Viral Video: ಭಗವಾನ್ ಜಗನ್ನಾಥನ ಮುಂದೆ ತಲೆಬಾಗಿ ನಮಸ್ಕರಿಸಿದ ಕೋಳಿ- ಕುಕ್ಕುಟ ಭಕ್ತಿಗೆ ನೆಟ್ಟಿಗರು ಫುಲ್ ಫಿದಾ
ಒಡಿಶಾದಲ್ಲಿ ಭಗವಾನ್ ಜಗನ್ನಾಥನ ಸುಂದರವಾದ ವಿಗ್ರಹದ ಮುಂದೆ ಕೋಳಿಯೊಂದು ತಲೆ ಬಾಗಿಸಿ ನಿಂತ ವಿಡಿಯೊವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದು ನೋಡುಗರಿಗೆ ಆಶ್ಚರ್ಯವನ್ನುಂಟುಮಾಡಿದೆ.

ಭುವನೇಶ್ವರ: ಪ್ರಕೃತಿಯಲ್ಲಿ ಯಾವಾಗಲೂ ಒಂದಲ್ಲ ಒಂದು ವಿಚಿತ್ರವಾದ ಘಟನೆಗಳು ನಡೆಯುತ್ತಿರುತ್ತದೆ. ಜಪಾನ್ ಪ್ರಾಣಿ ಸಂಗ್ರಹಾಲಯದಲ್ಲಿ ಜಿಂಕೆಗಳು ಪ್ರವಾಸಿಗರಿಗೆ ನಮಸ್ಕರಿಸುವ ವಿಡಿಯೊ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅದರ ನಂತರ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಆಶ್ಚರ್ಯಕರವಾದ ವಿಡಿಯೊ ಒಂದು ಹರಿದಾಡುತ್ತಿದೆ(Viral Video).
ಇದರಲ್ಲಿ ಒಡಿಶಾದ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿರುವ ಭಗವಾನ್ ಜಗನ್ನಾಥನ ಸುಂದರವಾದ ವಿಗ್ರಹದ ಮುಂದೆ ಕೋಳಿಯೊಂದು ತಲೆ ಬಾಗಿಸಿ ನಿಂತಿದೆಯಂತೆ. ಕೋಳಿ ನಮಸ್ಕರಿಸಿ ಜಗನ್ನಾಥ ಸ್ವಾಮಿಯ ಆಶೀರ್ವಾದ ಪಡೆಯುವ ದೃಶ್ಯವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಲಾಗಿದ್ದು, ಇದಕ್ಕೆ ಅನೇಕ ನೆಟ್ಟಿಗರು ಫಿದಾ ಆಗಿದ್ದಾರೆ.
View this post on Instagram A post shared by Subhamjyotimahatwo (Jagannath Dham Puri Expert) ODISHA (@subhamjyotimahatwo.puridham)
ವಿಗ್ರಹದ ಮುಂದೆ ಕೋಳಿ ತನ್ನ ತಲೆಯನ್ನು ಭಕ್ತಿಯಿಂದ ನಿಧಾನವಾಗಿ ತಗ್ಗಿಸಿದೆ. ಇದನ್ನು ಅನೇಕ ನೆಟ್ಟಿಗರು ದೈವಿಕ ಸೂಚನೆ ಎಂದು ಹೇಳುತ್ತಿದ್ದಾರೆ. ಭಗವಾನ್ ಜಗನ್ನಾಥನ ಭಕ್ತರು, ಭಗವಂತನ ವಿಗ್ರಹಕ್ಕೆ ಕೋಳಿಯೊಂದು ನಮಸ್ಕರಿಸುವ ದೃಶ್ಯದಿಂದ ವಿಶೇಷವಾಗಿ ಪ್ರಭಾವಿತರಾಗಿದ್ದಾರೆ. ಜಗನ್ನಾಥನ ವಿಗ್ರಹವನ್ನು ಎತ್ತರದ ವೇದಿಕೆಯ ಮೇಲೆ ಇರಿಸಿ ಹೂವಿನ ಅಲಂಕಾರ ಮಾಡಿ ಪೂಜಿಸಿದ್ದಾರೆ. ಭಗವಂತನ ಸುಂದರವಾದ ವಿಗ್ರಹಕ್ಕೆ ಕೋಳಿಯೊಂದು ತಲೆಬಾಗಿ ನಮಸ್ಕರಿಸಿದೆಯಂತೆ. ಒಂದು ಪಕ್ಷಿಯು ಭಗವಂತನ ಮುಂದೆ ಈ ರೀತಿ ಪ್ರಾರ್ಥಿಸುವುದು ಮತ್ತು ಜಗನ್ನಾಥ ಸ್ವಾಮಿಯ ಆಶೀರ್ವಾದವನ್ನು ಪಡೆಯುವುದು ಎಲ್ಲರಿಗೂ ಪವಾಡವಾಗಿ ಕಂಡಿದೆ.
ಈ ವಿಡಿಯೊವನ್ನು 'ಜಗನ್ನಾಥ ಧಾಮ್ ಪುರಿ ಎಕ್ಸ್ಪರ್ಟ್' ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ನಂತರ ಅನೇಕ ನೆಟ್ಟಿಗರು ಇದನ್ನು ಫಾರ್ವರ್ಡ್ ಮಾಡಿದ್ದಾರೆ. ವಿಡಿಯೊ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಕಾಮೆಂಟ್ ವಿಭಾಗದಲ್ಲಿ "ಜೈ ಜಗನ್ನಾಥ್" ಎಂದು ಜಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಸಾಂತಾಕ್ಲಾಸ್ ವೇಷ ಧರಿಸಿ ಚಿಮಣಿಯೊಳಗೆ ಅಡಗಿ ಕುಳಿತ ಡ್ರಗ್ ಡೀಲರ್! ಈ ವಿಡಿಯೊ ಭಾರೀ ವೈರಲ್
"ಇಡೀ ವಿಶ್ವವೇ ಅವನ ಮುಂದೆ ತಲೆ ಬಾಗಬೇಕು. ಏಕೆಂದರೆ ಅವನು ಬ್ರಹ್ಮಾಂಡದ ಸೃಷ್ಟಿಕರ್ತ" ಎಂದು ಒಬ್ಬರು ಬರೆದಿದ್ದಾರೆ. ನಾರಾಯಣ ಯಾವ ರೂಪದಲ್ಲಿ ಬರುತ್ತಾನೆ ಎಂದು ತಿಳಿದಿಲ್ಲ ಭಗವಾನ್ ಜಗನ್ನಾಥನಿಗೆ ಜೈ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.