Saturday, 14th December 2024

ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ಶಾಸಕರಿಂದ ಪರಿಹಾರದ ಚೆಕ್ ವಿತರಣೆ

ಮಾನ್ವಿ: ಕೋವಿಡ್ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಹಾರ ವನ್ನು ಬಿಡುಗಡೆಗೊಳಿಸಿದ್ದು ಕೇಂದ್ರದಿಂದ ೫೦ ಸಾವಿರ ಹಾಗೂ ರಾಜ್ಯ ಸರಕಾರದಿಂದ ಪಡಿತರ ಚೀಟಿ ಹೊಂದಿದ ಫಲಾನುಭವಿ ಗಳಿಗೆ ೧ ಲಕ್ಷ ರೂ ಪರಿಹಾರ ವಿತರಿಸಲಾಗುತ್ತಿದೆ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಛೇರಿಯಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟ ಕಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ಗಳನ್ನು ವಿತರಿಸಿ ಮಾತನಾಡಿದರು.

ತಹಸೀಲ್ದಾರ್ ಪರಶುರಾಮ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್-೧೯ ಸೋಂಕಿನಿಂದ ಮೃತಪಟ್ಟ ಪಡಿತರ ಚೀಟಿ ಹೊಂದಿದ ೨೮ ಕುಟುಂಬಗಳನ್ನು ಗುರುತಿಸಿ ಮೃತರ ಅವ ಲಂಬಿತರಿಗೆ ಪರಿಹಾರದ ಚೆಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್,ಕಂದಾಯ ನೀರಿಕ್ಷಕ ಚರಣಸೀಂಗ್ ಠಾಕೂರ್, ಪುರಸಭೆ ಉಪಾಧ್ಯಕ್ಷ ಸುಕುಮುನಿ ಸೇರಿದಂತೆ ಇನ್ನಿತರರು ಇದ್ದರು.