#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಸ್ಪರ್ಧಿಗೆ ಈ ರೀತಿ ಪ್ರಶ್ನೆ ಕೇಳಿ ಟೀಕೆಗೆ ಗುರಿಯಾದ ರಣವೀರ್ ಅಲ್ಲಾಬಾಡಿಯಾ; ಏನಿದು ವಿವಾದ?

ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಹಾಸ್ಯನಟ ಸಮಯ್ ರೈನಾ ಜತೆ ತೀರ್ಪುಗಾರರಾಗಿ ಕಾಣಿಸಿಕೊಂಡ ಖ್ಯಾತ ಯೂಟ್ಯೂಬರ್ ಮತ್ತು ಪಾಡ್‌ಕಾಸ್ಟ್‌ ನಿರೂಪಕ ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಯೊಬ್ಬರ ಬಳಿ ಪೋಷಕರ ಲೈಂಗಿಕ ಜೀವನದ ಬಗ್ಗೆ ತಮಾಷೆಯಾಗಿ ಪ್ರಶ್ನೆ ಮಾಡಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರಣವೀರ್ ಅಲ್ಲಾಬಾಡಿಯಾ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ಯಾಕೆ?

ranveer viral video

Profile pavithra Feb 10, 2025 3:02 PM

ಮುಂಬೈ: 'ಬೀರ್ ಬೈಸೆಪ್ಸ್' ಎಂದೂ ಕರೆಯಲ್ಪಡುವ ಖ್ಯಾತ ಯೂಟ್ಯೂಬರ್ ಮತ್ತು ಪಾಡ್‌ಕಾಸ್ಟ್‌ ನಿರೂಪಕ ರಣವೀರ್ ಅಲ್ಲಾಬಾಡಿಯಾ (Ranveer Allahbadia) ಅವರು ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮದಲ್ಲಿ ಮಾಡಿದ ಕೆಟ್ಟ ಹಾಸ್ಯಕ್ಕಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಶೋದಲ್ಲಿ ಕಾಣಿಸಿಕೊಂಡ ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಯೊಬ್ಬನ ಬಳಿ ಪೋಷಕರ ಲೈಂಗಿಕ ಜೀವನದ ಬಗ್ಗೆ ತಮಾಷೆಯಾಗಿ ಪ್ರಶ್ನೆ ಮಾಡಿದ್ದನ್ನು ಅನೇಕರು ಖಂಡಿಸಿದ್ದಾರೆ. ಇನ್ನು ಈ ವಿಡಿಯೊ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ಇಂಡಿಯಾಸ್ ಗಾಟ್ ಲೇಟೆಂಟ್‍ನ ಇತ್ತೀಚಿನ ಸಂಚಿಕೆಯಲ್ಲಿ ಸಮಯ್ ರೈನಾ, ಆಶಿಶ್ ಚಂಚ್ಲಾನಿ, ಅಪೂರ್ವ ಮುಖಿಜಾ ಅಕಾ ದಿ ರೆಬೆಲ್ ಕಿಡ್ ಮತ್ತು ಇತರರೊಂದಿಗೆ ತೀರ್ಪುಗಾರನಾಗಿ ರಣವೀರ್ ಕಾಣಿಸಿಕೊಂಡಿದ್ದರು. ಎಪಿಸೋಡ್ ಸಮಯದಲ್ಲಿ ಆತ ಸ್ಪರ್ಧಿಯೊಬ್ಬನಿಗೆ ಕೇಳಿದ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.



ರಣವೀರ್‌ ಸ್ಪರ್ಧಿಯೊಬ್ಬನ ಬಳಿ ಪೋಷಕರ ಲೈಂಗಿಕ ಜೀವನದ ಕುರಿತು ಕೇಳಿದ ಪ್ರಶ್ನೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಸಮಯ್‌ ರೈನಾ ಕೂಡ ರಣವೀರ್‌ ಪ್ರಶ್ನೆ ಶಾಕ್‌ ಆಗಿದ್ದಾರೆ. ʼʼರಣವೀರ್‌ಗೆ ಏನಾಗಿದೆ...?” ಎಂದು ಕಾರ್ಯಕ್ರಮದ ಇನ್ನೊಬ್ಬ ತೀರ್ಪುಗಾರ ಕೇಳಿದ್ದಾರೆ. ಸೋಶಿಯಲ್ ಮಿಡಿಯಾದವರು ರಣವೀರ್‌ ಮೇಲೆ ಕಿಡಿಕಾರಿದ್ದಾರೆ.

ರಣವೀರ್ ಅಲ್ಲಾಬಾಡಿಯಾ ಅವರ ಈ ಕೊಳಕು 'ಜೋಕ್' ತುಂಬಾ ಅಸಹ್ಯಕರವಾಗಿದ್ದು, ಇದು ಭಾರೀ ಆಕ್ರೋಶ ಹುಟ್ಟು ಹಾಕಿದೆ. ಈ ಬಗ್ಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ ಅಂತಹ ವಿಷಯವನ್ನು ಪ್ರಕಟಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಶೋ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತೊಬ್ಬ ನೆಟ್ಟಿಗರು ರಣವೀರ್ ಅವರನ್ನು ವಿಕೃತ ಎಂದು ಕರೆದಿದ್ದಾರೆ. "ಹೆಚ್ಚಿನ ಭಾರತೀಯ ಹಾಸ್ಯ ಅಭಿಮಾನಿಗಳಿಗೆ ಹಾಸ್ಯ ಎಂದರೇನು ಎಂದು ನಿಜವಾಗಿಯೂ ತಿಳಿದಿಲ್ಲ. ಅಶ್ಲೀಲತೆಯು ಹಾಸ್ಯವಾಗಿದೆ ಎಂದು ಅವರು ಭಾವಿಸುತ್ತಾರೆ” ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Bryan Johnson: ನಿಖಿಲ್ ಕಾಮತ್ ಪಾಡ್‌ಕಾಸ್ಟ್‌ನಿಂದ ಬ್ರಿಯಾನ್ ಜಾನ್ಸನ್ ಹೊರ ನಡೆದಿದ್ಯಾಕೆ?

ಅಮೆರಿಕದ ಮಿಲಿಯನೇರ್ ಬ್ರಿಯಾನ್ ಜಾನ್ಸನ್‌ ಅವರು ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಅವರ ಪಾಡ್​​ಕಾಸ್ಟ್‌ ಸಂದರ್ಶನ ನೀಡಲು ಭಾರತಕ್ಕೆ ಆಗಮಿಸಿದ್ದರು. ಆದರೆ ಸಂದರ್ಶನದ ಮಧ್ಯೆಯೇ ಬ್ರಿಯಾನ್‌ ಎದ್ದು ಹೊರ ನಡೆದಿದ್ದು ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ನಿಖಿಲ್‌ ಕಾಮತ್‌ ತಮ್ಮ ಪಾಡ್‌ಕಾಸ್ಟ್‌ನಿಂದಲೇ ಜನಪ್ರಿಯರಾಗಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ದೇಶ ಮತ್ತು ವಿದೇಶದ ಹಲವು ಗಣ್ಯರನ್ನು ಅವರು ಸಂದರ್ಶನ ಮಾಡಿದ್ದಾರೆ. ನಿಖಿಲ್ ಈ ಬಾರಿ ಅಮೆರಿಕದ‌ ಖ್ಯಾತ ವಾಣಿಜೋದ್ಯಮಿಯಾದ ಬ್ರಿಯಾನ್‌ ಜಾನ್ಸನ್‌ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಿದ್ದರು. ಆದರೆ ಅವರು ಸಂದರ್ಶನದ ನಡುವೆಯೇ ಎದ್ದು ಹೊರ ನಡೆದಿದ್ದರು.

ಭಾರತದಲ್ಲಿ ನಾನು ಮೂರು ದಿನ ಕಳೆದೆ. ಆದರೆ ತುಂಬಾ ತೊಂದರೆಯಾಯಿತು. ವಾಯು ಮಾಲಿನ್ಯದಿಂದಾಗಿ ನನ್ನ ಚರ್ಮದಲ್ಲಿ ಗಾಯಗಳಾದವು. ಕಣ್ಣುಗಳು ಮತ್ತು ಗಂಟಲು ಉರಿಯುತ್ತಿದ್ದವು. ಭಾರತದಲ್ಲಿ ಗಾಳಿಯ ಗುಣಮಟ್ಟ ಎಷ್ಟು ಕಳಪೆಯಾಗಿದೆ ಎಂದರೆ ಅದರ ದುಷ್ಪರಿಣಾಮಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರು ತಮ್ಮ ಪಾಡಿಗೆ ಆರಾಮವಾಗಿ ಓಡಾಡುತ್ತಿದ್ದಾರೆ. ಆದರೆ ಹುಟ್ಟಿನಿಂದಲೇ ಶಿಶುಗಳು ಮತ್ತು ಚಿಕ್ಕ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಬ್ರಿಯಾನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದರು.