Monday, 13th May 2024

ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆ !

ವಿಶ್ವವಾಣಿ‌ ಸುದ್ದಿಮನೆ
ಬೆಂಗಳೂರು: 
ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 26 ಜನರು ಕರೋನಾ ಸೋಂಕಿಗೊಳಗಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 500ಕ್ಕೆ ಏರಿಕೆಯಾಗಿದೆ.
ಇಲ್ಲಿವರೆಗೆ 158 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 18 ಜನರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಇನ್ನು ಚಿಕಿತ್ಸೆಯಿಂದ ಗುಣಮುಖರಾದವರು ಮತ್ತು ಸಾವಿಗೀಡಾದವರ ಹೊರತಾಗಿ ರಾಜ್ಯದಲ್ಲಿ 324 ಆ್ಯಕ್ಟಿವ್ ಪ್ರಕರಣಗಳಿವೆ. ಇವುಗಳಲ್ಲಿ 317 ಮಂದಿ ಸಾಮಾನ್ಯ ವಾರ್ಡ್​ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಮಂದಿ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಣ್ಣಗಾಗಿದ್ದ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಕರೋನಾ ಆರ್ಭಟ ಹೆಚ್ಚಾಗಿದ್ದು ಗುರುವಾರ 10, ಶುಕ್ರವಾರ 11 ಪ್ರಕರಣಗಳು ವರದಿಯಾಗಿದ್ದವು. ಇದೀಗ ಶುಕ್ರವಾರ 13 ಜನರ ವರದಿ ಪಾಸಿಟಿವ್‌ ಬಂದಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
ಇನ್ನು ಬೆಳಗಾವಿಯ ಹಿರೇಬಾಗೇವಾಡಿಯ 9 ಜನರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದ್ದರೆ, ಮಂಡ್ಯ, ದಕ್ಷಿಣ ಕನ್ನಡದ ಬಂಟ್ವಾಳ, ಮೈಸೂರಿನ ನಂಜನಗೂಡು, ಚಿಕ್ಕಬಳ್ಳಾಪುರದಿಂದ ತಲಾ ಒಂದು ಪ್ರಕರಣ ವರದಿಯಾಗಿದೆ.
ನಂಜನಗೂಡು ಮತ್ತು ಹಿರೇಬಾಗೇವಾಡಿಯಲ್ಲಿ ಕರೋನಾಗೆ ಇನ್ನೂ ಬ್ರೇಕ್‌ ಬಿದ್ದಿಲ್ಲ. ಇದೇ ವೇಳೆ ದಕ್ಷಿಣ ಕನ್ನಡದ ಬಂಟ್ವಾಳದಿಂದ ದಿನಕ್ಕೊಂದು ಪ್ರಕರಣ ಬೆಳಕಿಗೆ ಬರುತ್ತಿರುವುದು ಸೋಂಕು ಮುಕ್ತ ಹಾದಿಯಲ್ಲಿದ್ದ ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ.
ಇದೇ ರೀತಿ ದೀರ್ಘ ಕಾಲ ಯಾವುದೇ ಪ್ರಕರಣ ವರದಿಯಾಗದೇ ಇದ್ದ ಗದಗದಲ್ಲಿ ಇತ್ತೀಚೆಗೆ ಮೂರು ಪ್ರಕರಣ ಕಾಣಿಸಿಕೊಂಡಿತ್ತು. ಇನ್ನು ನಿನ್ನೆಯಷ್ಟೇ ತುಮಕೂರಿನಲ್ಲೂ ಸುದೀರ್ಘ ಅವಧಿಯ ನಂತರ ಮೊದಲ ಪ್ರಕಣ ಕಾಣಿಸಿಕೊಂಡಿತ್ತು. ಈ ಮೂಲಕ ಸೋಂಕು ಮುಕ್ತವಾಗುವ ಹಾದಿಯಲ್ಲಿದ್ದ ಜಿಲ್ಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ಶನಿವಾರ  ಪತ್ತೆಯಾದ ಸೋಂಕಿತರ ಸಂಖ್ಯೆ
ಬೆಂಗಳೂರು- 13
ಬೆಳಗಾವಿ- 9
ಮಂಡ್ಯ- 1
ಮೈಸೂರು- ನಂಜನಗೂಡು- 1
ಚಿಕ್ಕಬಳ್ಳಾಪುರ- 1
 ದಕ್ಷಿಣ ಕನ್ನಡದಲ್ಲಿ -1

ಕ್ರ.ಸಂ. ಜಿಲ್ಲೆ  ಪ್ರಕರಣ ಗುಣಮುಖ ಸಕ್ರಿಯ ಸಾವು

1 ಬೆಂಗಳೂರು133  49  80  4
2 ಮೈಸೂರು 89  34  55  0
3 ಬೆಳಗಾವಿ 54  4 49  1
4 ವಿಜಯಪುರ 39  0 37  2
5 ಕಲಬುರಗಿ 36  7  25  4
6 ಬಾಗಲಕೋಟೆ 24  2  21  1
7 ಚಿಕ್ಕಬಳ್ಳಾಪುರ 18 1 15  2
8 ದಕ್ಷಿಣ ಕನ್ನಡ17 1 14  2
9 ಮಂಡ್ಯ16  01 6  0
10 ಬೀದರ್‌ಬ15 9  6  0
11 ಬಳ್ಳಾರಿ13 3 10  0
12 ಬೆಂಗಳೂರು ಗ್ರಾ.12 8 4  0
13 ಉತ್ತರ ಕನ್ನಡ 11 10 1 0
14 ಧಾರವಾಡ 9 2 7 0
15 ಗದಗ 4 0 3 1
16 ಉಡುಪಿ‌3 3 0 0
17 ತುಮಕೂರು 3 1 1 1
18 ದಾವಣಗೆರೆ 2 2 0 0
19 ಚಿತ್ರದುರ್ಗ 1 1 0 0
20 ಕೊಡಗು 1 1 0 0
ಒಟ್ಟು500 158  324  18

Leave a Reply

Your email address will not be published. Required fields are marked *

error: Content is protected !!