ಹರಪನಹಳ್ಳಿ: ತಾಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ತಾಲೂಕಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಒಟ್ಟು ೮೪೩ ಪ್ರಕರಣಗಳನ್ನು ಉಭಯ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಭಾರತಿ, ಮತ್ತು ಪಕ್ಕಿರವ್ವ ಕೆಳಗೆರೆ ರವರ ನೇತೃತ್ವದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಭಾರತಿ ರವರ ನೇತೃತ್ವದಲ್ಲಿ ಒಟ್ಟು, ೪೨೩ ಪ್ರಕರಣ ಗಳನ್ನು ಇತ್ಯಾರ್ಥ ಪಡಿಸಿ, ಒಟ್ಟು ೭೨,೮೩,೭೮೮-೦೦ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು. ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೆರೆ ರವರ ನೇತೃತ್ವದಲ್ಲಿ ಒಟ್ಟು. ೪೨೦ ಪ್ರಕಣಗಳನ್ನು ಇತ್ಯಾರ್ಥ ಪಡಿಸಿ ಒಟ್ಟು ೧೩,೩೫,೦೦೪ ರೂ. ಗಳನ್ನು ಹಣದ ರೂಪದಲ್ಲಿ ಇತ್ಯಾರ್ಥ ಪಡಿಸಿದರು.
ಅದಾಲತ್ನಲ್ಲಿ ರಸ್ತೆ ಅಪಘಾತ,ಚೆಕ್ ಬೌನ್ಸ್ , ಬ್ಯಾಂಕ್ ಸಾಲ ವಸೂಲಿ, ಜಮೀನು ಒತ್ತುವರಿ, ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ಲಿ ಪ್ರಕರಣ,ಮೋಟಾರು ವಾಹನ, ನಿವೇಶನ ಮಾರಾಟ ಒಳಗೊಂಡAತೆ ತಾಲೂಕಿನಧ್ಯಂತ ಒಟ್ಟು ೮೪೩ ಪ್ರಕರಣಗಳನ್ನು ರಾಜೀ ಸಂಧಾನದಕ್ಕೆ ಆಹ್ವಾನಿಸಲಾಗಿತ್ತು.
ತಾಲೂಕಿನ ಜೆ.ಎಂ.ಎಪ್.ಸಿ ನ್ಯಾಯಾಲಯದಲ್ಲಿ ನ್ಯಾಯಾದೀಶರ ಹಾಗೂ ವಕೀಲರ ಜತೆ ಅದಾಲತ್‌ನಲ್ಲಿ ಭಾಗಹಿಸಿ ಸಂಭAದಪಟ್ಟ ಪ್ರಕರಣಗಳಿಗೆ ಇತ್ಯರ್ಥಪಡಿಸಿದರು. ೭ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಿ ದರು. ಒಟ್ಟು ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ಸಂಬAಧಪಟ್ಟAತೆ ನ್ಯಾಯಾ ಲಯದಲ್ಲಿ ನೆಡದ ಬ್ಯಾಂಕ್ ಹಾಗೂ ಇತರೆ ಸಂಘ ಸಂಸ್ಥೆಗಳಿಗೆ ಸಂಬAಧಿಸಿದAತೆ ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಅಭಿಯೋಜಕರಾದ ಮಿನಾಕ್ಷಿ, ನಿರ್ಮಾಲ, ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ್ರು, ಹಿರಿಯ ವಕೀಲರಾದ ಪಿ. ಜಗದೀಶ್ ಗೌಡ, ಕೃಷ್ಣಮೂರ್ತಿ, ಗಂಗಾಧರ್ ಗುರುಮಠ್, ಕಣವಿಹಳ್ಳಿ ಮಂಜುನಾಥ್, ಕೆ. ಬಸವರಾಜ್, ಬಿ.ಗೋಣಿಬಸಪ್ಪ, ಬಿ. ಹಾಲೇಶ್, ರುದ್ರಮನಿ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಕೆ.ನಾಗರಾಜ್, ಮಂಜ್ಯಾನಾಯ್ಕ, ಹೆಚ್. ನಾಗರಾಜ್, ಸೀಮಾಬಾನು, ಶಾಂತವೀರ ನಾಯ್ಕ, ಪ್ರಕಾಶ್, ಬಸವನಗೌಡ, ಟಿ.ಎಂ.ರಮೇಶ್, ಜಾಖೀರ್, ಬಸವರಾಜ್, ಮಂಜುನಾಥ್, ಎ.ಮಲ್ಲಪ್ಪ, ಮತ್ತು ಇತರರು ಇದ್ದರು.
ಚಿತ್ರ: ಪಟ್ಟಣದ ಜೆ.ಎಂ.ಎಫ್.ಸಿ. ಉಭಯ ನ್ಯಾಯಾಲಯದಲ್ಲಿ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಪ್ರಕರಣಗಳನ್ನು ವಿಕ್ಷೀಸಿ ಇತ್ಯರ್ಥಪಡಿಸಿದರು.