ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಸ್ಟುಪಿಡ್‌, ಸ್ಟುಪಿಡ್‌, ಸ್ಟುಪಿಡ್‌ʼ-ರಿಷಭ್‌ ಪಂತ್‌ ರನ್‌ ಔಟ್‌ ಆದ ಬೆನ್ನಲ್ಲೆ ಕೆಎಲ್‌ ರಾಹುಲ್‌ ವಿರುದ್ದ ಫ್ಯಾನ್ಸ್‌ ಕಿಡಿ!

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನ ಅತ್ಯುತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದ ರಿಷಭ್‌ ಪಂತ್‌ ಅನಗತ್ಯವಾಗಿ ರನ್‌ಔಟ್‌ ಆದರು. ಕೆಎಲ್‌ ರಾಹುಲ್‌ ಅವರ ಅನಿರೀಕ್ಷಿತ ಕರೆಗೆ ಓಡಲು ಮುಂದಾದ ರಿಷಭ್‌ ಪಂತ್‌ ಅವರನ್ನು ಇಂಗ್ಲೆಂಡ್ ನಾಯಕ ಬೆನ್‌ ಸ್ಟೋಕ್ಸ್‌ ರನ್‌ಔಟ್‌ ಮಾಡಿದರು.

ರಿಷಭ್‌ ಪಂತ್‌ ರನ್‌ಔಟ್‌: ಕೆಎಲ್‌ ರಾಹುಲ್‌ ವಿರುದ್ದ ಫ್ಯಾನ್ಸ್‌ ಗರಂ!

ರಿಷಭ್‌ ಪಂತ್‌ ರನ್‌ಔಟ್‌ ಆದ ಬಳಿಕ ರಾಹುಲ್‌ ವಿರುದ್ಧ ಫ್ಯಾನ್ಸ್‌ ಕಿಡಿ.

Profile Ramesh Kote Jul 12, 2025 8:20 PM

ಲಂಡನ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ (IND vs ENG) ನಾಲ್ಕನೇ ದಿನದಂದು ಒಂದು ದುರಂತ ಘಟನೆ ಸಂಭವಿಸಿತು. ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ರಿಷಭ್ ಪಂತ್ (Rishabh Pant) ಭೋಜನ ವಿರಾಮಕ್ಕೂ ಸ್ವಲ್ಪ ಮೊದಲು ರನೌಟ್ ಆದರು. ಬೆನ್ ಸ್ಟೋಕ್ಸ್ (Ben Stokes) ಅದ್ಭುತ ಫೀಲ್ಡಿಂಗ್‌ನಿಂದ ಡೈರೆಕ್ಟ್ ಹಿಟ್ ಮೂಲಕ ರಿಷಭ್‌ ಪಂತ್‌ ಅವರನ್ನು ರನ್‌ಔಟ್ ಮಾಡಿದರು. ಕೆಎಲ್ ರಾಹುಲ್ ಅವರ ತಪ್ಪು ನಿರ್ಧಾರದಿಂದಾಗಿ ಪಂತ್ ವಿಕೆಟ್ ಕಳೆದುಕೊಳ್ಳಬೇಕಾಯಿತು. ರಿಷಭ್‌ ಪಂತ್‌ ಅದ್ಭುತ ಫಾರ್ಮ್‌ನಲ್ಲಿದ್ದರು. ಆದರೆ, ಅವರು ಅನಿರೀಕ್ಷಿತವಾಗಿ ರನ್‌ಔಟ್‌ ಆಗಿದ್ದರಿಂದ ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯಾಯಿತು. ಈ ಹಿನ್ನೆಲೆಯಲ್ಲಿ ಕೆಎಲ್‌ ರಾಹುಲ್‌ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲ್ಲಿಮ ಐತಿಹಾಸಿಕ ಲಾರ್ಡ್ಸ್‌ ಅಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ರಿಷಭ್ ಪಂತ್ ಉತ್ತಮ ಫಾರ್ಮ್‌ನಲ್ಲಿದ್ದರು ಮತ್ತು ಅವರು 112 ಎಸೆತಗಳ್ಲಲಿ 74 ರನ್ ಗಳಿಸಿದ್ದರು. ಭೋಜನ ವಿರಾಮಕ್ಕೂ ಸ್ವಲ್ಪ ಮೊದಲು ಅವರು ರನ್‌ ಔಟಾದರು. ಶೋಯೆಬ್ ಬಶೀರ್ ಆಫ್-ಸೈಡ್‌ನಲ್ಲಿ ಚೆಂಡನ್ನು ಎಸೆದರು. ಪಂತ್ ಆಫ್‌ ಸೈಡ್‌ ಡಿಫೆನ್ಸ್‌ ಮಾಡಿದರು. ಕೆಎಲ್ ರಾಹುಲ್ ಸುಲಭವಾಗಿ ರನ್ ಗಳಿಸಬಹುದು ಎಂದು ಭಾವಿಸಿದರು ಹಾಗೂ ಪಂತ್‌ಗೆ ರನ್ ಓಡಲು ಕರೆ ನೀಡಿದರು. ಪಂತ್ ಪ್ರತಿಕ್ರಿಯಿಸಲು ಸ್ವಲ್ಪ ತಡವಾಯಿತು.

IND vs ENG: ಲಾರ್ಡ್ಸ್‌ ಅಂಗಣದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್‌!

ಈ ವೇಳೆ ಅವರು ಸ್ವಲ್ಪ ತಡವಾಗಿ ಓಡುತ್ತಿದ್ದರು ಹಾಗೂ ಬೆನ್‌ ಸ್ಟೋಕ್ಸ್‌ ಕೆಎಲ್‌ ರಾಹುಲ್‌ ಕಡೆಗೆ ಚೆಂಡನ್ನು ಥ್ರೋ ಮಾಡಬಹುದೆಂದು ಭಾವಿಸಿದ್ದರು. ಆದರೆ, ಬೆನ್‌ ಸ್ಟೋಕ್ಸ್‌ ಬೇಗನೆ ಬೌಲರ್‌ ಎಂಡ್‌ ಕಡೆಗೆ ಎಸೆಯುವ ಮೂಲಕ ರನ್‌ಔಟ್‌ ಮಾಡಿದರು. ಆ ಮೂಲಕ ಬೆರಳು ಗಾಯದ ಹೊರತಾಗಿಯೂ ಬ್ಯಾಟ್‌ ಮಾಡುತ್ತಿದ್ದ ರಿಷಭ್‌ ಪಂತ್‌ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು.



ಕೆಎಲ್‌ ರಾಹುಲ್‌ ವಿರುದ್ಧ ಫ್ಯಾನ್ಸ್‌ ಆಕ್ರೋಶ

ರಿಷಭ್‌ ಪಂತ್‌ ರನ್‌ಔಟ್‌ ಆದ ಬೆನ್ನಲ್ಲೆ ಕೆಎಲ್‌ ರಾಹುಲ್‌ ವಿರುದ್ಧ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಹಿಂದೆ ರಿಷಭ್‌ ಪಂತ್‌ಗೆ ಸುನೀಲ್‌ ಗವಾಸ್ಕರ್ ಬಳಸಿದ್ದ ಸ್ಟುಪಿಡ್‌ ಪದವನ್ನು ಕೆಎಲ್‌ ರಾಹುಲ್‌ ವಿರುದ್ಧ ಅಭಿಮಾನಿಗಳು ಬಳಸಿದ್ದಾರೆ. ಅಭಿಮಾನಿಯೊಬ್ಬರು, "ಸ್ಟುಪಿಡ್‌, ಸ್ಟುಪಿಡ್‌, ಸ್ಟುಪಿಡ್‌," ಎಂದು ಟೀಕೆ ಮಾಡಿದ್ದಾರೆ. ಇಲ್ಲಿ ರಿಷಭ್‌ ಪಂತ್‌ ಅವರು, ಕೆಎಲ್‌ ರಾಹುಲ್‌ ಅವರಿಗೆ ಸ್ಟ್ರೈಕ್‌ ಕೊಡಬೇಕೆಂದು ಬಯಿಸಿದ್ದರು. ಆದರೆ, ರಾಹುಲ್‌ ಸಿಂಗಲ್‌ ರನ್‌ಗೆ ಓಡಿಸಿದ್ದರು.



ರಿಷಭ್‌ ಪಂತ್‌ ಕೇವಲ ಬ್ಯಾಟಿಂಗ್‌ನಲ್ಲಿ ಹೋರಾಟ ನಡೆಸಿಲ್ಲ. ಆದರೆ, ಅವರು ಬೆರಳು ಗಾಯದ ಹೊರತಾಗಿಯೂ ಯೋಧನಂತೆ ಹೋರಾಟ ನಡೆಸಿದ್ದಾರೆ ಎಂದು ಅಭಿಮಾನಿಯೊಬ್ಬರು ರಿಷಭ್‌ ಪಂತ್‌ ಅವರನ್ನು ಶ್ಲಾಘಿಸಿದ್ದಾರೆ.



"ಸ್ಟುಪಿಡ್ ಸ್ಟುಪಿಡ್ ಸ್ಟುಪಿಡ್. ನಾವು ಸೆಷನ್ ಮುಗಿಸಿದೆವು, ಅವರನ್ನು ಉತ್ತಮ ಲಯದಲ್ಲಿ ಇರಿಸಿದೆವು. ನಂತರ ಕೊನೆಯ ಓವರ್‌ನಲ್ಲಿ ಕೆಎಲ್ ತನ್ನ 100 ರನ್ ಗಳಿಸಲು ಸಿಂಗಲ್‌ಗೆ ಹೋಗಬೇಕಾಯಿತು, ಆದರೆ ಅದು ಇರಲಿಲ್ಲ. ಸೆಷನ್ ಅನ್ನು ಹುಳಿ ರುಚಿಯೊಂದಿಗೆ ಕೊನೆಗೊಳಿಸಿದೆ. ನಾವು ಇನ್ನೂ ಉತ್ತಮ ಸ್ಥಾನದಲ್ಲಿದ್ದೇವೆ ಆದರೆ ಅದು ಅಷ್ಟು ಅಗತ್ಯವಿರಲಿಲ್ಲ. ಇಬ್ಬರೂ ಹಿಂತಿರುಗಿ 100 ರನ್ ಗಳಿಸಬಹುದಿತ್ತು," ಎಂದು ಮತ್ತೊಬ್ಬ ಅಭಿಮಾನಿ ತಿಳಿಸಿದ್ದಾರೆ.