ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ರೈಲಿನಲ್ಲಿ ಚಹಾವನ್ನು ಹೀಗೂ ಸರ್ವ್‌ ಮಾಡಬಹುದು- ವಿಡಿಯೊ ನೋಡಿ

ರೈಲಿನಲ್ಲಿ ಚಹಾ ಮಾರಾಟಗಾರನೊಬ್ಬ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಪ್ರಯಾಣಿಕರಿಗೆ ರೈಲಿನ ಕಿಟಿಕಿಯ ಜಾಲರಿ ಮೂಲಕ ಚಹಾ ನೀಡಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರೈಲಿನಲ್ಲಿ ಚಹಾವನ್ನು ಹೀಗೂ ಸರ್ವ್‌ ಮಾಡಬಹುದಾ? ವಿಡಿಯೊ ವೈರಲ್‌

Profile pavithra Feb 15, 2025 12:51 PM

ಇತ್ತೀಚೆಗೆ ಸೋಶಿಯಲ್ ಮಿಡಿಯಾದಲ್ಲಿ ಚಹಾ ಮಾರಾಟಗಾರನೊಬ್ಬನ ವಿಡಿಯೊವೊಂದು ಎಲ್ಲರ ಗಮನವನ್ನು ಸೆಳೆದು ವೈರಲ್ ಆಗಿದೆ. ಯಾಕೆಂದರೆ ಅದರಲ್ಲಿ ಚಹಾ ಮಾರಾಟಗಾರ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಕಿಟಕಿಯ ಮೂಲಕವೇ ಪ್ರಯಾಣಿಕರಿಗೆ ಚಹಾ ನೀಡಿದ್ದಾನೆ. ಅಂಥದ್ದೇನು ಆತ ಮಾಡಿದ್ದಾನೆ ಎಂಬ ಕುತೂಹಲ ನಿಮಗಿದೆಯಾ....? ಇಲ್ಲಿದೆ ನೋಡಿ ಅದರ ಮಾಹಿತಿ. ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ ಚಹಾ ಮಾರಾಟಗಾರನು ಕಿಟಕಿಯ ಮೂಲಕ ಪ್ರಯಾಣಿಕರಿಗೆ ಚಹಾ ನೀಡಿದ್ದಾನಂತೆ. ವಿಡಿಯೊದಲ್ಲಿ ಆತ ರೈಲಿನ ಹೊರಗೆ ಕಿಟಕಿಯ ಬಳಿ ನಿಂತಿದ್ದಾನೆ. ಆದರೆ ಒಳಗಡೆ ಇರುವವರು ಚಹಾ ಕೇಳಿದಾಗ ಆತ ಕಿಟಕಿಯ ಮೂಲಕ ನೀಡಲು ಅಸಾಧ್ಯವಾದರೂ ಅದನ್ನು ಸಾಧ್ಯ ಮಾಡಿದ್ದಾನೆ.

ಚಹಾ ಕೇಳಿದ ಪ್ರಯಾಣಿಕನಿಗೆ ಬೇಸರವಾಗಬಾರದು ಎಂದು ಒಂದು ಸಣ್ಣ ಕಾಗದದ ಕಪ್ ತೆಗೆದುಕೊಂಡು, ಅದನ್ನು ಪೋಲ್ಡ್ ಮಾಡಿ ಕಿಟಕಿಯ ಜಾಲರಿಯ ಮೂಲಕ ಅದನ್ನು ಪ್ರಯಾಣಿಕರಿಗೆ ನೀಡಿದ್ದಾನೆ. ಕಪ್ ತೆಗೆದುಕೊಂಡ ಪ್ರಯಾಣಿಕ ಅದನ್ನು ಒಪನ್‌ ಮಾಡಿದ್ದಾನೆ. ನಂತರ ಮಾರಾಟಗಾರನು ತನ್ನ ಚಹಾ ಕೆಟಲ್‌ನ ಅನ್ನು ಕಿಟಕಿಯ ಒಳಗೆ ಹಾಕಿ ಬಿಸಿ ಚಹಾವನ್ನು ಕಪ್‌ಗೆ ಸುರಿದಿದ್ದಾನೆ. ಇದರಿಂದ ಪ್ರಯಾಣಿಕ ಕೂಡ ಫುಲ್‌ ಖುಷಿಯಾಗಿದ್ದಾನೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಒಬ್ಬರು ಕಾಮೆಂಟ್ ಮಾಡಿ, "ತುಂಬಾ ಬುದ್ಧಿವಂತ." ಎಂದಿದ್ದಾರೆ. ಇನ್ನೊಬ್ಬರು ತಮಾಷೆಯಾಗಿ, "ಒಳ್ಳೆಯ ವಿಷಯವೆಂದರೆ ಈ ಐಡಿಯಾ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ." ಎಂದಿದ್ದಾರೆ. "ಈ ರೈಲಿಗೆ ಗಾಜಿನ ಕಿಟಕಿಗಳನ್ನು ಹಾಕಿದ ದಿನ, ಈ ವ್ಯವಹಾರವನ್ನು ಮುಚ್ಚಲಾಗುತ್ತದೆ" ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಒಬ್ಬರು ಈ ತಂತ್ರವನ್ನು "ಹ್ಯಾಕರ್ ಅಲ್ಟ್ರಾ ಪ್ರೊ ಮ್ಯಾಕ್ಸ್" ಎಂದು ಕರೆದರು. ಇನ್ನೊಬ್ಬರು "ಇಚ್ಛಾಶಕ್ತಿ ಇರುವಲ್ಲಿ ಉತ್ತಮ ಮಾರ್ಗವಿದೆ" ಎಂದು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: ರೈಲಿನಲ್ಲಿ ಟೀ-ಕಾಫಿ ಕುಡಿಯುದಕ್ಕೂ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ!

ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಟೀ ಕಂಟೈನರ್ ಅನ್ನು ಜೆಟ್ ಸ್ಪ್ರೇ ಬಳಸಿ ತೊಳೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ ಹಾಗೂ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆಯೂಬ್ ಎಂಬ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಹಂಚಿಕೊಂಡ ಈ ರೀಲ್‌ ವೈರಲ್ ಆಗಿದೆ. ಈ ರೀಲ್‌ ಅನ್ನು 91 ಕ್ಕೂ ಹೆಚ್ಚಿನ ದಶಲಕ್ಷ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಆನ್‌ಲೈನ್‌ನಲ್ಲಿ ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಆಯುಬ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ರೈಲು ಶೌಚಾಲಯದ ಒಳಗಡೆ ನಿಂತು ಟೀ ಕಂಟೈನರ್ ಅನ್ನು ಹಿಡಿದುಕೊಂಡು ಅದನ್ನು ಸ್ವಚ್ಛಗೊಳಿಸಲು ಜೆಟ್ ಸ್ಪ್ರೇ ಬಳಸುತ್ತಿರುವುದನ್ನು ಕಾಣಬಹುದು. ಇದು ಪ್ರಯಾಣಿಕರು ಬಳಸಬಹುದಾದ ಶೌಚಾಲಯ ಇದಾಗಿದೆ. ಇಂಥಾ ಜಾಗದಲ್ಲಿ ಚಹಾ ಮಾರಾಟಗಾರ ಕಂಟೈನರ್‌ ತೊಳೆಯುವ ಮೂಲಕ ಅಜಾಗರೂಕತೆ ಪ್ರದರ್ಶಿಸಿದ್ದಾನೆ. ತಾವು ಹಂಚಿಕೊಂಡ ಈ ವಿಡಿಯೊಗೆ ಆಯುಬ್‌ ʻಟ್ರೇನ್ ಕಿ ಚಾಯ್ʼ ಎಂಬ ಶೀರ್ಷಿಕೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ.