ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಗಾಯಾಳು ರಿಷಭ್‌ ಪಂತ್‌ ಲಾರ್ಡ್ಸ್‌ ಟೆಸ್ಟ್‌ಗೆ ಅಲಭ್ಯರಾದರೆ ಮುಂದೇನು?

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭೋಜನ ವಿರಾಮದ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಟೀಮ್‌ ಇಂಡಿಯಾದ ವಿಕೆಟ್ ಕೀಪರ್ ರಿಷಭ್ ಪಂತ್‌ ಅವರ ಎಡಗೈ ತೋರು ಬೆರಳಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಮೈದಾನವನ್ನು ತೊರೆದಿದ್ದಾರೆ. ಅವರ ಬದಲು ಧ್ರುವ್‌ ಜುರೆಲ್‌ ವಿಕೆಟ್‌ ಕೀಪಿಂಗ್‌ಗೆ ಬಂದಿದ್ದಾರೆ.

ಗಾಯಾಳು ರಿಷಭ್‌ ಪಂತ್‌ ಲಾರ್ಡ್ಸ್‌ ಟೆಸ್ಟ್‌ಗೆ ಅಲಭ್ಯರಾದರೆ ಮುಂದೇನು?

ರಿಷಭ್‌ ಪಂತ್‌ ಬೆರಳಿಗೆ ಗಾಯವಾಗಿದ್ದು, ಧ್ರುವ್‌ ಜುರೆಲ್‌ ವಿಕೆಟ್‌ ಕೀಪಿಂಗ್‌ಗೆ ಬಂದಿದ್ದಾರೆ.

Profile Ramesh Kote Jul 10, 2025 9:29 PM

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ (IND vs ENG) ಇಲ್ಲಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಿರ್ಧರಿಸಿದರು. ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಒಂದು ಘಟನೆ ಸಂಭವಿಸಿದೆ. ಇಂಗ್ಲೆಂಡ್ ಇನಿಂಗ್ಸ್‌ನ 36ನೇ ಓವರ್‌ಗೂ ಮುನ್ನ ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ರಿಷಭ್ ಪಂತ್(Rishabh Pant) ಗಾಯಕ್ಕೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪರ್ ಆಗಿ ಮೈದಾನಕ್ಕೆ ಬಂದರು. ರಿಷಭ್ ಪಂತ್ ಮೈದಾನದಿಂದ ಹೊರಹೋಗುವುದನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಚಕಿತರಾದರು.

ಅದ್ಭುತವಾಗಿ ವಿಕೆಟ್‌ ಕೀಪೀಂಗ್‌ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ರಿಷಭ್‌ ಪಂತ್‌, ಇಂಗ್ಲೆಂಡ್‌ ಆರಂಭಿಕರಾದ ಬೆನ್‌ ಡಕೆಟ್‌ ಹಾಗೂ ಝ್ಯಾಕ್‌ ಕ್ರಾವ್ಲಿ ಅವರ ಕ್ಯಾಚ್‌ಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು. ಅಲ್ಲದೆ, ಹೊರಗಡೆ ಹೋಗುತ್ತಿದ್ದ ಚೆಂಡನ್ನು ಹಲವು ಬಾರಿ ತಡೆದಿದ್ದರು. ಆದರೆ, 36ನೇ ಓವರ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರ ಎಸೆತದಲ್ಲಿ ಚೆಂಡನ್ನು ಪಡೆಯುವಾಗಿ ತಮ್ಮ ತೋರು ಬೆರಳಿಗೆ ಗಾಯವಾಯಿತು. ಈ ವೇಳೆ ನೋವು ತಡೆಯಲಾಗದೆ ಕೀಪಿಂಗ್‌ ಗ್ಲೌಸ್‌ ತೆಗೆದರು. ನಂತರ ಫಿಸಿಯೊ ಮೈದಾನಕ್ಕೆ ಬಂದು ಪಂತ್‌ ಅವರ ಬೆರಳನ್ನು ಪರಿಶೀಲಿಸಿ ಪ್ರಥಮ ಚಿಕಿತೆಸ ನೀಡಿದರು ಹಾಗೂ ಅವರನ್ನು ಡ್ರೆಸ್ಸಿಂಗ್‌ ರೂಂ ಗೆ ಕರೆದುಕೊಂಡು ಹೋದರು.

IND vs ENG: ಸತತ 13 ಪಂದ್ಯಗಳಲ್ಲಿ ಟಾಸ್‌ ಸೋತು ಅನಗತ್ಯ ದಾಖಲೆ ಬರೆದ ಭಾರತ!

ನಂತದ ಧ್ರುವ್‌ ಜುರೆಲ್‌ ಮೈದಾನಕ್ಕೆ ಆಗಮಿಸಿ ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನು ತೆಗೆದುಕೊಂಡರು. ರಿಷಭ್ ಪಂತ್‌ ಮತ್ತೆ ವಿಕೆಟ್ ಕೀಪಿಂಗ್‌ಗೆ ಮರಳುತ್ತಾರೋ? ಅಥವಾ ಇಲ್ಲವೋ? ಎಂದು ಕಾದು ನೋಡಬೇಕಾಗಿದೆ. ಪಂತ್‌ರ ಬೆರಳಿನ ಗಾಯವು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಮಾನಿಗಳು ಆಶಿಸುತ್ತಾರೆ. ಇಲ್ಲಿಯತನಕ ಆಡಿದ 4 ಇನಿಂಗ್ಸ್‌ಗಳಲ್ಲಿ ಅವರು 342 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.



ರಿಷಭ್‌ ಪಂತ್‌ ಲಾರ್ಡ್ಸ್‌ ಟೆಸ್ಟ್‌ಗೆ ಅಲಭ್ಯರಾದರೆ ಮುಂದೇನು?

ರಿಷಭ್‌ ಪಂತ್ ಟೆಸ್ಟ್ ಪಂದ್ಯದಲ್ಲಿ ಆಡಲು ಫಿಟ್‌ ಆಗಿಲ್ಲವಾದರೆ, ಭಾರತ ತಂಡ ಅವರ ಬದಲಿಗೆ ಅದೇ ಸಾಮರ್ಥ್ಯವುಳ್ಳ ಬದಲಿ ಆಟಗಾರ ಅಥವಾ ಸಬ್‌ಸ್ಟಿಟ್ಯೂಟ್‌ ಆಟಗಾರನನ್ನು ಸೇರಿಸಿಕೊಳ್ಳಲು ಅನುಮತಿಸಲಾಗುವುದಿಲ್ಲ. ಎಂಸಿಸಿ ನಿಯಮಗಳು 2019 ರಿಂದ ಕನ್ಕಷನ್‌ ಮಾತ್ರ ಬದಲಿ ಆಟಗಾರರನ್ನು ಅನುಮತಿಸುತ್ತವೆ. ಆದಾಗ್ಯೂ, ಭಾರತ ತಂಡ "ಬೌಲಿಂಗ್ ಮಾಡದ ಅಥವಾ ನಾಯಕನಾಗಿ ಕಾರ್ಯನಿರ್ವಹಿಸದ ಆಟಗಾರನನ್ನು ಕೇವಲ ಫೀಲ್ಡಿಂಗ್‌ಗೆ ಅಥವಾ ವಿಕೆಟ್‌ ಕೀಪಿಂಗ್‌ಗೆ ಬಳಸಿಕೊಳ್ಳಬಹುದು. ಆದರೆ, ಇದಕ್ಕೆ ಅಂಪೈರ್‌ಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ.

IND vs ENG: ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಕ್ರಿಕೆಟ್‌ ದೇವರು!

ಅದ್ಭುತ ಫಾರ್ಮ್‌ನಲ್ಲಿ ರಿಷಭ್‌ ಪಂತ್‌

ರಿಷಭ್ ಪಂತ್‌ ಮೊದಲನೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳನ್ನು ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಎರಡನೇ ಟೆಸ್ಟ್‌ ಪಂದ್ಯದಲ್ಲಿ 25 ಮತ್ತು 65 ರನ್ ಗಳಿಸಿದ್ದರು. ರಿಷಭ್ ಪಂತ್‌ ಟೆಸ್ಟ್‌ಗೆ ಮರಳಿದ ನಂತರ ಜುರೆಲ್ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾ ವಿರುದ್ಧ ಪರ್ತ್ ಟೆಸ್ಟ್ ಪಂದ್ಯದಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಆಡಿದ್ದರು. ಆದರೆ, ಪಂತ್‌ ಮರಳಿದ ನಂತರ ಅವರು ಬೆಂಚ್‌ನಲ್ಲಿದ್ದಾರೆ. ಒಂದು ವೇಳೆ ಬೆರಳು ಗಾಯದಿಂದ ಪಂತ್‌ ವಿಕೆಟ್ ಕೀಪಿಂಗ್ ನಿರ್ವಹಿಸಲು ಸಾಧ್ಯವಾಗಿಲ್ಲವಾದರೆ ಧ್ರುವ್ ಜುರೆಲ್‌ ಮುಂದಿನ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿ ಆಡಬಹುದು.