Viral Video: ಸ್ಕೈಡೈವಿಂಗ್ ಮಾಡುವಾಗ ಮೂರ್ಛೆ ತಪ್ಪಿದ ಸ್ಕೈಡ್ರೈವರ್; ಮುಂದೇನಾಯ್ತು? ವಿಡಿಯೊ ನೋಡಿ
ಆಸ್ಟ್ರೇಲಿಯಾ ಪರ್ತ್‍ನ 22 ವರ್ಷದ ಕ್ರಿಸ್ಟೋಫರ್ ಜೋನ್ಸ್ ಸ್ಕೈಡೈವಿಂಗ್ ತರಬೇತಿ ಪಡೆಯಲು ಡೈವ್ ಮಾಡುವಾಗ ವಿಮಾನದಿಂದ ಜಿಗಿದಿದ್ದು, ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಿದ ಹಳೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕ್ಯಾನ್‌ಬೆರ‍್ರ: ಸ್ಕೈಡೈವರ್ ಒಬ್ಬರು ಸ್ಕೈಡೈವಿಂಗ್ ಮಾಡುವಾಗ ಪ್ರಜ್ಞೆ ಕಳೆದುಕೊಂಡ ಹಳೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದ್ದು ಈಗ ವೈರಲ್ ಆಗಿದೆ. ವರದಿ ಪ್ರಕಾರ ಆಸ್ಟ್ರೇಲಿಯಾದ ಪರ್ತ್‍ನ 22 ವರ್ಷದ ಕ್ರಿಸ್ಟೋಫರ್ ಜೋನ್ಸ್ ಸ್ಕೈಡೈವಿಂಗ್ ತರಬೇತಿ ಪಡೆಯಲು ಡೈವ್ ಮಾಡುವಾಗ 12,000 ಅಡಿ ಎತ್ತರದಿಂದ ವಿಮಾನದಿಂದ ಜಿಗಿದಿದ್ದಾನೆ. ಆಗ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಜೋನ್ಸ್‌ಗೆ ಮೂರ್ಛೆ ರೋಗವಿದೆ ವರದಿಗಳು ತಿಳಿಸಿವೆ. ಜೋನ್ಸ್ ಮೇಲಿನಿಂದ ಕೆಳಗೆ ಬೀಳುವಾಗ ಆತನ ತರಬೇತುದಾರ ಶೆಲ್ಡನ್ ಮ್ಯಾಕ್‍ಫರ್ಲೇನ್ ತನ್ನ ರಿಪ್ಕಾರ್ಡ್ ಎಳೆದು ಪ್ಯಾರಾಚೂಟ್ ಸಹಾಯದಿಂದ ಆತನನ್ನು ರಕ್ಷಿಸಿದ್ದಾನೆ.
ಈ ವಿಡಿಯೊ ಈಗ ಎಕ್ಸ್ (ಈ ಹಿಂದೆ ಟ್ವಿಟರ್)ನಲ್ಲಿ ಮತ್ತೆ ವೈರಲ್ ಆಗಿದೆ. ಫೆ. 7ರಂದು ಶೇರ್ ಮಾಡಲಾದ ಈ ವೀಡಿಯೊವನ್ನು 83,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅನೇಕ ನೆಟ್ಟಿಗರು ತರಬೇತುದಾರರ ಕ್ರಮಗಳನ್ನು ಶ್ಲಾಘಿಸಿದ್ದಾರೆ. "ಇದು ನಿಜವಾದ ಸೂಪರ್‌ಮ್ಯಾನ್ ಕೆಲಸ” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಗಾಳಿಯಲ್ಲಿ ಒಂದು ಜೀವವನ್ನು ಉಳಿಸಿದ್ದಕ್ಕಾಗಿ ಸಹ ಸ್ಕೈಡೈವರ್‌ಗೆ ಸೆಲ್ಯೂಟ್ ಹೊಡೆದಿದ್ದಾರೆ.
Man has seizure while skydiving and gets saved by fellow skydiver during a free fall pic.twitter.com/1hZxj3nR8g
— Crazy Clips (@crazyclipsonly) February 7, 2025
ಈ ಸುದ್ದಿಯನ್ನೂ ಓದಿ: Viral News: ವಿಮಾನದಲ್ಲಿ ಪ್ರಜ್ಞೆ ಕಳೆದುಕೊಂಡ ವೃದ್ಧೆಯ ಜೀವ ಉಳಿಸಿದ ಇಂಡಿಗೊ ಸಿಬ್ಬಂದಿ; 'ಸೂಪರ್ ವುಮನ್' ಎಂದು ಹೊಗಳಿದ ನೆಟ್ಟಿಗರು
ಇತ್ತೀಚೆಗೆ ಪುಣೆಯಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಸಂಕಷ್ಟದಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರ ಜೀವ ಉಳಿಸಿದ್ದಕ್ಕಾಗಿ ಕ್ಯಾಬಿನ್ ಸಿಬ್ಬಂದಿಯೊಬ್ಬರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸಿಬ್ಬಂದಿಯ ಅಸಾಧಾರಣ ಧೈರ್ಯ ಮತ್ತು ಸಹಾನುಭೂತಿಯನ್ನು ಜನ ಹಾಡಿ ಹೊಗಳಿದ್ದಾರೆ. ಸ್ಪಾಟ್ಲೈಟ್ ಸ್ಕೌಟ್ಸ್ ಮತ್ತು ಒರಿಯನ್ ಹಾಸ್ಟೆಲ್ಸ್‌ನ ಸಹ ಸಂಸ್ಥಾಪಕ ಸಂಚಿತ್ ಮಹಾಜನ್ ಈ ಘಟನೆಯನ್ನು ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
70 ವಯಸ್ಸಿನ ವೃದ್ಧೆಯೊಬ್ಬರು ವಿಮಾನದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಅವರಿಗೆ ಸಹಾಯವನ್ನು ಒದಗಿಸಲು ಯಾವುದೇ ವೈದ್ಯಕೀಯ ವೃತ್ತಿಪರರು ವಿಮಾನದಲ್ಲಿ ಇಲ್ಲದ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಆದರೆ ಕ್ಯಾಬಿನ್ ಸಿಬ್ಬಂದಿಯೊಬ್ಬರ ಜಾಣ್ಮೆಯಿಂದ ವೃದ್ಧೆಯ ಜೀವ ಉಳಿಯಿತು. ಅನಾಮಧೇಯ ಸಿಬ್ಬಂದಿ ವೃದ್ಧ ಮಹಿಳೆಗೆ ಕೃತಕ ಆಮ್ಲಜನಕವನ್ನು ನೀಡಿ ಅವರನ್ನು ಉಳಿಸಲು 30-40 ನಿಮಿಷಗಳ ಕಾಲ ದಣಿವರಿಯದೆ ಪ್ರಯತ್ನ ಪಟ್ಟಿದ್ದರು. ಕೊನೆಗೂ ಅವರ ಪ್ರಯತ್ನಕ್ಕೆ ಫಲ ನೀಡುವಂತೆ ವೃದ್ಧ ಮಹಿಳೆಗೆ ಪ್ರಜ್ಞೆ ಮರಳಿ ಬಂದಿತ್ತು. ವಿಮಾನ ಇಳಿಯುವ ಮೊದಲು ಮಹಾಜನ್ ವೈಯಕ್ತಿಕವಾಗಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿ, ಅವರನ್ನು "ನಿಜವಾದ ಹೀರೋ" ಎಂದು ಕರೆದಿದ್ದಾರೆ