Viral Video: ಟ್ರಾಫಿಕ್‌ಗೆ ಬೇಸತ್ತು ಕಾಲೇಜಿಗೆ ಪ್ಯಾರಾಗ್ಲೈಡ್‍ನಲ್ಲಿ ಬಂದ ವಿದ್ಯಾರ್ಥಿ; ವಿಡಿಯೊ ವೈರಲ್
ವಾಯ್-ಪಂಚಗಣಿ ರಸ್ತೆಯ ಪಸಾರಾಣಿ ಘಾಟ್ ವಿಭಾಗದಲ್ಲಿ ಭಾರಿ ಸಂಚಾರ ದಟ್ಟಣೆ ಇರುವ ಕಾರಣ ವಾಯ್ ತಾಲ್ಲೂಕಿನ ಪಸರಾನಿ ಗ್ರಾಮದ ವಿದ್ಯಾರ್ಥಿ ಸಮರ್ಥ್ ಮಹಾಂಗಡೆ ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಿ ಪರೀಕ್ಷೆ ಬರೆಯಲು ಪ್ಯಾರಾಗ್ಲೈಡಿಂಗ್‍ನಲ್ಲಿ ಪ್ರಯಾಣಿಸಿದ್ದಾನೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಜನರ ಮೆಚ್ಚುಗೆ ಗಳಿಸಿದೆ.

ಸಾಂದರ್ಭಿಕ ಚಿತ್ರ

ಮುಂಬೈ: ಇತ್ತೀಚೆಗೆ ಮಹಿಳೆಯೊಬ್ಬಳು ಪರೀಕ್ಷೆ ಬರೆಯಲು ಬರುವಾಗ ತಡವಾಗಿ ಪರೀಕ್ಷಾ ಕೇಂದ್ರದ ಗೇಟ್ ಹಾಕಿದ ಕಾರಣ ಗೇಟಿನ ಕೆಳಗೆ ನುಸುಳಿ ಪರೀಕ್ಷಾ ಕೇಂದ್ರದ ಒಳಗೆ ಹೋದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈಗ ಅಂಥದ್ದೇ ಘಟನೆಯೊಂದು ಸೋಶಿಯಿಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಾಯ್ ತಾಲ್ಲೂಕಿನ ಪಸರಾನಿ ಗ್ರಾಮದ ವಿದ್ಯಾರ್ಥಿಯೊಬ್ಬ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಾಲೇಜಿಗೆ ನೇರವಾಗಿ ಪ್ಯಾರಾಗ್ಲೈಡಿಂಗ್ ಮೂಲಕ ಬಂದಿದ್ದಾನೆ. ಆತ ತನ್ನ ಕಾಲೇಜು ಬ್ಯಾಗ್ ಧರಿಸಿ ಆಕಾಶದಲ್ಲಿ ಹಾರುತ್ತಾ ಕಾಲೇಜಿಗೆ ಹೋಗುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
ಸತಾರಾ ಜಿಲ್ಲೆಯ ಪಸರಾನಿ ಗ್ರಾಮದ ಸಮರ್ಥ್ ಮಹಾಂಗಡೆ ಎಂದು ಗುರುತಿಸಲ್ಪಟ್ಟ ವಿದ್ಯಾರ್ಥಿ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಪ್ಯಾರಾಗ್ಲೈಡಿಂಗ್ ಮೊರೆ ಹೋಗಿದ್ದಾನೆ. ವಾಯ್-ಪಂಚಗಣಿ ರಸ್ತೆಯ ಪಸಾರಾಣಿ ಘಾಟ್ ವಿಭಾಗದಲ್ಲಿ ಭಾರಿ ಸಂಚಾರ ದಟ್ಟಣೆಯಿಂದ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ಅಸಾಧ್ಯವಾಗಿತ್ತು. ಪರೀಕ್ಷೆ ಬರೆಯಲು ಆಗಲ್ಲ ಎಂದು ಬೇಸರಗೊಂಡಿದ್ದ ಅವನಿಗೆ ಪಂಚಗಣಿಯ ಜಿಪಿ ಅಡ್ವೆಂಚರ್ಸ್‍ನ ಸಾಹಸ ಕ್ರೀಡಾ ತಜ್ಞ ಗೋವಿಂದ್ ಯೆವಾಲೆ ಸಹಾಯ ಮಾಡಿದ್ದಾರೆ. ಸಮರ್ಥ್ ಅವನನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಸ್ಥಳಕ್ಕೆ ಕರೆದೊಯ್ಯಲು ಪ್ಯಾರಾಗ್ಲೈಡಿಂಗ್ ಬಳಸಿ ಘಾಟ್ ಮೇಲೆ ಹಾರಲು ಯೆವಾಲೆ ಮತ್ತು ಅವರ ತಂಡ ನಿರ್ಧರಿಸಿತು.
ಅನುಭವಿ ಪ್ಯಾರಾಗ್ಲೈಡಿಂಗ್ ತರಬೇತುದಾರರ ಸಹಾಯದಿಂದ ಅವನು ಕಾಲೇಜಿನ ಬಳಿ ಇಳಿದಿದ್ದಾನೆ. ಇದರಿಂದ ಅವನಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ವ್ಯೂವ್ಸ್ ಮತ್ತು ಲೈಕ್‍ಗಳನ್ನು ಗಳಿಸಿದೆ. ಅನೇಕ ನೆಟ್ಟಿಗರು ಹುಡುಗನಿಗೆ ಸಹಾಯ ಮಾಡಿದ ಸಾಹಸ ಕ್ರೀಡಾ ತಂಡವನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪ್ಯಾರಾಗ್ಲೈಡಿಂಗ್ ಎಂಜಾಯ್ ಮಾಡ್ತಿದ್ದವನ ಜೊತೆ ಪ್ರವಾಸಿಗನ ಫನ್ನಿ ಡಿಮ್ಯಾಂಡ್- ವಿಡಿಯೊ ನೋಡಿ
ಇತ್ತೀಚೆಗೆ ಗೋವಾಕ್ಕೆ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬ ಮೇಲೆ ಹಾರುತ್ತಿದ್ದ ಪ್ಯಾರಾಗ್ಲೈಡರ್ ಬಳಿ ಲೈಟರ್ ಕೇಳಿದ ತಮಾಷೆಯ ಪ್ರಕರಣವೊಂದು ನಡೆದಿದೆ. ಗ್ಲೈಡರ್ ಈ ವ್ಯಕ್ತಿಗೆ ಲೈಟರ್ ಅನ್ನು 'ಏರ್ ಡ್ರಾಪ್' ಮಾಡಿದ್ದಾನೆ. ಈ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಪ್ಯಾರಾಗ್ಲೈಡರ್ ಅನ್ನು ನೋಡಿ ಲೈಟರ್ ಇದೆಯೇ ಎಂದು ಕೇಳಿದ್ದಾನೆ. ಎಲ್ಲರ ಮನರಂಜನೆಗಾಗಿ, ಪ್ಯಾರಾಗ್ಲೈಡರ್ ಲೈಟರ್ ಅನ್ನು ತೆಗೆದುಕೊಂಡು ವ್ಯಕ್ತಿಯ ಕಡೆಗೆ ಹಾರಿ ಲೈಟರ್ ನೀಡಿ ನಂತರ ವಾಪಾಸ್ ಕೇಳಿದ್ದಾನೆ. ಇದನ್ನು ನೋಡಿ ಸುತ್ತಲೂ ನಿಂತಿದ್ದ ಜನರು ಸಖತ್ ಥ್ರಿಲ್ ಆಗಿ ಚಪ್ಪಾಳೆ ತಟ್ಟಿದ್ದಾರೆ.