Viral News: ಮುಂಜಾನೆ 3 ಗಂಟೆಗೆ ಕೂಗಿದ ಹುಂಜದ ವಿರುದ್ಧ ದೂರು ದಾಖಲಿಸಿದ ವ್ಯಕ್ತಿ; ಅಷ್ಟಕ್ಕೂ ಆಗಿದ್ದೇನು?
ಕೇರಳದ ಹಳ್ಳಿಯೊಂದರಲ್ಲಿ ರಾಧಾಕೃಷ್ಣ ಕುರುಪ್ ಎಂಬ ವ್ಯಕ್ತಿಯೊಬ್ಬ ಪಕ್ಕದ ಮನೆಯ ಅನಿಲ್ ಕುಮಾರ್ ಎಂಬಾತನ ಹುಂಜವೊಂದು ಮುಂಜಾನೆ 3 ಗಂಟೆಗೆ ಕೂಗುವ ಮೂಲಕ ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ದೂರಿ ಅದರ ವಿರುದ್ಧ ಆರ್‌ಡಿಒನಲ್ಲಿ ದೂರು ದಾಖಲಿಸಿದ್ದಾನೆ. ಆರ್‌ಡಿಒ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸಿ ಈ ಸಮಸ್ಯೆಯನ್ನು ಪರಿಹರಿಸಿದ್ದಾರೆ.ಈ ಸುದ್ದಿ ಇದೀಗ ಎಲ್ಲೆಡೆ ವೈರಲ್(Viral News) ಆಗಿದೆ.


ತಿರುವನಂತಪುರಂ: ಬೆಳಗ್ಗಿನ ಸವಿ ನಿದ್ರೆಯಿಂದ ಎದ್ದೇಳುವುದು ಎಂದರೆ ಎಲ್ಲರಿಗೂ ಬಹಳ ಕಷ್ಟದ ಕೆಲಸ ಎಂದೇ ಹೇಳಬಹುದು. ಇನ್ನು ಈ ವೇಳೆ ಅಲಾರಂ ಹೊಡೆದರೆ ಸಾಕು ಎಲ್ಲಿಲ್ಲದ ಕೋಪ ಬರುತ್ತದೆ. ಹೀಗಿರುವಾಗ ಪಕ್ಕದ ಮನೆ ಕೋಳಿ ಪದೇ ಪದೇ ಕೂಗುತ್ತಾ ನಿದ್ರೆಯನ್ನು ಕೆಡಿಸಿದರೆ ಪರಿಸ್ಥಿತಿ ಹೇಗಿರಬೇಡ ಹೇಳಿ...? ಕೇರಳದ ಹಳ್ಳಿಯೊಂದರಲ್ಲಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಹುಂಜವೊಂದು ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ದೂರಿ ಅದರ ವಿರುದ್ಧ ಆರ್‌ಡಿಒನಲ್ಲಿ ದೂರು ದಾಖಲಿಸಿದ ಘಟನೆಯೊಂದು ನಡೆದಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್(Viral News) ಆಗಿದೆ.
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾಕೃಷ್ಣ ಕುರುಪ್ ಎಂಬಾತ ಮುಂಜಾನೆ 3 ಗಂಟೆಗೆ ಪಕ್ಕದ ಮನೆಯವರ ಹುಂಜ ಕೂಗುತ್ತಾ ಕಿರಿಕಿರಿ ಮಾಡುತ್ತಿದೆ. ಇದರಿಂದ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಇದು ತನ್ನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ ಎಂದು ಅಡೂರ್ ಕಂದಾಯ ವಿಭಾಗೀಯ ಕಚೇರಿಯಲ್ಲಿ (ಆರ್‌ಡಿಒ) ದೂರು ನೀಡಿದ್ದಾನೆ. ಆರ್‌ಡಿಒ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸಿ ಸಮಸ್ಯೆಯನ್ನು ಪರಿಹರಿಸಿದ್ದಾರೆ.
ಕುರುಪ್ ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು, ಕೋಳಿ ಶೆಡ್ ಅನ್ನು ಸ್ಥಳಾಂತರಿಸುವಂತೆ ಕುಮಾರ್‌ಗೆ ಹೇಳಿದ್ದಾರೆ. 14 ದಿನಗಳಲ್ಲಿ ಹುಂಜವನ್ನು ಮನೆಯ ಮೇಲಿನ ಮಹಡಿಯಿಂದ ಬೇರೆ ಕಡೆಗೆ ಶಿಫ್ಟ್ ಮಾಡಲು ಆರ್‌ಡಿಒ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.
ಈ ರೀತಿಯ ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ಮಹಿಳೆಯೊಬ್ಬಳು ಪಕ್ಕದ ಮನೆಯ ಕೋಳಿ ವಿರುದ್ಧ ದೂರು ನೀಡಿದ್ದಾಳೆ. ಪಕ್ಕದ ಮನೆಯ ಕೋಳಿ ಬೆಳಗಾಗುವುದಕ್ಕಿಂತ ಮುಂಚೆ ಕೂಗಲು ಶುರುಮಾಡುತ್ತದೆ. ಇದರಿಂದ ತನ್ನ ನಿದ್ರೆ ಹಾಳಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳಿಗೆ ಮಹಿಳೆ ದೂರು ನೀಡಿದ್ದಾಳೆ. ಇಷ್ಟೇ ಅಲ್ಲ ಪಕ್ಕದ ಮನೆಯವರು ಕೋಳಿ ಗೂಡನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ ಇದರಿಂದ ಕೆಟ್ಟ ವಾಸನೆ ಬರುತ್ತದೆ. ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಲಿಖಿತ ದೂರನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಭಗವಾನ್ ಜಗನ್ನಾಥನ ಮುಂದೆ ತಲೆಬಾಗಿ ನಮಸ್ಕರಿಸಿದ ಕೋಳಿ- ಕುಕ್ಕುಟ ಭಕ್ತಿಗೆ ನೆಟ್ಟಿಗರು ಫುಲ್ ಫಿದಾ
ಒಡಿಶಾದ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿರುವ ಭಗವಾನ್ ಜಗನ್ನಾಥನ ಸುಂದರವಾದ ವಿಗ್ರಹದ ಮುಂದೆ ಕೋಳಿಯೊಂದು ತಲೆ ಬಾಗಿಸಿ ನಿಂತಿದೆಯಂತೆ. ಕೋಳಿ ನಮಸ್ಕರಿಸಿ ಜಗನ್ನಾಥ ಸ್ವಾಮಿಯ ಆಶೀರ್ವಾದ ಪಡೆಯುವ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಇದಕ್ಕೆ ಅನೇಕ ನೆಟ್ಟಿಗರು ಫಿದಾ ಆಗಿದ್ದಾರೆ.
ವಿಗ್ರಹದ ಮುಂದೆ ಕೋಳಿ ತನ್ನ ತಲೆಯನ್ನು ಭಕ್ತಿಯಿಂದ ನಿಧಾನವಾಗಿ ತಗ್ಗಿಸಿದೆ. ಇದನ್ನು ಅನೇಕ ನೆಟ್ಟಿಗರು ದೈವಿಕ ಸೂಚನೆ ಎಂದು ಹೇಳುತ್ತಿದ್ದಾರೆ. ಭಗವಾನ್ ಜಗನ್ನಾಥನ ಭಕ್ತರು, ಭಗವಂತನ ವಿಗ್ರಹಕ್ಕೆ ಕೋಳಿಯೊಂದು ನಮಸ್ಕರಿಸುವ ದೃಶ್ಯದಿಂದ ವಿಶೇಷವಾಗಿ ಪ್ರಭಾವಿತರಾಗಿದ್ದಾರೆ. ಜಗನ್ನಾಥನ ವಿಗ್ರಹವನ್ನು ಎತ್ತರದ ವೇದಿಕೆಯ ಮೇಲೆ ಇರಿಸಿ ಹೂವಿನ ಅಲಂಕಾರ ಮಾಡಿ ಪೂಜಿಸಿದ್ದಾರೆ. ಭಗವಂತನ ಸುಂದರವಾದ ವಿಗ್ರಹಕ್ಕೆ ಕೋಳಿಯೊಂದು ತಲೆಬಾಗಿ ನಮಸ್ಕರಿಸಿದೆಯಂತೆ. ಒಂದು ಪಕ್ಷಿಯು ಭಗವಂತನ ಮುಂದೆ ಈ ರೀತಿ ಪ್ರಾರ್ಥಿಸುವುದು ಮತ್ತು ಜಗನ್ನಾಥ ಸ್ವಾಮಿಯ ಆಶೀರ್ವಾದವನ್ನು ಪಡೆಯುವುದು ಎಲ್ಲರಿಗೂ ಪವಾಡವಾಗಿ ಕಂಡಿದೆ.