Jamie Smith: ಪಾಕ್ ಆಟಗಾರನನ್ನು ಹಿಂದಿಕ್ಕಿ ವಿಶ್ವ ದಾಖಲೆ ಬರೆದ ಜೇಮಿ ಸ್ಮಿತ್
England vs India 3rd Test: ಜೇಮಿ ಸ್ಮಿತ್‌ಗೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಿಂದ ಸಾವಿರ ರನ್ ಪೂರೈಸಿದ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ಪಾಕಿಸ್ತಾನ ಮಾಜಿ ನಾಯಕ ಸರ್ಫರಾಜ್ ಅಹಮದ್ ಹೆಸರಿನಲ್ಲಿತ್ತು. ಅವರು 1311 ಎಸೆತಗಳಿಂದ ಈ ಮೈಲುಗಲ್ಲು ನೆಟ್ಟಿದ್ದರು. ಇದೀಗ ಜೇಮಿ ಸ್ಮಿತ್ 1303 ಎಸೆತಗಳಲ್ಲಿ ಗುರಿ ತಲುಪಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.


ಲಂಡನ್: ಇಂಗ್ಲೆಂಡ್ ತಂಡದ ಯುವ ವಿಕೆಟ್ ಕೀಪರ್-ಬ್ಯಾಟರ್ ಜೇಮಿ ಸ್ಮಿತ್(Jamie Smith) ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಲಾರ್ಡ್ಸ್‌ನಲ್ಲಿ(Lord's) ನಡೆಯುತ್ತಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ನ(England vs India 3rd Test) ದ್ವಿತೀಯ ದಿನದಾಟದಲ್ಲಿ 10 ರನ್ ಗಳಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಿಂದ ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. ಇದು ಮಾತ್ರವಲ್ಲದೆ ಅತಿ ಕಡಿಮೆ ಇನ್ನಿಂಗ್ಸ್‌ಗಳಿಂದ ಸಾವಿರ ರನ್ ಗಳಿಸಿದ ವಿಕೆಟ್ ಕೀಪರ್ ಪೈಕಿ ಜಂಟಿ ಅಗ್ರಸ್ಥಾನಕ್ಕೇರಿದರು.
ಸಿರಾಜ್ ಅವರ ಓವರ್‌ನಲ್ಲಿ 5 ರನ್ ಗಳಿಸಿದ್ದ ವೇಳೆ ಕೆ.ಎಲ್ ರಾಹುಲ್ ಕೈಚೆಲ್ಲಿದ ಸುಲಭ ಕ್ಯಾಚ್‌ನಿಂದ ಜೀವದಾನ ಪಡೆದ ಸ್ಮಿತ್‌ಗೆ ಈ ದಾಖಲೆ ನಿರ್ಮಿಸಲು ಸಹಾಯ ಮಾಡಿತು. 4 ರನ್ ಪೂರ್ತಿಗೊಳಿಸುತ್ತಿದ್ದಂತೆ ಅವರು ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಜತೆ ಅತಿ ಕಡಿಮೆ ಇನ್ನಿಂಗ್ಸ್‌ಗಳಿಂದ ಸಾವಿರ ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಜಂಟಿ ದಾಖಲೆ ನಿರ್ಮಿಸಿದರು. ಉಭಯ ಆಟಗಾರರು 21 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದಾರೆ. 22 ಇನಿಂಗ್ಸ್‌ನಲ್ಲಿ ಈ ಸಾಧನೆಗೈದಿರುವ ಶ್ರೀಲಂಕಾದ ದಿನೇಶ್ ಚಾಂಡಿಮಲ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಜಂಟಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಜೇಮಿ ಸ್ಮಿತ್‌ಗೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತಗಳಿಂದ ಸಾವಿರ ರನ್ ಪೂರೈಸಿದ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆ ಪಾಕಿಸ್ತಾನ ಮಾಜಿ ನಾಯಕ ಸರ್ಫರಾಜ್ ಅಹಮದ್ ಹೆಸರಿನಲ್ಲಿತ್ತು. ಅವರು 1311 ಎಸೆತಗಳಿಂದ ಈ ಮೈಲುಗಲ್ಲು ನೆಟ್ಟಿದ್ದರು. ಇದೀಗ ಜೇಮಿ ಸ್ಮಿತ್ 1303 ಎಸೆತಗಳಲ್ಲಿ ಗುರಿ ತಲುಪಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಅತಿ ಕಡಿಮೆ ಎಸೆತಗಳಲ್ಲಿ ಟೆಸ್ಟ್‌ನಲ್ಲಿ ಸಾವಿರ ರನ್(ವಿಕೆಟ್ ಕೀಪರ್)
1303 ಜೇಮೀ ಸ್ಮಿತ್
1311 ಸರ್ಫರಾಜ್ ಅಹಮದ್
1330 ಆಡಮ್ ಗಿಲ್‌ಕ್ರಿಸ್ಟ್
1367 ನಿರೋಶನ್ ಡಿಕ್ವೆಲ್ಲಾ
1375 ಕ್ವಿಂಟನ್ ಡಿ ಕಾಕ್
ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಸಾವಿರ ಟೆಸ್ಟ್ ರನ್(ವಿಕೆಟ್ ಕೀಪರ್)
21 ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ)
21 – ಜೇಮೀ ಸ್ಮಿತ್ (ಇಂಗ್ಲೆಂಡ್)
22 – ದಿನೇಶ್ ಚಾಂಡಿಮಲ್ (ಶ್ರೀಲಂಕಾ
22 – ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್)
23 – ಕುಮಾರ್ ಸಂಗಕ್ಕಾರ (ಶ್ರೀಲಂಕಾ)
23 – ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ)
24 – ಜೆಫ್ ಡುಜಾನ್ (ವೆಸ್ಟ್ ಇಂಡೀಸ್)
ಇದನ್ನೂ ಓದಿ IND vs ENG 3rd Test: ತವರಿನಲ್ಲಿ ಟೆಸ್ಟ್ ದಾಖಲೆ ಬರೆದ ಜೋ ರೂಟ್