Babar Azam: ಹಾಶಿಮ್ ಆಮ್ಲ ವಿಶ್ವ ದಾಖಲೆ ಸರಿಗಟ್ಟಿದ ಬಾಬರ್
ಶುಕ್ರವಾರ ರಾತ್ರಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 49.3 ಓವರ್‌ಗಳಲ್ಲಿ 242 ರನ್‌ಗೆ ಸರ್ವಪತನ ಕಂಡಿತು. ಬಳಿಕ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಸಂಘಟಿತ ಬ್ಯಾಟಿಂಗ್ ಮೂಲಕ 5 ವಿಕೆಟ್‌ಗೆ 243 ರನ್ ಬಾರಿಸಿ ಗೆಲುವು ಸಾಧಿಸಿತು.


ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬರ್ ಅಜಂ(Babar Azam) ಅವರು ಟೀಮ್ ತ್ರಿಕೋನ ಸರಣಿಯ ನ್ಯೂಜಿಲ್ಯಾಂಡ್(New Zealand vs Pakistan) ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 29 ರನ್ ಬಾರಿಸಿದರೂ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 6 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ 136 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದರು. ಆದರೆ ಬಾಬರ್ 123 ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಶಿಮ್ ಆಮ್ಲ(Hashim Amla) ಕೂಡ 123 ಇನಿಂಗ್ಸ್‌ನಲ್ಲಿ 6 ಸಾವಿರ ರನ್ ಪೂರೈಸಿದ್ದಾರೆ. ಸದ್ಯ ಬಾಬರ್ ಮತ್ತು ಆಮ್ಲ ಜಂಟಿ ದಾಖಲೆ ಹೊಂದಿದ್ದಾರೆ.
ಶುಕ್ರವಾರ ರಾತ್ರಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 49.3 ಓವರ್‌ಗಳಲ್ಲಿ 242 ರನ್‌ಗೆ ಸರ್ವಪತನ ಕಂಡಿತು. ಬಳಿಕ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಸಂಘಟಿತ ಬ್ಯಾಟಿಂಗ್ ಮೂಲಕ 5 ವಿಕೆಟ್‌ಗೆ 243 ರನ್ ಬಾರಿಸಿ ಗೆಲುವು ಸಾಧಿಸಿತು. ಕಿವೀಸ್ ಪರ ಡ್ಯಾರಿಯಲ್ ಮಿಚೆಲ್(57) ಮತ್ತು ಟಾಮ್ ಲ್ಯಾಥಮ್(56) ಅರ್ಧಶತಕ ಬಾರಿಸಿದರೆ, ಆರಂಭಕಾರ ಡೆವೋನ್ ಕಾನ್ವೆ (48) ರನ್ ಬಾರಿಸಿದರು. ಕಳೆದ ಪಂದ್ಯದ ಶತಕ ವೀರ ಕೇನ್ ವಿಲಿಯಮ್ಸನ್ 34 ರನ್ ಗಳಿಸಿದರು. ಪಾಕ್ ಪರ ನಶೀಮ್ ಶಾ 2 ವಿಕೆಟ್ ಕಿತ್ತರು.
A cover drive straight into the record books! 📖
— FanCode (@FanCode) February 14, 2025
Earlier today, Babar Azam became the joint-fastest to 6000 runs ✨#TriNationSeriesOnFanCode | #PAKvNZ pic.twitter.com/upO3Dh5OwQ
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಪರ ನಾಯಕ ಮೊಹಮ್ಮದ್ ರಿಜ್ವಾನ್(46) ಮತ್ತು ಸಲ್ಮಾನ್ ಅಘಾ (45) ಹೊರತುಪಡಿಸಿ ಉಳಿದವರಿಂದ ನಿರೀಕ್ಷಿತ ಬ್ಯಾಟಿಂಗ್ ಕಂಡುಬರಲಿಲ್ಲ. ಕಿವೀಸ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ವಿಲಿಯಂ ಒರೂರ್ಕೆ 43 ರನ್‌ಗೆ 4 ವಿಕೆಟ್ ಕಿತ್ತರು. ಮೈಕೆಲ್ ಬ್ರೇಸ್ವೆಲ್ 2 ವಿಕೆಟ್ ಉರುಳಿಸಿದರು.
ಪೀಟರ್ಸನ್ ಮಗನಿಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ
ವಿರಾಟ್ ಕೊಹ್ಲಿ(Virat Kohli) ಅವರು ಇತ್ತೀಗೆಚೆ ಮುಕ್ತಾಯ ಕಂಡಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಕೆವಿನ್ ಪೀಟರ್ಸನ್(Kevin Pietersen) ಜತೆ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ಸರಣಿ ಮುಕ್ತಾಯದ ಬಳಿಕ ಕೊಹ್ಲಿ ಅವರು ತಮ್ಮ ಜೆರ್ಸಿಯಲ್ಲಿ(India jersey) ಸಹಿ ಹಾಕಿ ಪೀಟರ್ಸನ್ ಮಗ ಡೈಲನ್(Dylan)ಗೆ ಉಡುಗೊರೆಯಾಗಿ ನೀಡಿದ್ದರು. ಇದೀಗ ಕೊಹ್ಲಿ ನೀಡಿದ ಈ ವಿಶೇಷ ಜೆರ್ಸಿಯನ್ನು ತೊಟ್ಟ ಮಗನ ಫೋಟೊವನ್ನು ಪೀಟರ್ಸನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕೊಹ್ಲಿಗೆ ಧನ್ಯವಾದ ತಿಳಿಸಿದ್ದಾರೆ. ಡೈಲನ್, ವಿರಾಟ್ ಕೊಹ್ಲಿಯ ಅಪ್ಪಟ್ಟ ಅಭಿಮಾನಿಯಾಗಿದ್ದಾನೆ.
ವಿರಾಟ್ ಕೊಹ್ಲಿ ಉಡುಗೊರೆ ನೀಡಿದ ಜೆರ್ಸಿಯಲ್ಲಿ 'ಟು ಡೈಲನ್, ವಿತ್ ಬೆಸ್ಟ್ ವಿಶ್, ವಿರಾಟ್ ಕೊಹ್ಲಿ' ಎಂದು ಬರೆದಿದ್ದಾರೆ