ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಜೋ ರೂಟ್‌ ವಿಕೆಟ್‌ ಕಿತ್ತು ಅಪರೂಪದ ದಾಖಲೆ ಜಸ್‌ಪ್ರೀತ್‌ ಬುಮ್ರಾ!

Jasprit Bumrah Creates History: ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಜೋ ರೂಟ್‌ ಅವರನ್ನು ಔಟ್‌ ಮಾಡುವ ಮೂಲಕ ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಜೋ ರೂಟ್‌ ಅವರನ್ನು ಔಟ್‌ ಮಾಡಿದ ಮೊದಲ ಬೌಲರ್‌ ಎಂಬ ದಾಖಲೆಗೆ ಬುಮ್ರಾ ಭಾಜನರಾಗಿದ್ದಾರೆ.

ಜೋ ರೂಟ್‌ ವಿಕೆಟ್‌ ಕಿತ್ತು ಅಪರೂಪದ ದಾಖಲೆ ಜಸ್‌ಪ್ರೀತ್‌ ಬುಮ್ರಾ!

ಜೋ ರೂಟ್‌ ವಿಕೆಟ್‌ ಕಿತ್ತು ವಿಶೇಷ ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ.

Profile Ramesh Kote Jul 11, 2025 8:26 PM

ಲಂಡನ್‌: ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ (IND vs ENG) ಎರಡನೇ ದಿನ ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಮಿಂಚಿದರು. ಪಂದ್ಯದ ಮೊದಲನೇ ದಿನ ಒಂದು ವಿಕೆಟ್‌ ಕಿತ್ತಿದ್ದ ಬುಮ್ರಾ, ಎರಡನೇ ದಿನ ಮೊದಲನೇ ಸೆಷನ್‌ನಲ್ಲಿ ತ್ವರಿತವಾಗಿ ಮೂರು ವಿಕೆಟ್‌ಗಳನ್ನು ಕಿತ್ತಿದ್ದರು. ನಂತರ ಕೊನೆಯಲ್ಲಿ ಜೋಫ್ರಾ ಆರ್ಚರ್‌ ಅವರನ್ನು ಔಟ್‌ ಮಾಡುವ ಮೂಲಕ 5 ವಿಕೆಟ್‌ ಸಾಧನೆ ಮಾಡಿದರು. ಅಂದ ಹಾಗೆ ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ (Joe Root) ಅವರನ್ನು ಔಟ್‌ ಮಾಡಿದ ಬಳಿಕ ಜಸ್‌ಪ್ರೀತ್‌ ಬುಮ್ರಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಈ ಇನಿಂಗ್ಸ್‌ನಲ್ಲಿ ಒಟ್ಟು 27 ಓವರ್‌ಗಳನ್ನು ಬೌಲ್‌ ಮಾಡಿದ್ದ ಬುಮ್ರಾ 74 ರನ್‌ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದರು.

ಮೊದಲನೇ ದಿನ ಹ್ಯಾರಿ ಬ್ರೂಕ್‌ ಅವರನ್ನು ಬೌಲ್ಡ್‌ ಮಾಡಿದ್ದ ಬುಮ್ರಾ, ಎರಡನೇ ದಿನ ಬೆನ್‌ ಸ್ಟೋಕ್ಸ್‌ ಹಾಗೂ ಜೋ ರೂಟ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ್ದರು. ನಂತರ ಕ್ರಿಸ್‌ ವೋಕ್ಸ್‌ ಹಾಗೂ ಜೋಫ್ರಾ ಆರ್ಚರ್‌ ಅವರನ್ನು ಔಟ್‌ ಮಾಡಿದರು. ಈ ಐದು ವಿಕೆಟ್‌ಗಳ ಪೈಕಿ ಜೋ ರೂಟ್‌ ಅವರ ವಿಕೆಟ್‌ ಜಸ್‌ಪ್ರೀತ್‌ ಬುಮ್ರಾ ಪಾಲಿಗೆ ಅತ್ಯಂತ ವಿಶೇಷವಾಯಿತು. ಏಕೆಂದರೆ ಜೋ ರೂಟ್‌ ಅವರನ್ನು ಔಟ್‌ ಮಾಡಿ ಜಸ್‌ಪ್ರೀತ್‌ ಬುಮ್ರಾ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

IND vs ENG: ಚೆಂಡು ಬದಲಾಯಿಸಿದ ಅಂಪೈರ್‌ ಜೊತೆ ಶುಭಮನ್‌ ಗಿಲ್‌ ವಾಗ್ವಾದ! ವಿಡಿಯೊ

ಜೋ ರೂಟ್‌ ವಿಕೆಟ್‌ ಕಿತ್ತು ದೊಡ್ಡ ದಾಖಲೆ ಬರೆದ ಬುಮ್ರಾ

199 ಎಸೆತಗಳಲ್ಲಿ 104 ರನ್‌ಗಳನ್ನು ಗಳಿಸಿದ ಬಳಿಕ ಜೋ ರೂಟ್‌ ಅವರು ಜಸ್‌ಪ್ರೀತ್‌ ಬುಮ್ರಾಗೆ ಬೌಲ್ಡ್‌ ಆದರು. ಆ ಮೂಲಕ ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜೋ ರೂಟ್‌ ಅವರನ್ನು 11ನೇ ಬಾರಿ ಔಟ್‌ ಮಾಡಿದಂತಾಯಿತು. ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಕೂಡ ಇಷ್ಟೇ ಸಲ ಜೋ ರೂಟ್‌ ಅವರನ್ನು ಔಟ್‌ ಮಾಡಿದ್ದಾರೆ. ಇದೀಗ ಈ ಸಾಲಿನಲ್ಲಿ ಈ ಇಬ್ಬರು ಜಂಟಿ ಸ್ಥಾನವನ್ನು ಅಲಂಕರಿಸಿದ್ದಾರೆ.

IND vs ENG 3rd Test Day 2 Live: ಜೈಸ್ವಾಲ್‌ ವಿಕೆಟ್‌ ಪತನ, ಭಾರತಕ್ಕೆ ಕನ್ನಡಿಗರ ಆಸರೆ!

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪದಲ್ಲಿ ಜೋ ರೂಟ್‌ ಅವರನ್ನು ಅತಿ ಹೆಚ್ಚು ಬಾರಿ ಔಟ್‌ ಮಾಡಿದ ಬೌಲರ್‌ ಎಂಬ ದಾಖಲೆ ಜಸ್‌ಪ್ರೀತ್‌ ಬುಮ್ರಾ ಹೆಸರಿನಲ್ಲಿದೆ. ಅವರು ಒಟ್ಟು 15 ಬಾರಿ ಜೋ ರೂಟ್‌ ಅವರನ್ನು ಔಟ್‌ ಮಾಡಿದ್ದಾರೆ. ಟೆಸ್ಟ್‌ನಲ್ಲಿ 11 ಬಾರಿ, ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಹಾಗೂ ಟಿ20ಐ ಕ್ರಿಕೆಟ್‌ನಲ್ಲಿ ಒಂದು ಸಲ ಇಂಗ್ಲೆಂಡ್‌ ಮಾಜಿ ನಾಯಕನನ್ನು ಔಟ್‌ ಮಾಡಿದ್ದಾರೆ. ಈ ಸಾಲಿನಲ್ಲಿ ಪ್ಯಾಟ್‌ ಕಮಿನ್ಸ್‌ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 14 ಬಾರಿ ಜೋರೂಟ್‌ ಅವರನ್ನು ಔಟ್‌ ಮಾಡಿದ್ದಾರೆ.



ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೋ‌ ರೂಟ್‌ ಅವರನ್ನು ಅತಿ ಹೆಚ್ಚು ಬಾರಿ ಔಟ್‌ ಮಾಡಿದ ಬೌಲರ್ಸ್‌

ಜಸ್‌ಪ್ರೀತ್‌ ಬುಮ್ರಾ: 15

ಪ್ಯಾಟ್‌ ಕಮಿನ್ಸ್: 14

ಜಾಶ್‌ ಹೇಝಲ್‌ವುಡ್‌: 13

ರವೀಂದ್ರ ಜಡೇಜಾ: 13

ಟ್ರೆಂಟ್‌ ಬೌಲ್ಟ್‌: 12