Wednesday, 11th December 2024

ಸಮಾಜದಲ್ಲಿ ಸ್ವಾರ್ಥ ಮನೋಭಾವನೆ ಬಿಟ್ಟು ನ್ಯಾಯಕ್ಕಾಗಿ ಹೋರಾಡಿ: ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ

ಹರಪನಹಳ್ಳಿ: ಸಮಾಜದಲ್ಲಿ ನಾವುಗಳು ಸ್ವಾರ್ಥ ಮನೋಭಾವನೆ ಬಿಟ್ಟು ನ್ಯಾಯಕ್ಕಾಗಿ ಹೋರಾಡಬೇಕಾಗಿದೆ. ಯಾವುದೇ ವಿಷಯವನ್ನು ನಾವು ಗಮನಿಸು ವಾಗ ಪ್ರತ್ಯೇಕ್ಷವಾಗಿ ಕಂಡು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಹೊಗಳಿಕೆ ತೆಗಳಿಕೆಯನ್ನು ಸಮಾನವಾಗಿ ಕೊಂಡೊಯ್ಯಬೇಕು. ಭೂತಕಾಲದ ಬಗ್ಗೆ ಚಿಂತಿಸದೆ ವರ್ತಮಾನದ ಕಡೆ ಹೋಗಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಪ್ರತಿಪಾದಿಸಿದರು.

ಪಟ್ಟಣದ ವಕೀಲರಸಂಘದಲ್ಲಿ ಆಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ನಿಕಟ ಪೂರ್ವ ಪದಾಧಿಕಾರಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಿಗೆ ಹಾಗೂ ನಿಕಟ ಪೂರ್ವ ಅಧ್ಯಕ್ಷರಿಗೆ ಉಭಯ ನ್ಯಾಯಾಧೀಶರಿಂದ ಸನ್ಮಾನಿಸಿದ ಬಳಿಕ ಮಾತನಾಡಿದರು.

ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೆರೆ ಮಾತನಾಡಿ, ನ್ಯಾಯಾದಲ್ಲಿ ಪ್ರಕರಣಗಳು ಹೆಚ್ಚಿಗೆ ಇರುವು ದರಿಂದ ಸಮಯ ಬಹಳ ಬೇಕಾಗುದೆ ಆದ್ದರಿಂದ ನ್ಯಾಯಾವಾದಿಗಳು ಸಹಾಕರಿಸಬೇಕು ಎಂದರು.

ಕೆ.ಚಂದ್ರಗೌಡ ನಾನು ಹಿಂದೆ ಎರಡು ಭಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು, ಸಂಘದ ಚಟುವಟಿಕೆ ಗಳನ್ನು ನಾನು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದೇನೆ. ಯಾರೇ ಸಂಘಕ್ಕೆ ಸಹಕಾರ ನೀಡಿದರೆ ಅವರ ಸಲಹೆ ಪಡೆದು ಮುನ್ನಡೆಸಬೇಕು ಎಂದರು.

ಕೆ.ಜಗದಪ್ಪ, ನಾನು ನಿನ್ಮ ಸಲಹೆ ಸಹಕಾರ ಪಡೆದುಕೊಂಡು ಸಂಘವನ್ನು ಮುನ್ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಸಂಘದ ಅಭಿವೃದ್ದಿಗೆ ಹಿಂದೇಟು ಹಾಕಲ್ಲ . ನಾನು ಸಂಘದ ಅಭಿವೃದ್ಧಿಗಾಗಿ ಪಣತೊಡಿತ್ತೇನೆ. ನಾನು ಒಬ್ಬನೇ ಸಂಘದ ಅಧ್ಯಕ್ಷ ಅಲ್ಲ ಹಿರಿಯ ಮತ್ತು ಕಿರಿಯ ಎಲ್ಲಾ ವಕೀಲರು ಸಂಘದ ಅಧ್ಯಕ್ಷರು ಎಲ್ಲರೂ ಸಮಾನವಾಗಿ ಸಂಘದ ಕಾರ್ಯಚಟುವಟಿಕೆಗಳಿಗೆ ನಾವು ಕೈ ಜೋಡಿಸೋಣ ಎಂದರು.

ಈ ಸಂರ್ಭದಲ್ಲಿ ಹಿರಿಯ ವಕೀಲರಾದ ಕೃಷ್ಣಮೂರ್ತಿ, ಕೆ.ಎಂ.ಚಂದ್ರಮೌಳಿ, ಟಿ. ವೆಂಕಟೇಶ್, ಆರ್. ರೇವನಗೌಡ್ರು, ಬಿ. ಹಾಲೇಶ್, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ವಕೀಲರ ಸಂಘದ ಉಪಾಧ್ಯಕ್ಷ ಡಿ. ವಾಸುದೇವ, ಕಾರ್ಯಧರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗಂದ್ರಪ್ಪ, ಖಜಾಂಚಿ ಹುಲಿಯಪ್ಪ, ಎಂ.ಮೃತಂಜಯ್ಯ, ಕೆ.ಎಂ. ಕೋಟ್ರಯ್ಯ, ಸಿ. ರಾಜಪ್ಪ, ಕೆ.ಎಸ್. ಮಂಜ್ಯಾನಾಯ್ಕ, ಎಂ.ರೇವಣ ಸಿದ್ದಪ್ಪ, ಕೆ. ಕೋಟ್ರೇಶ್, ಎಂ. ಮಂಜುನಾಥ್, ಮತ್ತು ಇತರರು ಇದ್ದರು.