Sunday, 28th April 2024

41ನೇ ಹುಟ್ಟುಹಬ್ಬ ಆಚರಿಸಿಕೊಂಡ ಎಂಎಸ್‌ ಧೋನಿ

ಲಂಡನ್: ಕೂಲ್ ಕ್ಯಾಪ್ಟನ್ ಎಂಎಸ್‌ ಧೋನಿ ಗುರುವಾರ ತಮ್ಮ 41ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಪತ್ನಿ ಸಾಕ್ಷಿ ಜತೆ ಬ್ರಿಟನ್‌ ಪ್ರವಾಸದಲ್ಲಿ ಇರುವ ಕ್ಯಾಪ್ಟನ್‌ ಕೂಲ್‌, ಕೇಕ್‌ ಕತ್ತರಿ ಸುವ ಮೂಲಕ ಜನ್ಮದಿನ ಸಂಭ್ರಮಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ಕೂಲ್ ಕ್ಯಾಪ್ಟನ್. ಗುರುವಾರ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತ್ನಿ ಸಾಕ್ಷಿ ಜತೆ ಬ್ರಿಟನ್‌ ಪ್ರವಾಸ ದಲ್ಲಿರುವ ಕ್ಯಾಪ್ಟನ್‌ ಕೂಲ್‌, ಅಲ್ಲಿಯೇ ಕೇಕ್‌ ಕತ್ತರಿಸುವ ಮೂಲಕ ತಮ್ಮ ಜನ್ಮದಿನ ಸಂಭ್ರಮಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ​ ಧೋನಿ ಪತ್ನಿ ಸಾಕ್ಷಿ ಜೊತೆ 12ನೇ ವಿವಾಹ ವಾರ್ಷಿ ಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಲಂಡನ್​ಗೆ ತೆರಳಿದ್ದರು. ಧೋನಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ ವಿಡಿಯೋವನ್ನು ಪತ್ನಿ ಸಾಕ್ಷಿ ಧೋನಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಭಾರತ ತಂಡದ ಯುವ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಕೂಡ ಹಾಜರಿದ್ದರು.

error: Content is protected !!