Sunday, 12th May 2024

ಸರಣಿ ವಶಪಡಿಸಿಕೊಂಡ ವನಿತೆಯರು

ಗಯಾನ:
ಜೆಮಿಮಾ ರೊಡ್ರಿಿಗಸ್ (ಅಜೇಯ 40 ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ವಿಂಡೀಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆ ಭಾರತ ವನಿತೆಯರು ಚುಟುಕು ಸರಣಿಯನ್ನು ವಶ ಪಡಿಸಿಕೊಂಡಿತು.

ಇಲ್ಲಿನ ಪ್ರೊೊವಿಡೆನ್‌ಸ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ವೆಸ್‌ಟ್‌ ಇಂಡೀಸ್ ತಂಡ ನಿಗದಿತ 20 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆೆ 59 ರನ್ ಗಳಿಸಿತು. ಕಡಿಮೆ ಮೊತ್ತದ ಗುರಿ ಹಿಂಬಾಲಿಸಿದ ಭಾರತ 16.4 ಓವರ್‌ಗಳಿಗೆ ಮೂರು ವಿಕೆಟ್ ನಷ್ಟಕ್ಕೆೆ 60 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಮೊದಲು ಬ್ಯಾಾಟಿಂಗ್ ಮಾಡಿದ ವೆಸ್‌ಟ್‌ ಇಂಡೀಸ್, ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಚೆಡೀನ್ ನೇಷನ್ ಹಾಗೂ ಚಿನ್ನೆೆಲ್ಲಿ ಹೆನ್ರಿಿ 11 ರನ್ ಗಳಿಸಿದ್ದು, ಆತಿಥೇಯರ ಪರ ಗರಿಷ್ಠ ಮೊತ್ತವಾಗಿತ್ತು. ಇನ್ನುಳಿದವರು ಎರಡಂಕಿ ವೈಯಕ್ತಿಿಕ ಮೊತ್ತ ದಾಖಲಿಸಲೇ ಇಲ್ಲ. ರಾಧ ಯಾದವ್, ದೀಪ್ತಿಿ ಶರ್ಮಾ ಎರಡು ವಿಕೆಟ್ ಪಡೆದರು. ಇನ್ನುಳಿದವರೆಲ್ಲರೂ ಒಂದೊಂದು ವಿಕೆಟ್ ಪಡೆದರು.

60 ರನ್ ಗುರಿ ಹಿಂಬಾಲಿಸಿದ ಭಾರತ ಕೂಡ ಆರಂಭದಲ್ಲಿ ಶಫಾಲಿ ವರ್ಮಾ, ಮಂಧಾನ ಹಾಗೂ ಹರ್ಮನ್‌ಪ್ರೀತ್ ಕೌರ್ ಅವರ ವಿಕೆಟ್ ಕಳೆದುಕೊಂಡಿತ್ತು. ಆದರೆ, ಒಂದು ತುದಿಯಲ್ಲಿ ಏಕಾಂಗಿಯಾಗಿ ಬ್ಯಾಾಟಿಂಗ್ ಮಾಡಿದ ಜೆಮಿಮಾ ರೊಡ್ರಿಿಗಸ್ 51 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ ಅಜೇಯ 40 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋೋರ್
ವೆಸ್‌ಟ್‌ ಇಂಡೀಸ್ (ಮ): ಓವರ್‌ಗಳಿಗೆ 59/9 (ಚೆಡೀನ್ ನ್ಯಾಾಷನ್ 11, ಚಿನ್ನೆೆಲ್ಲಿ ಹೆನ್ರಿಿ 11; ರಾಧ ಯಾದವ್ 6 ಕ್ಕೆೆ 2, ದೀಪ್ತಿಿ ಶರ್ಮಾ 12 ಕ್ಕೆೆ 2)
ಭಾರತ (ಮ): 16.4 ಓವರ್‌ಗಳಿಗೆ 60/3 (ಜೆಮಿಮಾ ರೊಡ್ರಿಿಗಸ್ ಅಜೇಯ 40; ಹೀಲಿ ಮ್ಯಾಾಥ್ಯೂಸ್ 7 ಕ್ಕೆೆ 2)

Leave a Reply

Your email address will not be published. Required fields are marked *

error: Content is protected !!