Friday, 13th December 2024

ಸನ್‌ರೈರ್ಸಸ್‌’ಗೆ ನಿತೀಶ್‌ ರೆಡ್ಡಿ ಆಸರೆ: ಎರಡು ರನ್ ಗೆಲುವು

ಚಂಡೀಗಢ: ಚಂಡೀಗಢದ ಮುಲ್ಲನ್‌ಪುರದ ನೂತನ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನ 23ನೇ ಪಂದ್ಯದಲ್ಲಿ ಆತಿಥೇಯ ಪಂಜಾಬ್ ಕಿಂಗ್ಸ್ ಮತ್ತು ಪ್ರವಾಸಿ ಸನ್‌ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಿತ್ತು.

ಸನ್‌ರೈರ್ಸಸ್‌ ಬ್ಯಾಟ್ಸ್‌ಮನೆಗಳು 20 ಓವರ್‌ಗಳಲ್ಲಿ 182 ರನ್‌ಗಳಿಸಿತ್ತು. ಪಂಜಾಬ್‌ ಕಿಂಗ್ಸ್‌ ತಂಡ 20 ಓವರ್‌ಗಳಲ್ಲಿ 180 ರನ್‌ಗಳಿಸಿ 3 ರನ್‌ಗಳಿಂದ ಸೋತಿದೆ.

ಪ್ಯಾಟ್ ಕಮಿನ್ಸ್ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ಜಾನಿ ಬೈರ್​ಸ್ಟೋವ್ ಕ್ಲೀನ್ ಬೌಲ್ಡ್ ಆದರು. ಭುವನೇಶ್ವರ್ ಕುಮಾರ್ ಎಸೆದ 3ನೇ ಓವರ್​ನ ಕೊನೆಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ಪ್ರಭ್​ಸಿಮ್ರಾನ್ ಸಿಂಗ್ ಕೂಡ ಕ್ಯಾಚ್‌ ನೀಡಿ ಔಟಾ ದರು. ಭುವನೇಶ್ವರ್ ಕುಮಾರ್ ಎಸೆದ 5ನೇ ಓವರ್​ನ 4ನೇ ಎಸೆತದಲ್ಲಿ 14 ರನ್‌ಗಳಿಸಿದ್ದ ಶಿಖರ್‌ ಧವನ್‌ ಸ್ಟಂಪ್‌ ಔಟಾದರು.

ನಟರಾಜನ್ ಎಸೆದ 10ನೇ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್ ಕರನ್(29 ರನ್‌) ಕೂಡ ಕ್ಯಾಚ್‌ ನೀಡಿ ಔಟಾದರು. ಇನ್ನೂ ಕೊನೆ ಬಾರಿ ಪಂಜಾಬ್‌ ತಂಡವನ್ನು ಏಕಾಂಕಿಯಾಗಿ ಗೆಲ್ಲಿಸಿದ್ದ ಶಶಾಂಕ್‌ ಈ ಬಾರಿಯೂ ಅಬ್ಬರಿಸಿ ಬೊಬ್ಬರಿದರು.

ಟಾಸ್‌ ಸೋತು ಬ್ಯಾಟಿಂಗ್ ಮಾಡಲು ಬಂದ ಸನ್‌ರೈರ್ಸಸ್”ಗೆ ಆಸರೆಯಾಗಿದ್ದು ನಿತೀಶ್‌ ರೆಡ್ಡಿ. ಭರ್ಜರಿ ಅರ್ಧಶತಕ ಬಾರಿಸಿ ದರು. ಮೊದಲಿಗೆ ವಿಕೆಟ್‌ ತೆಗೆದು ಮೈಲುಗೈ ಸಾಧಿಸಿದ್ದ ಪಂಜಾಬ್‌ ಬಳಿಕ ಹಿನ್ನಡೆ ಅನುಭವಿಸಿತು. 15 ಎಸೆತಗಳಲ್ಲಿ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಒಪ್ಪಿಸಿದರೆ, ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮಾರ್ಕ್ರಾ ಮ್ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು.

ಸ್ಯಾಮ್ ಕರನ್ ಎಸೆದ 5ನೇ ಓವರ್​ನ 6ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿ ಔಟಾ ದರು. ಹರ್ಷಲ್ ಪಟೇಲ್ ಎಸೆದ 10ನೇ ಓವರ್​ನ 4ನೇ ಎಸೆತದಲ್ಲಿ ರಾಹುಲ್ ತ್ರಿಪಾಠಿ ಔಟಾದರು. ಪಟೇಲ್ ಎಸೆದ 14ನೇ ಓವರ್​ನ ಮೊದಲ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಔಟ್ ಆದರೆ, ಅರ್ಷದೀಪ್ ಸಿಂಗ್ ಎಸೆದ 17ನೇ ಓವರ್​ನ 3ನೇ ಎಸೆತದಲ್ಲಿ ಭರ್ಜರಿ ಹೊಡೆ ತಕ್ಕೆ ಯತ್ನಿಸಿ ಅಬ್ದುಲ್ ಸಮದ್‌ ಕ್ಯಾಚ್ ನೀಡಿದರೆ, ನಿತೀಶ್ ರೆಡ್ಡಿ ಕೂಡ ಅದೇ ಓವರ್‌ ನಲ್ಲಿ ಕ್ಯಾಚ್‌ ನೀಡಿ ಔಟಾದರು.