Viral News: ಬರೋಬ್ಬರಿ 58 ಗಂಟೆ ಪರಸ್ಪರ ಚುಂಬಿಸಿ ಗಿನ್ನೆಸ್ ದಾಖಲೆ ಬರೆದಿದ್ದ ದಂಪತಿ ಡಿವೋರ್ಸ್!
ಯಾವ್ಯಾವುದೋ ವಿಷಯದಲ್ಲಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡುತ್ತಿರುತ್ತಾರೆ. ಹಾಗೆ, ಸುದೀರ್ಘ ಸಮಯ ಪರಸ್ಪರ ಚುಂಬಿಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ಥಾಯ್ ದಂಪತಿ ಇದೀಗ ಹೊಸದೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ, ಅದೇನೆಂದು ನೋಡೋಣ ಬನ್ನಿ...

ಪರಸ್ಪರ ಚುಂಬಿಸಿ ವರ್ಲ್ಡ್ ರೆಕಾರ್ಡ್ ಮಾಡಿದ್ದ ಥಾಯ್ ದಂಪತಿ.

ಜಕಾರ್ತ: ಸುದೀರ್ಘ ಚುಂಬನದ ಮೂಲಕ ವಿಶ್ವ ದಾಖಲೆ (Longest Kiss Record) ಬರೆದಿದ್ದ ಥಾಯ್ ದಂಪತಿಯ ಬಗ್ಗೆ ನಿಮಗೆ ನೆನಪಿದೆಯೇ? ಸುದೀರ್ಘ 58 ಗಂಟೆ 35 ನಿಮಿಷಗಳ ಕಾಲ ಪರಸ್ಪರ ಚುಂಬಿಸಿಕೊಳ್ಳುವ ಮೂಲಕ ಈ ದಂಪತಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Records) ಬರೆದಿದ್ದರು. 2013ರಲ್ಲಿ ಈ ದಂಪತಿ ಈ ವಿಚಿತ್ರ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದರು. ಈ ದಂಪತಿಯೇ ಎಕ್ಕಾಚಿ ತ್ರಿನರಾತ್ ಮತ್ತು ಆತನ ಪತ್ನಿ ಲಕ್ಸಣ. ಈ ದಂಪತಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ, ಇದಕ್ಕೆ ಕಾರಣವೇನೆಂದರೆ ಈ ದಂಪತಿ ಇದೀಗ ಜೊತೆಯಾಗಿಲ್ಲವೆಂಬ ಸುದ್ದಿ ಹೊರಬಿದ್ದಿದೆ. ಬಿಬಿಸಿ ಸೌಂಡ್ಸ್ ಪಾಡ್ ಕಾಸ್ಟ್ ವಿಟ್ನೆಸ್ ಹಿಸ್ಟರಿ ಎಂಬ ಕಾರ್ಯಕ್ರಮದಲ್ಲಿ ಎಕ್ಕಾಚಿ ಈ ವಿಷಯವನ್ನು ರಿವೀಲ್ ಮಾಡಿದ್ದಾನೆ.
ನಾವಿಬ್ಬರೂ ಇದೀಗ ಬೇರೆಯಾಗಿದ್ದೇವೆ, ಆದರೆ ಆ ರೆಕಾರ್ಡ್ ಬಗ್ಗೆ ಈಗಲೂ ನಮಗೆ ಹೆಮ್ಮೆಯಿದೆ ಎಂದು ಆತ ಹೇಳಿಕೊಂಡಿದ್ದಾನೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರವೆಂದ್ರೆ ಸುದೀರ್ಘ ಚುಂಬನ ವಿಭಾಗವನ್ನೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ 2013ರ ಬಳಿಕ ಕ್ಯಾನ್ಸಲ್ ಮಾಡಿತ್ತು. ಹೀಗಾಗಿ ಈ ದಾಖಲೆ ಎಂದೆಂದೂ ಇವರಿಬ್ಬರ ಹೆಸರಿನಲ್ಲೇ ಉಳಿಯಲಿದೆ.
ಇದನ್ನೂ ಓದಿ: Viral Video: ಸ್ಟೇಷನ್‌ನಲ್ಲಿ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು! ಶಾಕಿಂಗ್ ವಿಡಿಯೊ ಫುಲ್ ವೈರಲ್
Longest kiss? Ekkachai & Laksana Tiranarat (Thailand) kissed for 58 hrs 35 mins and 58 secs, #ValentinesDay 2013 pic.twitter.com/YNWh14pBZh
— Guinness World Records (@GWR) February 14, 2016
ಹೇಗೆ ನಡೆಯುತ್ತೆ ಈ ಸುದೀರ್ಘ ಚುಂಬನ ಸ್ಪರ್ಧೆ?
ಈ ಸುದೀರ್ಘ ಚುಂಬನ ಸ್ಪರ್ಧೆಯಲ್ಲಿ ಇಬ್ಬರ ತುಟಿಗಳು ಸ್ಪರ್ಧೆಯುದ್ದಕ್ಕೂ ಪರಸ್ಪರ ಬೆಸೆದುಕೊಂಡೇ ಇರಬೇಕಾಗುತ್ತೆ. ಈ ಸಂದರ್ಭದಲ್ಲಿ ಅವರಿಬ್ಬರು ಏನನ್ನೂ ತಿನ್ನುವಂತಿಲ್ಲ. ಮತ್ತು ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ತಾವು ಸ್ಪರ್ಧೆಯಲ್ಲಿ ಇರುವಷ್ಟು ಹೊತ್ತು ಎಚ್ಚರವಾಗಿಯೇ ಇರಬೆಕು ಮತ್ತು ನಿಂತುಕೊಂಡೇ ಇರಬೇಕು ಎಂಬೆಲ್ಲಾ ನಿಯಮವಿದೆ.
Married couple who hold world record for the longest kiss share tragic update on their relationship
— MassiVeMaC (@SchengenStory) February 25, 2025
World record holders Ekkachai & Laksana Tiranarat have parted ways
A once besotted couple who broke the record for the longest kiss have sadly revealed they're no longer together pic.twitter.com/63r3NNbnxO
ಈ ಸುದೀರ್ಘ ಚುಂಬನ ಎಂಬುದು ಒಂದು ಅಪಾಯಕಾರಿ ಸಾಹಸವಾಗಿರುವ ಕಾರಣ ಈ ಕೆಟಗರಿಯನ್ನೇ ತೆಗೆದು ಹಾಕುತ್ತಿರುವುದಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಘೋಷಿಸಿತ್ತು. ಈ ಸುದೀರ್ಘ ಚುಂಬನದ ದಾಖಲೆ ತಮ್ಮ ಹೆಸರಿಗೆ ಬರಬೇಕೆಂದು ವಿಶ್ವಾದ್ಯಂತ ಹಲವಾರು ಜೋಡಿಗಳು ಕೆಲವೊಂದು ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿ ಗಿನ್ನೆಸ್ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೀಗ ಸುದೀರ್ಘ ಚುಂಬನ ದಾಖಲೆ ಕೆಟಗರಿಯ ಬದಲಿಗೆ ಸುದೀರ್ಘ ಚುಂಬನ ಮ್ಯಾರಥಾನ್ ಎಂಬ ಕೆಟಗರಿಯನ್ನು ಗಿನ್ನೆಸ್ ಪರಿಚಯಿಸಿದೆ.
ಈ ಸುದೀರ್ಘ ಚುಂಬನದ ದಾಖಲೆಯನ್ನು ತಮ್ಮ ಹೆಸರಿಗೆ 2013ರಲ್ಲಿ ಬರೆಸಿಕೊಂಡಿದ್ದ ಥಾಯ್ ದಂಪತಿ, ಬಹುಮಾನವಾಗಿ ಒಂದು ಲಕ್ಷ ಥಾಯ್ ಬಹ್ತ್ ನಗದು ಬಹುಮಾನ ಮತ್ತು ಒಂದು ಲಕ್ಷ ಥಾಯ್ ಬಹ್ತ್ ಮೌಲ್ಯದ ವಜ್ರದ ಉಂಗುರವನ್ನು ಪಡೆದುಕೊಂಡಿದ್ದರು.