ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MS Dhoni Birthday: 44ನೇ ವಸಂತಕ್ಕೆ ಕಾಲಿಟ್ಟ 'ಕ್ಯಾಪ್ಟನ್ ಕೂಲ್' ಧೋನಿ; ಅಭಿಮಾನಿಗಳ ಶುಭ ಹಾರೈಕೆ

2004ರಲ್ಲಿ ಏಕದಿನ ಕ್ರಿಕೆಟಿಗನಾಗಿ ಭಾರತದ ಪರ ಧೋನಿ ಪದಾರ್ಪಣೆ ಮಾಡಿದರು. ಬಳಿಕ 2005ರಲ್ಲಿ ಟೆಸ್ಟ್‌$ಹಾಗೂ 2006ರಲ್ಲಿ ಟಿ20ಗೆ ಪದಾರ್ಪಣೆ ಮಾಡಿದರು. ಕೇವಲ ತನ್ನ ಬ್ಯಾಟಿಂಗ್‌ ಅಥವಾ ಕೀಪಿಂಗ್‌ನಿಂದಷ್ಟೇ ಅಲ್ಲದೇ ನಾಯಕತ್ವದಿಂದ ತನ್ನದೇ ಛಾಪು ಮೂಡಿಸಿದ ಕ್ರಿಕೆಟಿಗ ಧೋನಿ.

44ನೇ ವಸಂತಕ್ಕೆ ಕಾಲಿಟ್ಟ 'ಕ್ಯಾಪ್ಟನ್ ಕೂಲ್' ಧೋನಿ

Profile Abhilash BC Jul 7, 2025 9:55 AM

ರಾಂಚಿ: ‘ಕ್ಯಾಪ್ಟನ್ ಕೂಲ್’ ಎಂದೇ ಖ್ಯಾತರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni Birthday) ಅವರಿಗೆ ಇಂದು (ಸೋಮವಾರ) 44ನೇ ಹುಟ್ಟುಹಬ್ಬದ ಸಂಭ್ರಮ. ಧೋನಿ ಹುಟ್ಟಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಬಾನೆತ್ತರದ ಕಟೌಟ್ ಗಳನ್ನು ನಿಲ್ಲಿಸಿ ಸಂಭ್ರಮಿಸಿದ್ದಾರೆ. ಕ್ರೀಡಾಭಿಮಾನಿಗಳು ಸೇರಿ ಬಿಸಿಸಿಐ(BCCI) ಕೂಡ ಸಾಮಾಜಿಕ ತಾಣಗಳಲ್ಲಿ ಶುಭ ಹಾರೈಸಿದೆ.

ಧೋನಿಯೆಂದರೆ ಕೇವಲ ಒಂದು ಹೆಸರಲ್ಲ, ಅವರೊಂದು ಮರೆಯಲಾಗದ ಪರಂಪರೆ. ಅವರು ಭಾರತೀಯ ಕ್ರಿಕೆಟಿನ ಚಹರೆಯನ್ನೇ ಬದಲಿಸಿದರು. ಜಾಗತಿಕವಾಗಿ ಲಕ್ಷಾಂತರ ಮಂದಿಯನ್ನು ಪ್ರಭಾವಿಸಿದ ವ್ಯಕ್ತಿ ಅವರು. ಭಾರತೀಯ ಕ್ರಿಕೆಟ್‌ ತಂಡ ಮೂರೂ ಮಾದರಿಗಳಲ್ಲಿ ಅವರ ನಾಯಕತ್ವದಡಿಯಲ್ಲಿ ವಿಶ್ವದ ನಂ.1 ಎನಿಸಿತ್ತು. ನಾಯಕನಾಗಿ ಅವರು ಒಂದು ಟಿ20, ಒಂದು ಏಕದಿನ ವಿಶ್ವಕಪ್‌ ಗೆದ್ದಿದ್ದಾರೆ.



ಹಾಗೆಯೇ ಮಿನಿ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಚಾಂಪಿ ಯನ್ಸ್‌ ಟ್ರೋಫಿಯನ್ನು ಗೆದ್ದು ಕೊಟ್ಟಿದ್ದಾರೆ. ವಿಶ್ವದ ಬೇರಾವುದೇ ನಾಯಕ ಈ ಮೂರು ಕಿರೀಟಗಳನ್ನು ಗೆದ್ದಿಲ್ಲ. ಇದೊಂದು ವಿಶ್ವದಾಖಲೆಯಾಗಿದೆ. ಮೇಲು ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ, ಕಡೆಯ ಕಡೆಯ ಹಂತದ ಬ್ಯಾಟ್ಸ್‌ ಮನ್‌ ಆಗಿ ಅವರು ಜಾಗತಿಕ ಖ್ಯಾತಿ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದು ಹಲವು ವರ್ಷಗಳೇ ಕಳೆದಿದ್ದರೂ ಕೂಡ ಈಗಲೂ ಕ್ರಿಕೆಟ್‌ ಲೋಕದಲ್ಲಿ ಅವರಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಇತ್ತಿಚೆಗಷ್ಟೇ ಪ್ರತಿಷ್ಠಿತ ಐಸಿಸಿ ಹಾಲ್‌ ಆಫ್ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದರು.

2004ರಲ್ಲಿ ಏಕದಿನ ಕ್ರಿಕೆಟಿಗನಾಗಿ ಭಾರತದ ಪರ ಧೋನಿ ಪದಾರ್ಪಣೆ ಮಾಡಿದರು. ಬಳಿಕ 2005ರಲ್ಲಿ ಟೆಸ್ಟ್‌$ಹಾಗೂ 2006ರಲ್ಲಿ ಟಿ20ಗೆ ಪದಾರ್ಪಣೆ ಮಾಡಿದರು. ಕೇವಲ ತನ್ನ ಬ್ಯಾಟಿಂಗ್‌ ಅಥವಾ ಕೀಪಿಂಗ್‌ನಿಂದಷ್ಟೇ ಅಲ್ಲದೇ ನಾಯಕತ್ವದಿಂದ ತನ್ನದೇ ಛಾಪು ಮೂಡಿಸಿದ ಕ್ರಿಕೆಟಿಗ ಧೋನಿ. ಕ್ರಿಕೆಟಿಗರಿಗೆ ಫಿಟ್‌ನೆಸ್‌ ಮುಖ್ಯ ಎಂಬುದಕ್ಕೆ ಮಾದರಿಯಾಗಿ ನಿಂತ ನಾಯಕ ಯುವಕರ ತಂಡವನ್ನು ಕಟ್ಟಿಕೊಂಡು 2007ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟರು. ಇದಾದ ಬಳಿಕ 2011ರಲ್ಲಿ ಏಕದಿನ ವಿಶ್ವಕಪ್‌, 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟರು.



ಭಾರತ ಪರ 90 ಟೆಸ್ಟ್‌ ಪಂದ್ಯಗಳಲ್ಲಿ 4876 ರನ್‌, 350 ಏಕದಿನ ಪಂದ್ಯಗಳಲ್ಲಿ 10,773 ರನ್‌(10 ಶತಕ, 73 ಅರ್ಧಶತಕ) ಮತ್ತು 98 ಟಿ-20 ಪಂದ್ಯಗಳಲ್ಲಿ 1,617 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನು ವಿಕೆಟ್‌ ಕೀಪರ್‌ ಆಗಿ 824 ವಿಕೆಟ್‌ ಬಲಿ ಪಡೆದಿದ್ದಾರೆ.