Wednesday, 11th December 2024

ಚಂದ್ರಮ್ಮಾದೇವಿ ಜಾತ್ರಾ ಮಹೋತ್ಸವ

ಕೊಲ್ಹಾರ: ಪಟ್ಟಣದ ಆರಾಧ್ಯ ದೇವತೆ ಶ್ರೀ ಚಂದ್ರಮ್ಮಾದೇವಿ (ನಿಜಲಿಂಗಮ್ಮಾದೇವಿ) ಜಾತ್ರಾ ಮಹೋತ್ಸವ ಮಾರ್ಚ್ 11 ರಿಂದ 16 ಶನಿವಾರದ ವರೆಗೆ ಅತ್ಯಂತ ವಿಜೃಂಭಣೆಯಿಂದ ಪಟ್ಟಣದಲ್ಲಿ ಜರುಗಲಿದೆ ಎಂದು ಬಜಂತ್ರಿ ಸಮಾಜದ ಅಧ್ಯಕ್ಷ ಮಾರುತಿ ಬಜಂತ್ರಿ ಹೇಳಿದರು.

ಪತ್ರಿಕಾಗೋಷ್ಠಿ ಹಮ್ಮಿಕೊಂಡು ಮಾತನಾಡಿದ ಅವರು ಮಾ.11 ರಂದು ಚಂದ್ರಮ್ಮಾದೇವಿ ಕಾರ್ತಿಕ ಇಳಿಸುವ ಕಾರ್ಯಕ್ರಮ, ಭಕ್ತರಿಗೆ ಅನ್ನ ಪ್ರಸಾದ ಹಾಗೂ ರಾತ್ರಿ 10 ಗಂಟೆಗೆ ಹೇಮರೆಡ್ಡಿ ಮಲ್ಲಮ್ಮ ಜೀವನ ಚರಿತ್ರೆಯ ಬಯಲಾಟ, ಮಾರ್ಚ್ 12 ರಂದು ಪೂಜಾ ಕಾರ್ಯಕ್ರಮ, ಮಾ.13 ರಂದು ಹಂದರ ತಪ್ಪಲ ಮೆರವಣಿಗೆ, ಮಾ.14 ರಂದು ಹೋಮ, ಹವನ ಹಾಗೂ ಸಕಲ ವಾದ್ಯಮೇಳಗಳದೊಂದಿಗೆ ಮುತ್ತೈದೆಯರ ಪೂರ್ಣ ಕುಂಭ ಮೆರವಣಿಗೆ, ಬೆಳ್ಳಿ ಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ 10:30 ಗಂಟೆಗೆ ಅಂಜನಿಪುತ್ರ ಕಲಾ ಬಳಗದಿಂದ “ಹಂಗ್ಯಾಕೆ ನೋಡ್ತಿ ಚಿನ್ನ ನನಗೆ ಕೊಡತಾರ ನಿನ್ನ” ಅರ್ಥಾತ್ ತಾಯಿಯ ಋಣ ಎಂಬ ಸಾಮಾಜಿಕ ನಾಟಕ ಜರುವುದು, ಮಾರ್ಚ್ 15 ರಂದು ಸ್ಲೋ ಸೈಕಲ್ ಸ್ಪರ್ಧೆ, ಮಾ.16 ರಂದು ಬಜಂತ್ರಿ ಸಮಾಜದ ಆರಾಧ್ಯ ದೈವ ನೂಲಿ ಚಂದಯ್ಯ ಭಾವಚಿತ್ರ ಮೆರವಣಿಗೆ ಪಟ್ಟಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗುವುದು.

ಕಾರ್ಯಕ್ರಮದ ಧಿವ್ಯ ಸಾನಿಧ್ಯ ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಸಾನಿಧ್ಯ ವೇದಮೂರ್ತಿ ಚಂದ್ರಶೇಖರಯ್ಯ ಹಿರೇಮಠ, ಅಧ್ಯಕ್ಷತೆ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಉದ್ಘಾಟಕರಾಗಿ ಸಚಿವ ಶಿವಾನಂದ ಪಾಟೀಲ್ ಸಹಿತ ಅನೇಕ ಗಣ್ಯ ಮಾನ್ಯರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ ಪಂ ಸದಸ್ಯ ಬಾಬು ಶಂ ಭಜಂತ್ರಿ, ಶ್ರೀಕಾಂತ್ ಭಜಂತ್ರಿ, ಮುದುಕಪ್ಪ ಭಜಂತ್ರಿ, ದುರ್ಗಪ್ಪ ಭಜಂತ್ರಿ, ಸಾಬು ಭಜಂತ್ರಿ, ರಮೇಶ ಭಜಂತ್ರಿ, ಸುಭಾಷ ಭಜಂತ್ರಿ ಅಶೋಕ ಭಜಂತ್ರಿ ಸಹಿತ ಅನೇಕರು ಉಪಸ್ಥಿತರಿದ್ದರು.