Monday, 20th May 2024

ಕುರಿಗಳ ಹಿಂಡಿನ ಸಮೇತ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ

ಯರಗಟ್ಟಿ: ನಮ್ಮ ರಾಜ್ಯ ಧ್ವಜ ಸುಡುವುದು ನಾಡಿನ ಮಹಾನ್ ವ್ಯಕ್ತಿಗಳ ಪ್ರತಿಮೆಗಳನ್ನು ಅವಮಾನಿಸುವ ಕಿಡಗೇಡಿಗಳನ್ನು ಮಟ್ಟಹಾಕಿ ಸರ್ಕಾರ ಬಿಗಿಯಾದ ಕ್ರಮ ಜರುಗಿಸಲೇಬೇಕು ಎಂದು ಆಗ್ರಹಿಸಿ ಹಾಲುಮತ ಮಹಾಸಭಾ ಮತ್ತು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಗರ್ಜನೆ ಹಾಗೂ ವಿವಿಧ ಸಂಘಟನೆಗಳು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಹೋರಾಟಗಾರರಾದ ರತ್ನಾಕರ ಶೆಟ್ಟಿ ಹಾಗೂ ಭಾಸ್ಕರ ಹಿರೇಮೆತ್ರಿ ಮಾತನಾಡಿ, ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಬದುಕಲು ಎಲ್ಲರಿಗೂ ಸಮಾನ ವಾದ ಅವಕಾಶ ಕಲ್ಪಿಸಲಾಗಿದೆ ಆದರೆ ಯಾವುದೋ ಕಾರಣ ಇಟ್ಟುಕೊಂಡು ಅಶಾಂತಿ ತಲೆದೊರುವ ಹಾಗೆ ಮಾಡುತ್ತಿರುವ ಕಿಡಿಗೇಡಿಗಳನ್ನು ಬಿಗಿಯಾದ ಕಾನೂನು ಕ್ರಮ ಜರುಗಿಸಬೇಕು ಜೋತೆಗೆ ಇದು ಮರುಕಳಿಸದಂದೆ ನೋಡಿಕೊಳ್ಳಬೇಕಿದೆ. ಇಡೀ ರಾಜ್ಯದಲ್ಲಿ ಬೆಳಗಾವಿ ಎಂದರೆ ಭಯದ ವಾತವರಣ ನಿರ್ಮಾಣವಾಗಿದ್ದು, ಸರ್ಕಾರಕ್ಕೆ ಇದಕ್ಕೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.

ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ವೆಂಕಟೇಶ ದೇವರಡ್ಡಿ, ಶಿವಾನಂದ ಕರಿಗನ್ನವರ, ವೆಂಕಣ್ಣ ಖಿಲಾರಿ, ಪಡೆಪ್ಪ ಅಡಕಲಗುಂಡಿ, ಸದಾನಂದ ಹಣಬರ, ಮುದಕಪ್ಪ ತಡಸಲೂರ, ಲಕ್ಕಪ್ಪ ಖಿಲಾರಿ, ಇಮಾಮಸಾಬ್ ಹುಸೇನನಾಯ್ಕರ, ಮಾಯಪ್ಪ ಅಡಕಲಗುಂಡಿ, ಸೌರಭ ಚೋಪ್ರಾ, ಗೌತಮ ದ್ಯಾಮನಗೌಡರ, ಮಂಜುನಾಥ ತಡಸಲುರ, ಹನಮಂತ ಹಾರುಗೊಪ್ಪ, ಲಕ್ಕಪ್ಪ ಜಗದಾರ, ವಿಠ್ಠಲ ಹಾರುಗೊಪ್ಪ, ಮಹಾದೇವ ಬೆಳವಲ, ಡಿ.ಕೆ. ರಫೀಕ್, ಸುರೇಶ ಭಜಂತ್ರಿ, ಸೋಮು ರೈನಾಪೂರ, ಪ್ರವೀಣ ಪಟಾತರ, ಮಾರುತಿ ಬನ್ನೂರ, ಮಂಜುನಾಥ ಭಾವಿಹಾಳ ಇತರರು ಇದ್ದರು.

error: Content is protected !!