Monday, 13th May 2024

ಆರ್‌ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ. ಈ ನಿಟ್ಟಿಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಾಟಿಟ್ ಮತ್ತು ನೂತನ ತಂಡದ ನಿರ್ದೇಶಕ ಮೈಕ್ ಹೇಸನ್ ಒಗ್ಗೂಡಿ ತಂಡದಲ್ಲಿ ಭರ್ಜರಿ ಸರ್ಜರಿ
ಕೋಲ್ಕತಾದಲ್ಲಿ ಡಿ. 19ರಂದು 2020ರ ಟೂರ್ನಿ ಸಲುವಾಗಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಿಯೆ ನಡೆಯಲಿದೆ. ಈ ನಿಟ್ಟಿಿನಲ್ಲಿ ಎಲ್ಲ 8 ಫ್ರಾಾಂಚೈಸಿಗಳು ಶುಕ್ರವಾರ ತಾವು ಉಳಿಸಿಕೊಂಡ ಆಟಗಾರರು ಮತ್ತು ತಂಡದಿಂದ ಕೈಬಿಟ್ಟ ಆಟಗಾರರ ಅಂತಿಮ ಪಟ್ಟಿಿಯನ್ನು ಪ್ರಕಟಿಸಿವೆ. ಎಲ್ಲ ತಂಡಗಳು ಒಟ್ಟು 127 ಆಟಗಾರರನ್ನು ಉಳಿಸಿಕೊಂಡಿವೆ. ಇದರಲ್ಲಿ 35 ಮಂದಿ ವಿದೇಶಿ ಆಟಗಾರರು ಎಂಬುದು ವಿಶೇಷ.
ಆರ್‌ಸಿಬಿ ಕೂಡ ತನ್ನ ಅಂತಿಮ ಪಟ್ಟಿಿಯನ್ನು ಬಿಡುಗಡೆ ಮಾಡಿದ್ದು, ಕೆಲ ದೈತ್ಯ ಆಟಗಾರರನ್ನು ಹರಾಜಿಗೆ ಬಿಟ್ಟುಕೊಟ್ಟಿಿದೆ. ಆದರೂ ಇದರಲ್ಲಿ ಕೆಲ ಆಟಗಾರರನ್ನು ಹರಾಜಿನಲ್ಲಿ ಮರಳಿ ತನ್ನ ತೆಕ್ಕೆೆಗೆ ತೆಗೆದುಕೊಳ್ಳುವ ಅವಕಾಶವೂ ತಂಡಕ್ಕೆೆ ಇದೆ. ರೈಟ್ ಟು ಮ್ಯಾಾಚ್ ಮೂಲಕ ಇತರ ತಂಡಗಳು ಅಂತಿಮ ಗೊಳಿಸಿದ್ದ ಡೀಲ್ ಕೂಡ ಕಸಿಯುವ ಅವಕಾಶವಿದೆ.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು:
ವಿರಾಟ್ ಕೊಹ್ಲಿಿ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ದೇವದತ್ ಪಡಿಕ್ಕಲ್, ಪಾರ್ಥಿವ್ ಪಟೇಲ್, ಪವನ್ ನೇಗಿ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಗುರುಕೀರತ್ ಸಿಂಗ್ ಶಿವಂ ದುಬೇ, ಮೊಯಿನ್ ಅಲಿ, ಯಜುವೇಂದ್ರ ಚಹಾಲ್, ಎಬಿ ಡಿವಿಲಿಯರ್ಸ್.
ಆರ್‌ಸಿಬಿ ಬಿಡುಗಡೆ ಮಾಡಿದ ಆಟಗಾರರು:
ಮಾರ್ಕಸ್ ಸ್ಟೋೋಯ್ನಿಿಸ್, ಶಿಮ್ರಾಾನ್ ಹೆಟ್ಮೇರ್, ಆಕಾಶ್‌ದೀಪ್ ನಾಥ್, ನೇಥನ್ ಕೌಲ್ಟರ್ ನೈಲ್, ಡೇಲ್ ಸ್ಟೇನ್, ಕಾಲಿನ್ ಡಿ ಗ್ರ್ಯಾಾಂಡ್ಹೋೋಮ್, ಪ್ರಯಾಸ್ ರೇ ಬರ್ಮನ್, ಟಿಮ್ ಸೌಥೆ, ಕುಲ್ವಂತ್ ಖೇಜ್ರೊೊಲಿಯ, ಹಿಮ್ಮತ್ ಸಿಂಗ್, ಹೆನ್ರಿಿಚ್ ಕ್ಲಾಾಸನ್, ಮಿಲಿಂದ್ ಕುಮಾರ್.

Leave a Reply

Your email address will not be published. Required fields are marked *

error: Content is protected !!