂದ ವಿಭಿನ್ನವಾಗಿ ಗೋಚರಿಸಿದ್ದಾರೆ. ಫೋಟೊ ಜತೆಗೆ ಡ್ಯಾನ್ಸ್ ವಿಡಿಯೊವನ್ನು ಕೂಡ ನಿಯಾ ಹಂಚಿಕೊಂಡಿದ್ದಾರೆ.

ನಿಯಾ ಸ್ವಿಮ್ಮಿಂಗ್ ಡ್ರೆಸ್ನ ಈ ಫೋಟೊ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ. ದುಬೈಯ ಐಶಾರಾಮಿ ಟೂರಿಂಗ್ ಪ್ಲೇಸ್ಗಳು ಕೂಡ ಸೆರೆಯಾಗಿದೆ. ನಿಯಾ ಹಾಟ್ ನೆಸ್ ಓವರ್ ಲೋಡ್ ಆಗಿದೆ.. ಸೋ ಕ್ಯೂಟ್ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ನ್ಯಾಚುರಲ್ ಬ್ಯುಟಿ ನಿಯಾ ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ನಿಯಾ ಶರ್ಮಾ ಅವರು ಸನ್ ಸೆಟ್ ಬ್ಯಾಕ್ ಗ್ರೌಂಡ್ ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಇವರ ಶ್ಯಾಡೊ ಲುಕ್ ಫೋಟೊ ಕೂಡ ಬಹಳ ನ್ಯಾಚುರಲ್ ಆಗಿ ಬಂದಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ.

ʼಏಕ್ ಹಜಾರೋನ್ ಮೇ ಮೇರಿ ಬೆಹ್ನಾ ಹೈʼ, ʼಜಮೈ ರಾಜಾʼ, ʼಇಷ್ಕ್ ಮೇ ಮಾರ್ಜಾವಾನ್ʼ, ʼನಾಗಿನ್ 4ʼ ಮುಂತಾದ ಟಿವಿ ಶೋ ಮೂಲಕ ಖ್ಯಾತಿ ಪಡೆದ ನಿಯಾ ಶರ್ಮಾ ʼಖತ್ರೋನ್ ಕೆ ಖಿಲಾಡಿ ಸೀಸನ್ 8ʼ ರಿಯಾಲಿಟಿ ಶೋದ ಫೈನಲಿಸ್ಟ್ ಆಗಿದ್ದರು.

ಡ್ಯಾನ್ಸಿಂಗ್ ಶೋ ʼಜಲಕ್ ದಿಖ್ಲಾ ಜಾʼ ಸೀಸನ್ 10ರಲ್ಲಿಯೂ ಅವರು ಸ್ಪರ್ಧಿಸಿದ್ದರು. ಸದ್ಯ ಅವರು ದುಬೈ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದು ಇವರ ಸ್ಟನಿಂಗ್ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.