Sunday, 12th May 2024

ಕರ್ನಾಟಕಕ್ಕೆ 35 ರನ್ ಜಯ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಪವನ್ ದೇಶ್‌ಪಾಂಡೆ ಅರ್ಧ ಶತಕ ಹೆರಂಬ್ ಪರಬ್ 5 ವಿಕೆಟ್ ಗೋವಾಗೆ ಸೋಲು

ವಿಜಯನಗರಂ:
ಪವನ್ ದೇಶ್‌ಪಾಂಡೆ (63 ರನ್, 32 ಎಸೆತಗಳು) ಅವರ ಅತ್ಯಮೂಲ್ಯ ಅರ್ಧಶತಕ ಹಾಗೂ ಶ್ರೇಯಸ್ ಗೋಪಾಲ್ (14 ಕ್ಕೆೆ 3) ಅವರ ಸ್ಪಿಿನ್ ಮೋಡಿಯ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಟೂರ್ನಿಯ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಗೋವಾ ವಿರುದ್ಧ 35 ರನ್ ಗಳಿಂದ ಜಯ ಸಾಧಿಸಿತು. ಇದರೊಂದಿಗೆ 20 ಅಂಕಗಳೊಂದಿಗೆ ‘ಎ’ ಗುಂಪು ಪಟ್ಟಿಿಯಲ್ಲಿ ಅಗ್ರ ಸ್ಥಾಾನ ಅಲಂಕರಿಸಿತು.

ಇಲ್ಲಿನ ಡಾ. ಪಿ.ವಿ.ಜಿ ರಾಜು ಕ್ರೀಡಾಂಗಣದಲ್ಲಿ ಮೊದಲು ಬ್ಯಾಾಟಿಂಗ್ ಮಾಡಿದ ಕರ್ನಾಟಕ ತಂಡ, ನಿಗದಿತ 20 ಓವರ್ ಗಳಿಗೆ 9 ವಿಕೆಟ್ ನಷ್ಟಕ್ಕೆೆ 172 ರನ್ ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಗೋವಾ 19.3 ಓವರ್ ಗಳಿಗೆ 137 ರನ್ ಗಳಿಗೆ ಆಲೌಟ್ ಆಯಿತು.

ಕರ್ನಾಟಕ ನೀಡಿದ್ದ ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಗೋವಾ ತಂಡ ಮೊದಲನೇ ವಿಕೆಟ್ ಬೇಗ ಕಳೆದುಕೊಂಡಿತು. ಆದರೂ. ಆರಂಭಿಕ ಬ್ಯಾಾಟ್‌ಸ್‌‌ಮನ್ ಆದಿತ್ಯ ಕೌಶಿಕ್ ಅವರು ಅತ್ಯುತ್ತಮ ಪ್ರದರ್ಶನ ತೋರಿದರು. 43 ಎಸೆತಗಳಿಗೆ 48 ರನ್ ಗಳಿಸಿದರು. ಇವರ ಜತೆ ಮಲ್ಲಿಕ್ ಸಾಬ್ ಸಿರೂರ್ 13 ಎಸೆತಗಳಿಗೆ 27 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಪ್ರಭು ದೇಸಾಯಿ 26 ಎಸೆತಗಳಿಗೆ 28 ರನ್ ಗಳಿಸಿದರು. ಗೋವಾ ಈ ಮೂವರು ಬ್ಯಾಾಟ್‌ಸ್‌‌ಮನ್ ಗಳು ಮಾತ್ರ ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಇವರು ಕ್ರೀಸ್‌ನಲ್ಲಿ ಇರುವವರೆಗೂ ಗೋವಾ ಮೊತ್ತ ಉತ್ತಮ ಸರಾಸರಿ ಹೊಂದಿತ್ತು. 15 ಓವರ್ ಗಳ ವರೆಗೂ ಗೋವಾ ಗೆಲುವಿನ ಹಾದಿ ಉತ್ತಮವಾಗಿತ್ತು. ಪ್ರಭು ದೇಸಾಯಿ ಹಾಗೂ ಆದಿತ್ಯ ಕೌಶಿಕ್ ಔಟ್ ಆದ ಬಳಿಕ ಗೋವಾ ತಂಡಕ್ಕೆೆ ಹಿನ್ನಡೆಯಾಯಿತು.

ಅಂತಿಮವಾಗಿ 137 ರನ್ ಗಳಿಗೆ ಸರ್ವಪತನವಾಯಿತು. ಕರ್ನಾಟಕ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಶ್ರೇಯಸ್ ಗೋಪಾಲ್ ಶ್ರೇಯಸ್ ಗೋಪಾಲ್ ಮೂರು ವಿಕೆಟ್ ಪಡೆದರು. ಅಭಿಮನ್ಯು ಮಿಥುನ್, ರೋನಿತ್ ಮೋರೆ ಹಾಗೂ ಪ್ರವೀಣ್ ದುಬೆ ತಲಾ ಎರಡು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿತು. ಅದ್ಭುತ ಲಯದಲ್ಲಿದ್ದ ದೇವದತ್ತ ಪಡಿಕ್ಕಲ್(11) ಹಾಗೂ ನಾಯಕ ಮನೀಷ್ ಪಾಂಡೆ (17) ಇವರಿಬ್ಬರು ಹೆರಂಬ್ ಪರಬ್‌ಗೆ ವಿಕೆಟ್ ಬಹುಬೇಗ ವಿಕೆಟ್ ಒಪ್ಪಿಿಸಿದರು. ಒಂದು ಹಂದತಲ್ಲಿ ಉತ್ತಮ ಬ್ಯಾಾಟಿಂಗ್ ಮಾಡುತ್ತಿಿದ್ದ ಕರುಣ್ ನಾಯರ್ 21 ರನ್ ಗಳಿಸಿ ಔಟ್ ಆದರು.
ಆರಂಭಿಕ ಕೆ.ಎಲ್ ರಾಹುಲ್ 27 ಎಸೆತಗಳಲ್ಲಿ ಒಂದು ಸಿರ್ಕ್ಸ ಹಾಗೂ ಮೂರು ಬೌಂಡರಿಯೊಂದಿಗೆ 34 ರನ್ ಗಳಿಸಿದ್ದರು. ಉತ್ತಮ ಬ್ಯಾಾಟಿಂಗ್ ಮಾಡುತ್ತಿಿದ್ದ ಅವರನ್ನು ಪಂಡ್ರೇಕರ್ ಔಟ್ ಮಾಡಿದರು.

ಮಧ್ಯಮ ಕ್ರಮಾಂಕದಲ್ಲಿ ಕಣಕ್ಕೆೆ ಇಳಿದ ಎಡಗೈ ಬ್ಯಾಾಟ್‌ಸ್‌‌ಮನ್ ಪವನ್ ದೇಶ್‌ಪಾಂಡೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಿಸಿಕೊಂಡರು. ಯಾವುದೇ ತಪ್ಪುು ಹೊಡೆತಗಳಿಗೆ ಮೊರೆ ಹೋಗದ ಅವರು 32 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ ಸ್ಫೋೋಟಕ 63 ರನ್ ಸಿಡಿಸಿದರು. ಇವರ ಅರ್ಧ ಶತಕದಿಂದ ಕರ್ನಾಟಕ ತಂಡದ ಮೊತ್ತ 150ರ ಗಡಿ ದಾಟಲು ಸಾಧ್ಯವಾಯಿತು.
ಗೋವಾ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಹೆರಂಬ್ ಪರಬ್ ನಾಲ್ಕು ಓವರ್ ಗಳಿಗೆ 24 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಅಮೂಲ್ಯ ಪಂಡ್ರೇಕರ್ ಎರಡು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 20 ಓವರ್ ಗಳಿಗೆ 172/9 (ಪವನ್ ದೇಶ್ಪಾಾಂಡೆ 63, ಕೆ.ಎಲ್ ರಾಹುಲ್ 34, ಕರುಣ್ ನಾಯರ್ 21; ಹೆರಂಬ್ ಪರಗ್ 24 ಕ್ಕೆೆ 5, ಅಮೂಲ್ಯ ಪಂಡ್ರೇಕರ್ 35 ಕ್ಕೆೆ 2)
ಗೋವಾ: 19.3 ಓವರ್ ಗಳಿಗೆ 137/10 (ಆದಿತ್ಯ ಕೌಶಿಕ್ 48, ಮಲ್ಲಿಕ್ ಸಾಬ್ ಸಿರೂರ್ 27, ಪ್ರಭು ದೇಸಾಯಿ 28; ಶ್ರೇಯಸ್ ಗೋಪಾಲ್ 14 ಕ್ಕೆೆ 3, ಅಭಿಮನ್ಯು ಮಿಥುನ್ 24 ಕ್ಕೆೆ 2, ರೋನಿತ್ ಮೋರೆ 24 ಕ್ಕೆೆ 2)

-ಪವನ್ ದೇಶ್‌ಪಾಂಡೆ
-ಶ್ರೇಯಸ್ ಗೋಪಾಲ್

Leave a Reply

Your email address will not be published. Required fields are marked *

error: Content is protected !!