ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indi (Vijayapur) News: ವಚನಗಳ ಮೂಲಕ ಬಸವಣ್ಣ ಸಮಾಜದ ಅಂಧಕಾರ, ಮೂಢನಂಬಿಕೆ ಹೋಗಲಾಡಿಸಿದ್ದಾರೆ: ಶಾಸಕ ಯಶವಂತರಾಯಗೌಡ ಪಾಟೀಲ

12ನೇ ಶತಮಾನದಲ್ಲಿ ಕುಲಕ್ಕೊಬ್ಬ ಶರಣರಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾ ಪ್ರಭುತ್ವ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದು ಅಣ್ಣ ಬಸವಣ್ಣನವರಿಗೆ ಯಾವುದೇ ಮುಜುಗರ ವಾಗದಂತೆ ಕಾರ್ಯ ನಿರ್ವಹಿಸಿದರು ಇವರ ಕಾರ್ಯಕ್ಷಮತೆ ಇಂದಿನವರಿಗೆ ಪ್ರೇರಣೆಯಾಗಿದೆ.

ವಚನಗಳ ಮೂಲಕ ಸಮಾಜದ ಅಂಧಕಾರ, ಮೂಢನಂಬಿಕೆ ಹೋಗಲಾಡಿಸಿದ್ದಾರೆ

ಶಾಸಕ ಯಶವಂತರಾಯಗೌಡ.ವ್ಹಿ ಪಾಟೀಲ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾಗವಹಿಸಿದರು.

Profile Ashok Nayak Jul 12, 2025 11:12 PM

ಇಂಡಿ: 12ನೇ ಶತಮಾನದ ವಚನಕಾರರಲ್ಲಿ ನಿಜಶರಣ ಹಡಪದ ಅಪ್ಪಣ ಕೂಡಾ ಒಬ್ಬರು ವಚನ ಚಳುವಳಿಗಳ ಮೂಲ ಸಾಮಾಜಿಕ ಅಂಧಕಾರ, ಮೂಢನಂಬಿಕೆ ಇವುಗಳ ವಿರುದ್ಧ ಹೋರಾಟ ಮಾಡಿದ ಮಹಾನ್ ದಾರ್ಶನಿಕ ಯುಗಪುರುಷ ಅಣ್ಣ ಬಸವಣ್ಣನವರ ಬಲಗೈ ಬಂಟನೆಂದು ಹೆಸರು ಪಡೆದಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ವ್ಹಿ ಪಾಟೀಲ ಹೇಳಿದರು.

ಪಟ್ಟಣದ ನಿಜ ಶರಣ ಹಡಪದ ಅಪ್ಪಣ್ಣನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣವರ ವೃತ್ತಕ್ಕೆ ಪೂಜ್ಯ ಸಲ್ಲಿಸಿ ಮಾತನಾಡಿದ ಅವರು ೧೨ನೇ ಶತಮಾನದಲ್ಲಿ ಕುಲಕ್ಕೊಬ್ಬ ಶರಣರಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಯಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾ ಪ್ರಭುತ್ವ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದು ಅಣ್ಣ ಬಸವಣ್ಣನವರಿಗೆ ಯಾವುದೇ ಮುಜುಗರವಾಗದಂತೆ ಕಾರ್ಯ ನಿರ್ವಹಿಸಿದರು ಇವರ ಕಾರ್ಯಕ್ಷಮತೆ ಇಂದಿನವರಿಗೆ ಪ್ರೇರಣೆಯಾಗಿದೆ.

ಇದನ್ನೂ ಓದಿ: Indi (Vijayapura) News: ರೈತ, ಸೈನಿಕ ದೇಶದ ಬೆನ್ನೆಲುಬು: ಬಸವಂತರಾಯಗೌಡ.ವ್ಹಿ ಪಾಟೀಲ

ಹಡಪದ ಅಪ್ಪಣ್ಣನವರು ೨೫೦ಕ್ಕೂ ಅಧಿಕ ವಚನಗಳನ್ನು ಅಪ್ಪಣ್ಣಪ್ರಿಯ ಚನ್ನಬವಣ್ಣ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರಿಗೆ ಅಪ್ಪಣ್ಣವರು ಪ್ರಾಣಪ್ರಿಯರು ಆಗಿದ್ದರು ಎಂಬುದಕ್ಕೆ ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳನ್ನು ಕಂಡುಕೊಂಡರೆ ಗೊತ್ತಾಗು ತ್ತದೆʼ. ಇಂತಹ ಮಹಾನ್ ದಾರ್ಶನಿಕ,‌ ಸಮಾಜ ಚಿಂತಕರ ಜಯಂತಿಗಳು ಇಡೀ ಗ್ರಾಮಗಳ ಮಧ್ಯ ಎಲ್ಲ ಸಮುದಾಯ ಕೂಡಿ ಹಬ್ಬದಂತೆ ಆಚರಿಸಬೇಕು ಇವರು ಯಾವುದೇ ಸಮಾಜಕ್ಕೆ ಸೀಮಿತರಲ್ಲ. ಇಡೀ ಮನುಕುಲದ ಉದ್ದಾರಕರು ಇವರ ಆದರ್ಶಗಳು ಮಾನವ ನಾಗರೀಕ ಸಮಾಜಕ್ಕೆ ದಾರಿದೀಪ ವಾಗಿದೆ ಎಂದರು.

ಸಂತೋಷ ಗೌಳಿ, ಪಂಡೀತ ಬಿರಾದಾರ, ಸಿದ್ದು ನಾವಿ, ಶಿವಾನಂದ ನಾವಿ, ಸಾಯಬಣ್ಣಾ ನಾವಿ, ದೂಳಪ್ಪ ನಾವಿ, ಸಿದ್ದು ಅಪ್ತಾಗೀರಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.