ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಗಿನ್ನೆಸ್‌ ದಾಖಲೆ ಬರೆದ ಯುವಕ; ಈತನ ಸಾಧನೆ ಏನು ಗೊತ್ತೆ? ಈ ವಿಡಿಯೊ ನೋಡಿ

ವೋಲ್ಫ್ ಸಿಂಡ್ರೋಮ್ ಎಂದೂ ಕರೆಯಲ್ಪಡುವ ಹೈಪರ್ ಟ್ರೈಕೋಸಿಸ್‌ನಿಂದ ಬಳಲುತ್ತಿರುವ 18 ವರ್ಷದ ಲಲಿತ್ ಪಾಟಿದಾರ್ ಎಂಬ ಯುವಕ ಇದೀಗ ಮುಖದಲ್ಲಿ ಹೆಚ್ಚು ಕೂದಲನ್ನು ಹೊಂದುವ ಮೂಲಕ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಶ್ವ ದಾಖಲೆ ಬರೆದ ʼವೋಲ್ಫ್ ಸಿಂಡ್ರೋಮ್ʼ ಭಾರತೀಯ ಯುವಕ

Profile pavithra Mar 7, 2025 5:06 PM

ಭೋಪಾಲ್‌:‌ ಮಧ್ಯಪ್ರದೇಶದ 18 ವರ್ಷದ ಯುವಕನೊಬ್ಬ ಮುಖದಲ್ಲಿ ಹೆಚ್ಚು ಕೂದಲನ್ನು ಹೊಂದುವ ಮೂಲಕ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ವೋಲ್ಫ್ ಸಿಂಡ್ರೋಮ್ ಎಂದೂ ಕರೆಯಲ್ಪಡುವ ಹೈಪರ್ ಟ್ರೈಕೋಸಿಸ್‌ನಿಂದ ಬಳಲುತ್ತಿರುವ 18 ವರ್ಷದ ಲಲಿತ್ ಪಾಟಿದಾರ್ ಎಂಬ ಯುವಕ ಇದೀಗ ನಂಬಲಾಗದ ದಾಖಲೆಯನ್ನು ನಿರ್ಮಿಸಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಗಿನ್ನೆಸ್‌ ವಿಶ್ವ ದಾಖಲೆಗಳ ಪ್ರಕಾರ, ಪಾಟಿದಾರ್ ಪ್ರತಿ ಚದರ ಸೆಂಟಿಮೀಟರ್‌ಗೆ 201.72 ಕೂದಲುಗಳನ್ನು ಹೊಂದಿದ್ದು, ಈತನ ಮುಖದ 95% ಭಾಗವನ್ನು ಕೂದಲು ಆವರಿಸಿದೆ ಎನ್ನಲಾಗಿದೆ.

"ಜನರು ನನ್ನ ನೋಡಿ ಭಯಪಡುತ್ತಿದ್ದರು. ಆದರೆ ನನ್ನೊಂದಿಗೆ ಮಾತನಾಡಲು ಶುರುಮಾಡಿದಾಗ ನಾನು ಅವರಿಗಿಂತ ಭಿನ್ನವಾಗಿಲ್ಲ ಎಂದು ಅರ್ಥಮಾಡಿಕೊಂಡಿದ್ದಾರೆ ಎಂದು ಆತ ಹೇಳಿದ್ದಾನೆ. ಲಲಿತ್ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದು, ಅಲ್ಲಿ ಆತ ತನ್ನ ದೈನಂದಿನ ಜೀವನದ ಬಗ್ಗೆ ತನ್ನ ಫಾಲೋವರ್ಸ್‍ಗೆ ಮಾಹಿತಿ ನೀಡುತ್ತಿರುತ್ತಾನೆ.

ಲಲಿತ್‍ ಪಾಟಿದಾರ್ ಇತ್ತೀಚೆಗೆ ಇಟಲಿಯ ಮಿಲನ್‍ಗೆ ಪ್ರಯಾಣ ಬೆಳೆಸಿದ್ದಾನೆ ಮತ್ತು ಅಲ್ಲಿನ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲಿ ದಾಖಲೆಗಾಗಿ ಅವನ ಮುಖದ ಕೂದಲನ್ನು ಅಳೆಯಲಾಯಿತಂತೆ. ಗಿನ್ನೆಸ್‌ ದಾಖಲೆಯಿಂದ ಖುಷಿಪಟ್ಟ ಲಲಿತ್‍, “ಏನು ಹೇಳಬೇಕೆಂದು ನನಗೆ ತಿಳಿದಿಲ್ಲ. ಏಕೆಂದರೆ ಈ ಗೌರವವನ್ನು ಪಡೆಯಲು ನನಗೆ ತುಂಬಾ ಖುಷಿಯಾಗಿದೆ. ನನ್ನ ಮುಖದ ಕೂದಲನ್ನು ಶೇವ್ ಮಾಡಬೇಕು ಎಂದು ಇನ್ನು ಯಾರು ಹೇಳುವುದಿಲ್ಲ ಎಂದು ತಿಳಿಸಿದ್ದಾನೆ.

ಈ ಸುದ್ದಿಯನ್ನೂ ಓದಿ:Viral News: ಬರೋಬ್ಬರಿ 58 ಗಂಟೆ ಪರಸ್ಪರ ಚುಂಬಿಸಿ ಗಿನ್ನೆಸ್ ದಾಖಲೆ ಬರೆದಿದ್ದ ದಂಪತಿ ಡಿವೋರ್ಸ್‌!

ಇತ್ತೀಚೆಗೆ ದೀರ್ಘ ಚುಂಬನದ ಮೂಲಕ ಥಾಯ್ ದಂಪತಿ ವಿಶ್ವ ದಾಖಲೆ ಬರೆದಿದ್ದರು. ಸುದೀರ್ಘ 58 ಗಂಟೆ 35 ನಿಮಿಷಗಳ ಕಾಲ ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ಈ ದಂಪತಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದರು. 2013ರಲ್ಲಿ ಈ ದಂಪತಿ ಈ ವಿಚಿತ್ರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಈ ದಂಪತಿಯೇ ಎಕ್ಕಾಚಿ ತ್ರಿನರಾತ್ ಮತ್ತು ಆತನ ಪತ್ನಿ ಲಕ್ಸಣ. ಆದರೆ ಈಗ ಆ ದಂಪತಿ ಬೇರೆಯಾಗಿದ್ದಾರಂತೆ. ಆದರೆ ಆ ರೆಕಾರ್ಡ್ ಬಗ್ಗೆ ಈಗಲೂ ಹೆಮ್ಮೆಯಿದೆ ಎಂದು ಪತಿ ಹೇಳಿದ್ದಾನೆ. ಅದು ಅಲ್ಲದೇ, ದೀರ್ಘ ಚುಂಬನ ವಿಭಾಗವನ್ನೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ 2013ರ ಬಳಿಕ ಕ್ಯಾನ್ಸ‍ಲ್ ಮಾಡಿತ್ತು. ಹೀಗಾಗಿ ಈ ದಾಖಲೆ ಎಂದೆಂದೂ ಇವರಿಬ್ಬರ ಹೆಸರಿನಲ್ಲೇ ಉಳಿಯಲಿದೆ.