IND vs ENG: 4 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್‌ಗೆ ಆಸರೆಯಾದ ಜೋ ರೂಟ್!
ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 10 ರಂದು ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲನೇ ದಿನದಾಟದ ಅಂತ್ಯಕ್ಕೆ 78 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 237 ರನ್‌ಗಳನ್ನು ಕಲೆ ಹಾಕಿದೆ. ಜೋ ರೂಟ್ ಅಜೇಯ 99 ರನ್ ಗಳಿಸಿದ್ದು, ಶತಕದಂಚಿನಲ್ಲಿದ್ದಾರೆ. ಮತ್ತೊಂದು ತುದಿಯಲ್ಲಿ ನಾಯಕ ಬೆನ್ ಸ್ಟೋಕ್ಸ್ ಇದ್ದಾರೆ.

ಭಾರತ-ಇಂಗ್ಲೆಂಡ್ ತಂಡಗಳ ನಡುವಣ ಮೂರನೇ ಟೆಸ್ಟ್ ಮೊದಲನೇ ದಿನದ ಹೈಲೈಟ್ಸ್.

ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ಜುಲೈ 10 ರಂದು ಗುರುವಾರ ಆರಂಭವಾದ ಭಾರತ ಹಾಗೂ ಇಂಗ್ಲೆಂಡ್ (IND vs ENG) ತಂಡಗಳ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ದಿನ ತೀವ್ರ ಕುತೂಹಲದಿಂದ ಕೂಡಿತ್ತು. ಎರಡೂ ತಂಡಗಳ ನಡುವಣ ಪೈಪೋಟಿ ಸಮಬಲದಿಂದ ಕೂಡಿತ್ತು. ಭಾರತ ತಂಡದ ಪರ ನಿತೀಶ್ ರೆಡ್ಡಿ (Nitish Reddy) ಎರಡು ವಿಕೆಟ್ ಕಿತ್ತು ಗಮನ ಸೆಳೆದರೆ, ಆತಿಥೇಯ ಇಂಗ್ಲೆಂಡ್ ತಂಡದ ಪರ ಮಾಜಿ ನಾಯಕ ಜೋ ರೂಟ್ (Joe Root) ತಮ್ಮ ಸೋಗಸಾದ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಮೊದಲನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡರೂ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಅವರ ಆಟ ಆಸರೆಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಇಂಗ್ಲೆಂಡ್ ತಂಡ ಮೊದಲನೇ ದಿನದಾಟ ಮುಗಿಯುವ ಹೊತ್ತಿಗೆ ಪ್ರಥಮ ಇನಿಂಗ್ಸ್‌ನಲ್ಲಿ 78 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 251 ರನ್‌ಗಳನ್ನು ಕಲೆ ಹಾಕಿದೆ. ಮೊದಲನೇ ದಿನ ಬ್ಯಾಟಿಂಗ್‌ನಲ್ಲಿ ಮಿಂಚಿದ ಮಾಜಿ ನಾಯಕ ಜೋ ರೂಟ್(99* ರನ್) ಹಾಗೂ ಬೆನ್ ಸ್ಟೋಕ್ಸ್ (39*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ನಿತೀಶ್ ರೆಡ್ಡಿ ಎರಡು ವಿಕೆಟ್ ಕಿತ್ತಿದ್ದರೆ, ಜಸ್‌ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.
IND vs ENG: ಗಾಯಾಳು ರಿಷಭ್ ಪಂತ್ ಲಾರ್ಡ್ಸ್ ಟೆಸ್ಟ್‌ಗೆ ಅಲಭ್ಯರಾದರೆ ಮುಂದೇನು?
ಇಂಗ್ಲೆಂಡ್‌ಗೆ ಆಘಾತ ನೀಡಿದ್ದ ನಿತೀಶ್ ರೆಡ್ಡಿ
ಈ ಸರಣಿಯಲ್ಲಿ ಇದೇ ಮೊದಲ ಬಾರಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಿರ್ಧಾರ ತೆಗೆದುಕೊಂಡ ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ ಹಾಗೂ ಝ್ಯಾಕ್ ಕ್ರಾವ್ಲಿ ಕೆಲಕಾಲ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಅವರ ಸವಾಲನ್ನು ಆರಂಭಿಕರು ಗೆದ್ದಿದ್ದರು. ಅದರಂತೆ ಈ ಜೋಡಿ ಮೊದಲನೇ ವಿಕೆಟ್‌ಗೆ 43 ರನ್ ಗಳಿಸಿತ್ತು. ಆದರೆ, 14ನೇ ಓವರ್‌ನಲ್ಲಿ ಚೆಂಡು ಕೈಗೆತ್ತಿಕೊಂಡ ನಿತೀಶ್ ರೆಡ್ಡಿ ಮ್ಯಾಜಿಕ್ ಮಾಡಿದರು. ಅವರು ಬೆನ್ ಡಕೆಟ್ (23) ಹಾಗೂ ಝ್ಯಾಕ್ ಕ್ರಾವ್ಲಿ (18) ಅವರನ್ನು ಬೇಗ ಔಟ್ ಆಡಿದರು. ಆ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡಿದ್ದರು.
Stumps on the opening day of the 3rd Test 🏟️
— BCCI (@BCCI) July 10, 2025
Two wickets in the final session for #TeamIndia as England reach 251/4
See you tomorrow for Day 2 action
Scorecard ▶️ https://t.co/X4xIDiSUqO#ENGvIND pic.twitter.com/XhzEQZEzXY
ರೂಟ್-ಪೋಪ್ ಶತಕದ ಜೊತೆಯಾಟ
ನಂತರ ಮೂರನೇ ವಿಕೆಟ್‌ಗೆ ಜೊತೆಯಾದ ಒಲ್ಲಿ ಪೋಪ್ ಹಾಗೂ ಜೋ ರೂಟ್ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ದೀರ್ಘಾವಧಿ ಭಾರತದ ಬೌಲರ್‌ಗಳನ್ನು ಕಾಡಿತು ಹಾಗೂ 109 ರನ್‌ಗಳ ಜೊತೆಯಾಟವನ್ನು ಆಡಿತು. ಆ ಮೂಲಕ ಇಂಗ್ಲೆಂಡ್ ತಂಡದ ಮೊತ್ತವನ್ನು 150 ರನ್‌ಗಳ ಗಡಿಯನ್ನು ದಾಟಿಸಿತು. 104 ಎಸೆತಗಳಲ್ಲಿ 44 ರನ್‌ಗಳನ್ನು ಕಲೆ ಹಾಕಿದ ಒಲ್ಲಿ ಪೋಪ್‌ಗೆ ರವೀಂದ್ರ ಜಡೇಜಾ ಪೆವಿಲಿಯನ್ ಹಾದಿಯನ್ನು ತೋರಿಸಿ ದೊಡ್ಡ ಜತೆಯಾಟವನ್ನು ಮುರಿದರು.
IND vs ENG: ಸತತ 13 ಪಂದ್ಯಗಳಲ್ಲಿ ಟಾಸ್ ಸೋತು ಅನಗತ್ಯ ದಾಖಲೆ ಬರೆದ ಭಾರತ!
ಶತಕದಂಚಿನಲ್ಲಿ ಜೋ ರೂಟ್
ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಹ್ಯಾರಿ ಬ್ರೂಕ್ ನಿರಾಶೆ ಮೂಡಿಸಿದರು. ಅವರು 11 ರನ್ ಗಳಿಸಿದ ಬಳಿಕ ಜಸ್‌ಪ್ರೀತ್ ಬುಮ್ರಾಗೆ ಕ್ಲೀನ್ ಬೌಲ್ಡ್ ಆದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಮಾಜಿ ನಾಯಕ ಜೋ ರೂಟ್, 191 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ ಅಜೇಯ 99 ರನ್ ಗಳಿಸಿದ್ದಾರೆ. ಆ ಮೂಲಕ ಶತಕದಂಚಿನಲ್ಲಿದ್ದಾರೆ. ಇವರು 79 ರನ್ ಜೊತೆಯಾಟವನ್ನು ಆಡಿದ ಬೆನ್ ಸ್ಟೋಕ್ಸ್ 102 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲನೇ ದಿನ ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಮಿಂಚಿದ ನಿತೀಶ್ ರೆಡ್ಡಿ (14-46-2) ಎರಡು ವಿಕೆಟ್ ಕಿತ್ತಿದ್ದರೆ, ಜಸ್‌ಪ್ರೀತ್ ಬುಮ್ರಾ (18-35-1) ಹಾಗೂ ರವೀಂದ್ರ ಜಡೇಜಾ (10-26-1) ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.