Sunday, 12th May 2024

ಬಿಹಾರ ಎದುರು ಕರ್ನಾಟಕಕ್ಕೆ ಜಯ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರುಣ್ ನಾಯರ್ ಸ್ಫೋೋಟಕ ಅರ್ಧಶತಕ ಅಂಕಪಟ್ಟಿಿಯಲ್ಲಿ ಪಾಂಡೆ ಪಡೆಗೆ 2ನೇ ಸ್ಥಾಾನ

ವಿಶಾಖಪಟ್ಟಣಂ:
ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಕರುಣ್ ನಾಯರ್ (ಔಟಾಗದೆ 65 ರನ್) ಅವರ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ, ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಟೂರ್ನಿಯ ‘ಎ’ ಗುಂಪಿನ ಆರನೇ ಸುತ್ತಿಿನ ಪಂದ್ಯದಲ್ಲಿ ಬಿಹಾರ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಜಯ ಸಾಧಿಸಿದೆ.

ಇಲ್ಲಿನ ವೈ.ಎಸ್.ಆರ್ ರಾಜಶೇಖರ್ ರೆಡ್ಡಿಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ ಮಾಡಿದ ಬಿಹಾರ, 19.3 ಓವರ್‌ಗಳಿಗೆ 106 ರನ್ ಗಳಿಗೆ ಕುಸಿಯಿತು. ಬಳಿಕ, 107 ರನ್ ಸುಲಭ ಗುರಿ ಹಿಂಬಾಲಿಸಿದ ಕರ್ನಾಟಕ 11.2 ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆೆ ಗೆಲುವಿನ ದಡ ಸೇರಿತು. ಗೆಲುವಿನೊಂದಿಗೆ ಕರ್ನಾಟಕ 16 ಅಂಕಗಳೊಂದಿಗೆ ‘ಎ’ ಅಂಕಪಟ್ಟಿಿಯಲ್ಲಿ ಎರಡನೇ ಸ್ಥಾಾನ ಪಡೆಯಿತು.

107 ರನ್ ಗುರಿ ಹಿಂಬಾಲಿಸಿದ ಕರ್ನಾಟಕಕ್ಕೆೆ ಮೊದಲನೇ ವಿಕೆಟ್ ಬೇಗ ಉರುಳಿತು. ಕೆ.ಎಲ್ ರಾಹುಲ್ ಕೇವಲ ಎರಡು ರನ್ ಗಳಿಸಿ ಬೇಗ ವಿಕೆಟ್ ಒಪ್ಪಿಿಸಿದರು. ನಂತರ ಜತೆಯಾದ ದೇವದತ್ತ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 102 ರನ್ ಗಳಿಸಿ ತಂಡವನ್ನು ಇನ್ನೂ ಎಂಟು ನಾಲ್ಕು ಎಸೆತಗಳು ಬಾಕಿ ಇರುವಂತೆ ತಂಡವನ್ನು ಗೆಲುವಿನ ಗೆರೆ ದಾಟಿಸಿತು.

ಸ್ಫೋೋಟಕ ಬ್ಯಾಾಟಿಂಗ್ ಮಾಡಿದ ಕರುಣ್ ನಾಯರ್, ಬಿಹಾರ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. 36 ಎಸೆತಗಳನ್ನು ಎದುರಿಸಿದ ಅವರು, ನಾಲ್ಕು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ ಸ್ಫೋೋಟಕ 65 ರನ್ ಗಳಿಸಿದರು. ಇವರ ಅರ್ಧ ಶತಕದ ಜತೆಗೆ ದೇವದತ್ತ ಪಡಿಕ್ಕಲ್ ಕೂಡ ನಾಯರ್‌ಗೆ ಉತ್ತಮ ಸಾಥ್ ನೀಡಿದರು. 28 ಎಸೆತಗಳಲ್ಲಿ ಪಡಿಕ್ಕಲ್ ಅಜೇಯ 37 ರನ್ ಗಳಿಸಿದರು.

ಇದಕ್ಕೂ ಮೊದಲು ಬ್ಯಾಾಟಿಂಗ್ ಮಾಡಿದ ಬಿಹಾರ, ಕರ್ನಾಟಕ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು. ಆರಂಭಿಕರಾಗಿ ಕಣಕ್ಕೆೆ ಇಳಿದ ವಿಜಯ್ ಭಾರತಿ ಹಾಗೂ ಕುನಾಲ್ ದಬಾಸ್ ಅವರು ಬಹುಬೇಗ ವಿಕೆಟ್ ಒಪ್ಪಿಿಸಿದರು. ಮೂರನೇ ಕ್ರಮಾಂಕದಲ್ಲಿ ಉತ್ತಮ ಬ್ಯಾಾಟಿಂಗ್ ಮಾಡಿದ ಬಬುಲ್ ಕುಮಾರ್ 34 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 41 ರನ್ ಗಳಿಸಿ ಒಂದು ಹಂತದಲ್ಲಿ ತಂಡವನ್ನು ಮೇಲೆತ್ತಿಿದ್ದರು. ಆದರೆ, ಅವರನ್ನು ಜೆ.ಸುಚಿತ್ ಕೆಡವಿದರು. ಇವರು ವಿಕೆಟ್ ಒಪ್ಪಿಿಸುತ್ತಿಿದ್ದಂತೆ ತಂಡದ ಸರಾಸರಿ ಎಂ.ಡಿ ರಹಮತುಲ್ಲ ಹಾಗೂ ಅಶುತೋಷ್ ಅಮನ್ ಕ್ರಮವಾಗಿ 23 ಮತ್ತು 21 ರನ್ ಗಳಿಸಿದರು . ಇನ್ನುಳಿದಂತೆ ಎಲ್ಲರೂ ವೈಯಕ್ತಿಿಕ ಎರಡಂಕಿ ಮೊತ್ತ ದಾಖಲಿಸುವಲ್ಲಿ ವಿಫಲರಾದರು. ಕರ್ನಾಟಕದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ರೋನಿತ್ ಮೋರೆ, ವಿ.ಕೌಶಿಕ್, ಪ್ರವೀಣ್ ದುಬೆ ಹಾಗೂ ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಬಿಹಾರ: 19.3 ಓವರ್ ಗಳಿಗೆ 109/10 (ಬಬುಲ್ ಕುಮಾರ್ 41, ರಹಮತುಲ್ಲ 23, ಅಮನ್ 21; ರೋನಿತ್ ಮೋರೆ 22 ಕ್ಕೆೆ 2, ವಿ.ಕೌಶಿಕ್ 24 ಕ್ಕೆೆ 2, ಪ್ರವೀಣ್ ದುಬೆ 18 ಕ್ಕೆೆ 2, ಶ್ರೇಯಸ್ ಗೋಪಾಲ್ 16 ಕ್ಕೆೆ 2)
ಕರ್ನಾಟಕ: 11.2 ಓವರ್‌ಗಳಿಗೆ 107/1 (ಕರುಣ್ ನಾಯರ್ ಔಟಾಗದೆ 65, ದೇವದತ್ತ ಪಡಿಕ್ಕಲ್ 37; ಅಭಿಜೀತ್‌ಸಾಕೇತ್ 33 ಕ್ಕೆೆ 1)

Leave a Reply

Your email address will not be published. Required fields are marked *

error: Content is protected !!